ವಯನಾಡು ಭೂಕುಸಿತ ದುರಂತಕ್ಕೆ ಕೊಡಗು ಪ್ರವಾಸೋದ್ಯಮ ಕಂಗಾಲು: ಪ್ರವಾಸಿಗರ ಸಂಖ್ಯೆಯಲ್ಲಿ 10 ಲಕ್ಷ ಕೊರತೆ

By Govindaraj SFirst Published Aug 13, 2024, 9:29 PM IST
Highlights

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಜೊತೆಗೆ, ಕೊಡಗಿನ ಪಕ್ಕದಲ್ಲೇ ಇರುವ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದ ಘೋರ ದುರಂತ ಕೊಡಗು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರಿದೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.13): ಕೊಡಗು ಎಂದರೆ ಪ್ರವಾಸಿಗರಿಗೆ ಇನ್ನಿಲ್ಲದ ಅಚ್ಚುಮೆಚ್ಚು. ಹೀಗಾಗಿ ಇಲ್ಲಿಗೆ ವಾರ್ಷಿಕ 37 ರಿಂದ 38 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಜೊತೆಗೆ, ಕೊಡಗಿನ ಪಕ್ಕದಲ್ಲೇ ಇರುವ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದ ಘೋರ ದುರಂತ ಕೊಡಗು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರಿದೆ. ಹೌದು ಕಳೆದ ಬಾರಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡಿದ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಅದರ ಅರ್ಧದಷ್ಟೂ ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿಲ್ಲ. ಹೀಗಾಗಿ ಕೊಡಗಿನ ವ್ಯಾಪಾರ ವಹಿವಾಟಿನ ಮೇಲೆ ಸಾಕಷ್ಟು ಒಡೆತ ಬಿದ್ದಿದೆ. 

Latest Videos

ದೇಶದ ವಿವಿಧ ಭಾಗಗಳಿಂದ ಹಿಡಿದು ವಿದೇಶಗಳಿಂದಲೂ ಬರುವ ಪ್ರವಾಸಿಗರನ್ನು ಇಲ್ಲಿನ ಬೆಟ್ಟ, ಗುಡ್ಡ, ನದಿ ತೊರೆ, ಕೂಲ್ ಆದ ಪ್ರಾಕೃತಿಕ ಸೌಂದರ್ಯ ಇವೆಲ್ಲವೂ ಸೆಳೆದು ಬಿಡುತ್ತವೆ. ಇದೆಲ್ಲವನ್ನೂ ಕಣ್ತುಂಬಿಕೊಂಡು ಸಂಭ್ರಮಿಸಲು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಬಹುತೇಕ ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಕೂಡ ಈ ಬೆಟ್ಟ ಗುಡ್ಡಗಳಲ್ಲೇ ಇವೆ. ಯಾವಾಗ ಕೇರಳ ರಾಜ್ಯದ ವಯನಾಡಿನಲ್ಲಿ ಭೂಕುಸಿತ ಆಯಿತೋ ಅಂದಿನಿಂದ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. 

ಬ್ರೌನ್ ಲೇಸ್ ಉಡುಗೆಯಲ್ಲಿ ನಶೆಯೇರಿಸಿದ ದಿಶಾ ಪಟಾನಿ: ನೋಡುತ ನೋಡುತ ನಿನ್ನನೇ ನೋಡುತ ಎಂದ ಫ್ಯಾನ್ಸ್‌

ಬೆಟ್ಟ ಗುಡ್ಡಗಳಲ್ಲಿ ಇರುವ ಅಬ್ಬಿಫಾಲ್ಸ್, ರಾಜಾಸೀಟು, ಮಾಂದಲ್ ಪಟ್ಟಿ ಸೇರಿದಂತೆ ಜಿಲ್ಲೆಯ 22 ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.  ಪ್ರವಾಸಿಗರು ಬಂದರೂ ಬೆರಳೆಣಿಕೆಯಷ್ಟು ಜನರು ಮಾತ್ರವೇ ಬರುತ್ತಿದ್ದಾರೆ. 2023 ರಲ್ಲಿ ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ತಿಂಗಳ ಅಂತ್ಯದವರೆಗೆ ಸುಮಾರು 25 ರಿಂದ 26 ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿ, ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿದು ಹೋಗಿದ್ದರು. ಆದರೆ 2024 ರ ಜನವರಿಯಿಂದ ಇಲ್ಲಿವರೆಗೆ ಕೇವಲ 13 ರಿಂದ 14 ಲಕ್ಷ ಪ್ರವಾಸಿಗರು ಮಾತ್ರವೇ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದು ಕೊಡಗು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ.

ಅಂದರೆ ಕಳೆದ ವರ್ಷದ ಇದುರೆಗಿನ ಪ್ರವಾಸಿಗರ ಸಂಖ್ಯೆಯಲ್ಲಿ ಬರೋಬ್ಬರಿ 10 ಲಕ್ಷ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ. ಈ ಬಾರಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿದಿದ್ದರಿಂದ ಹಾಗೂ ಚುನಾವಣೆ ಸಂದರ್ಭದಲ್ಲಿಯೂ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಜೊತೆಗೆ ವಯನಾಡಿನ ದುರಂತದ ಬಳಿಕವೂ ಪ್ರವಾಸಿಗರು ಕೊಡಗು ಜಿಲ್ಲೆಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದಿದ್ದಾರೆ. ಹೀಗಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡು ಇರುವ ಸಾವಿರಾರು ವ್ಯಾಪಾರಸ್ಥರು ನಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದ್ದಾರೆ. 

ದೇವಸ್ಥಾನದಲ್ಲಿ ಈಗ ಆಣೆ ಪ್ರಮಾಣಗಳಿಗೆ ಬೆಲೆ ಇಲ್ಲದಂತಾಗಿದೆ: ಶಾಸಕ ಎಚ್.ಸಿ.ಬಾಲಕೃಷ್ಣ

ಪ್ರವಾಸಿಗರ ಕೊರತೆಯಿಂದ ಬಹುತೇಕ ಹೋಂ​ಸ್ಟೇ, ರೆಸಾರ್ಟ್​ಗಳು ಕೂಡ ಇರುವುದೇ ಬೆಟ್ಟಗುಡ್ಡಗಳ ಮೇಲೆ ಆದ್ದರಿಂದ ಅವುಗಳು ಕೂಡ ಖಾಲಿ ಒಡೆಯುತ್ತಿವೆ. ಇದರಿಂದ ಹೋಂಸ್ಟೇ, ರೆಸಾ, ಹೊಟೇಲ್ ಸೇರಿದಂತೆ ವಿವಿಧ ವಿಭಾಗಗಳ ವ್ಯಾಪಾರಸ್ಥರು ನಷ್ಟದಲ್ಲಿ ಇದ್ದೇವೆ ಎನ್ನುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 104 ಪ್ರದೇಶಗಳಲ್ಲಿ ಗುಡ್ಡ ಕುಸಿಯುವ ಮತ್ತು ಪ್ರವಾಹ ಎದುರಾಗಬಹುದು ಎನ್ನುವ ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆ ವರದಿಯೂ ಪ್ರವಾಸಿಗರು ಕೊಡಗಿನತ್ತ ಮುಖ ಮಾಡದೇ ಇರುವಂತೆ ಮಾಡಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಪ್ರಾಕೃತಿಕ ವಿಕೋಪ ಎನ್ನುವುದು ಪ್ರವಾಸೋದ್ಯಮದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿರುವುದಂತು ಸತ್ಯ.

click me!