* ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಚಿಕ್ಕಮಗಳೂರಿನಲ್ಲಿ ಲೋಕಾರ್ಪಣೆ
* ಗೋ ಶಾಲೆಯನ್ನು ಉದ್ಘಾಟಿಸಿದ ಪಶು ಸಂಗೋಪನಾ ಸಚಿವ ಪ್ರಭು ಚೌವಾಣ್
* ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ನಿರ್ಮಿಸಿರುವ ಗೋಶಾಲೆ
ಚಿಕ್ಕಮಗಳೂರು, (ಜೂನ್.27) : ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಾಣ ಮಾಡುವ ಈ ಬಾರಿಯ ಬಜೆಟ್ ಘೋಷಣೆಯಂತೆ ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಇಂದು(ಸೋಮವಾರ) ಲೋಕಾರ್ಪಣೆಗೊಂಡಿದೆ.
ಪಶು ಸಂಗೋಪನಾ ಸಚಿವ ಪ್ರಭು ಚೌವಾಣ್ ಗೋ ಶಾಲೆಯನ್ನು ಉದ್ಘಾಟಿಸಿದರು. ಗೋವುಗಳಿಗೆ ಪೂಜೆ ,ಮೇವು ನೀಡುವ ಮೂಲಕ ಸಚಿವರು ಗೋ ಶಾಲಾ ಕೇಂದ್ರವನ್ನು ಉದ್ಘಾಟನೆ ಮಾಡಿದರು.
undefined
ಎಮ್ಮೆದೊಡ್ಡಿಯಲ್ಲಿ ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ
ರಾಜ್ಯದ ಮೊದಲ ಸರ್ಕಾರಿ ಗೋಶಾಲೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌವಾಣ್ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೊಂದು ಗೋ ಶಾಲೆಯನ್ನು ಆರಂಭಿಸುವ ಬಗ್ಗೆ ಹೇಳಿತ್ತು. ಈ ಬಗ್ಗೆ ಬಜೆಟ್'ನಲ್ಲಿ ಅನುದಾನವನ್ನು ಇರಿಸಲಾಗಿತ್ತು. ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ 11 ಎಕರೆ ಪ್ರದೇಶದಲ್ಲಿರುವ ಗೋ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ.
ರಾಜ್ಯದ ಮೊದಲ ಸರ್ಕಾರಿ ಗೋಶಾಲೆ, ಗೋವು ದತ್ತು ಪಡೆಯಲೂ ಅವಕಾಶ!
ಸುಮಾರು 250-300 ಗೋವುಗಳಿಗೆ ಆಶ್ರಯ ನೀಡುವ ಸೌಲಭ್ಯವಿದೆ.ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಾಣ ಮಾಡುವ ಈ ಬಾರಿಯ ಬಜೆಟ್ ಘೋಷಣೆಯಂತೆ ತಲೆ ಎತ್ತಿರುವ ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಇದಾಗಿದೆ. 53 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಗೋಶಾಲೆಯಲ್ಲಿ ಸುಮಾರು 250ಕ್ಕೂ ಅಧಿಕ ಜಾನುವಾರುಗಳಿಗೆ ಆಶ್ರಯ ನೀಡಬಹುದು. ಸದ್ಯ ಇಲ್ಲಿ ಬೀಡಾಡಿ ಗೋವುಗಳು, ರೈತರಿಗೆ ಸಾಕಲು ಕಷ್ಟವಾಗಿರುವ ಜಾನುವಾರುಗಳು, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಸಾಕಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಎಕರೆಯಲ್ಲಿ ಗೋ ಶಾಲೆ, 8 ಎಕರೆಯಲ್ಲಿ ಮೇವು ಬೆಳೆಯಲು ಜಾಗ ಮೀಸಲಿರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 8 ಖಾಸಗಿ ಗೋ ಶಾಲೆಗಳಿದ್ದು, ಈ ಪೈಕಿ ಕೊಪ್ಪ ತಾಲೂಕಿನಲ್ಲಿ 4, ಚಿಕ್ಕಮಗಳೂರು, ಶೃಂಗೇರಿ, ಕಡೂರು ತಾಲೂಕುಗಳಲ್ಲಿ ತಲಾ ಒಂದು, ಬಾಳೆಹೊನ್ನೂರಿನಲ್ಲಿ ಒಂದು ಗೋ ಶಾಲೆ ಇದೆ. ಇವುಗಳಲ್ಲಿ 1400 ರಾಸುಗಳಿವೆ.ಮುಂದಿನ ದಿನಗಳಲ್ಲಿ ಸರ್ಕಾರಿ ಗೋಶಾಲೆಗಳನ್ನು ಆತ್ಮನಿರ್ಭರ್ ಗೋಶಾಲೆಗಳನ್ನಾಗಿ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಗೋಶಾಲೆಗಳಲ್ಲಿರುವ ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಸೇರಿ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ. ಈ ಮೂಲಕ ಗೋಶಾಲೆಗಳಿಗೆ ಆದಾಯದ ಮೂಲವನ್ನೂ ದಾರಿ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿದೆ.
ಗಮನ ಸೆಳೆದ ಬಂಜಾರ ಸಮುದಾಯ ನೃತ್ಯ, ಹಾಡು
ಸರ್ಕಾರಿ ಗೋ ಶಾಲೆಯ ಉದ್ಘಾಟನೆ ಬಳಿ ಎಮ್ಮೆದೊಡ್ಡಿಯಲ್ಲಿ ನಡೆದ ವೇದಿಕೆಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಬಂಜಾರ ಸಮುದಾಯ ಹಾಡು, ನೃತ್ಯ ಗೆಮನಸೆಳೆಯಿತು. ಜೊತೆಗೆ ಮಹಿಳೆಯರ ತಮ್ಮ ಸಮುದಾಯದ ಸಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಸಭಾಕಾರ್ಯಕ್ರಮದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸಚಿವ ಪ್ರಭುಚೌವಾಣ್ ರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಪ್ರದೇಶವಾದ ಕಡೂರು ತಾಲ್ಲೂಕಿನಲ್ಲಿ ಮೊದಲ ಸರ್ಕಾರಿ ಗೋ ಶಾಲೆ ಆರಂಭಿಸಿದ್ದಕ್ಕೇ ಸಂತಸ ವ್ಯಕ್ತಪಡಿಸಿದರು.
ತದನಂತರ ಮಾತಾಡಿದ ಪಶು ಸಂಗೋಪನೆ ಸಚಿವ ಪ್ರಭು ಚೌವಾಣ್ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಪುಣ್ಯಕೋಟಿ ದತ್ತು ಕಾರ್ಯಕ್ರಮವನ್ನೂ ಜಾರಿಗೆ ತಂದಿದೆ. ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮಾದರಿಯಲ್ಲೇ ಗೋಶಾಲೆಯಲ್ಲಿರುವ ರಾಸುಗಳನ್ನೂ ದತ್ತು ತೆಗೆದುಕೊಳ್ಳಲು ಈ ಕಾರ್ಯಕ್ರಮದಡಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿ ವೇದಿಕೆಯಲ್ಲೇ ರಾಸು ಗಳ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಿದರು. ಇದರ ಮೊದಲ ಭಾಗವಾಗಿ ಶಾಸಕರು, ಅಧಿಕಾರಿಗಳು, ಸಮಾಜಸೇವಕರು ಸಚಿವರ ಸೂಚನೆಯಂತೆ ಎಮ್ಮೆದೊಡ್ಡಿಯಲ್ಲಿ ಇರುವ ಗೋವುಗಳನ್ನು ತಲಾ ಒಂದು ರಾಸುಗಳನ್ನು ದತ್ತು ತೆಗೆದುಕೊಂಡ್ರು. ಇದಕ್ಕಾಗಿ 1 ರಾಸುವಿಗೆ ಒಂದು ವರ್ಷಕ್ಕೆ 11 ಸಾವಿರ ನೀಡಬೇಕಾಗಿದೆ.
ಸರ್ಕಾರಿ ಗೋ ಶಾಲೆ ಆರಂಭಕ್ಕೆ ಸಚಿವರ ಸಂತಸ
ಕಡೂರಿನ ಎಮ್ಮೆದೊಡ್ಡಿಯಲ್ಲಿ ಆರಂಭವಾದ ಮೊದಲ ಸರ್ಕಾರಿ ಗೋ ಶಾಲೆಯನ್ನು ಉದ್ಘಾಟನೆ ಮಾಡಿದ್ದೇಕ್ಕೆ ಸಂತಸವಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌವಾಣ್ ಹರ್ಷ ವ್ಯಕ್ತಪಡಿಸಿದರು.ಈ ಗೋ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಲಾಗಿದ್ದು ಮೇವು, ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮವಹಿಸಿಲಾಗಿದೆ. ಗೋ ಶಾಲೆಗಳಿಗೆ ಬೀಡಾಡಿ ರಾಸುಗಳನ್ನು ಕಳುಸಿಕೊಂಡಬೇಕೆಂದು ಜನರಲ್ಲಿ ಮನವಿ ಮಾಡಿದ್ರು. ಮುಂದಿನ ದಿನಗಳಲ್ಲಿ ಸರ್ಕಾರಿ ಗೋಶಾಲೆಗಳನ್ನು ಆತ್ಮನಿರ್ಭರ್ ಗೋಶಾಲೆಗಳನ್ನಾಗಿ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಗೋಶಾಲೆಗಳಲ್ಲಿರುವ ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಸೇರಿ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ. ಈ ಮೂಲಕ ಗೋಶಾಲೆಗಳಿಗೆ ಆದಾಯದ ಮೂಲವನ್ನೂ ದಾರಿ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿದೆ.ಇದಕ್ಕಾಗಿ ಉತ್ತರಪ್ರದೇಶ ಪ್ರವಾಸ ಕೈಗೊಂಡು ಅದರಂತೆ ಕಾರ್ಯಗತ ಮಾಡಲಾಗುವುದು ಎಂದರು. ಕಸಾಯಿಖಾನೆಗೆ ಗೋವುಗಳನ್ನು ಹೋಗದಂತೆ ಪೊಲೀಸರು, ನಮ್ಮ ಇಲಾಖೆ ಅಧಿಕಾರಿಗಳು ಕ್ರಮತೆಗೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.