ಚಿಕ್ಕಬಳ್ಳಾಪುರ (ಡಿ.08): ಜಿಲ್ಲೆಯ (Chikkaballapura) ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಅಗತ್ಯ ಔಷಧಿಗಳನ್ನು (Medicine) ಒದಗಿಸುವ ಗುರಿಯೊಂದಿಗೆ ಜಿಲ್ಲೆಯಲ್ಲಿನ ಬರೋಬ್ಬರಿ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳ (Primary Health Centre) ಆವರಣದಲ್ಲಿ ಎಂಎಸ್‌ಐಎಲ್ (MSIL) ಸಹಭಾಗಿತ್ವದಲ್ಲಿ ಜನೌಷಧಿ ಮಳಿಗೆ ತೆರೆಯಲು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಹೌದು, ಈಗಾಗಲೇ ಜಿಲ್ಲೆಯ ಜ್ಲಿಲಾಸ್ಪತ್ರೆ (District Hospital) ಸೇರಿದಂತೆ ತಾಲೂಕಿನ ಪ್ರತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಂ.ಎಸ್.ಐ.ಎಲ್ ಮುಖಾಂತರ ಜನೌಷಧಿ (medicine) ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಗ್ರಾಮೀಣ ಜನರಿಗೆ (Rural People) ಇದರ ಉಪಯೋಗ ಸಿಗಬೇಕೆಂಬ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಆವರಣದಲ್ಲಿ ಜನೌಷಧಿ ಕೇಂದ್ರಗಳ ಆರಂಭಕ್ಕೆ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕೇಂದ್ರ ಸರ್ಕಾರ (Govt Of India) ರಾಷ್ಟ್ರೀಯ ಆರೋಗ್ಯ ಸುರಕ್ಷ ಯೋಜನೆಯಡಿ ಸುಮಾರು 7000 ಕ್ಕೂ ಅಧಿಕ ಔಷದಿಗಳನ್ನು ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ಜನೌಷದಿ ಕೇಂದ್ರಗಳ ಮೂಲಕ ವಿತರಿಸುತ್ತಿದೆ. ಜನೌಷದಿ ಕೇಂದ್ರಗಳಲ್ಲಿ ಸಿಗುವ ಔಷದಿಗಳಿಗೆ ಹೆಚ್ಚು ಬೇಡಿಕೆ (Demand) ಇದೆ. ಆದರೆ ಕೇಂದ್ರಗಳನ್ನು ನಡೆಸುವರಿಗೆ ಲಾಭ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಬಹುತೇಕ ಕಡೆ ಜನೌಷಧಿ ಕೇಂದ್ರಗಳನ್ನು ಗುತ್ತಿಗೆ ಪಡೆದ ಎಂಎಸ್‌ಐಲ್ (MSIl) ಮುಚ್ಚುತ್ತಿದೆ. ಇತಂಹ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಅಗತ್ಯವಾದ ಔಷದಿಗಳನ್ನು ಕೈಗೆಟ್ಟುವ ಬೆಲೆಯಲ್ಲಿ ತ್ವರಿತವಾಗಿ ಸಿಗಬೇಕೆಂಬ ಉದ್ದೇಶ ದಿಂದ ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರ ಸೂಚಿಸಿರುವ ಬೆನ್ನಲೇ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿನ 2 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಹೊಸದಾಗಿ ಜನೌಷಧಿ ಮಳಿಗೆ ಪ್ರಾರಂಭಿಸಲು ಅರ್ಹ ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ಹಾಗೂ ಡಿ.ಫಾರ್ಮ ಇಲ್ಲವೇ ಬಿ.ಫಾರ್ಮ (B farma) ವಿದ್ಯಾರ್ಹತೆ ಹೊಂದಿದ ಉದ್ಯೋಗಾ ಕಾಂಕ್ಷಿ ಯುವಕರಿಂದ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆನ್‌ಲೈನ್(online) ಮೂಲಕ ಅರ್ಜಿ ಆಹ್ವಾನಿಸಿದೆ.
ಜನೌಷಧಿ ಕೇಂದ್ರಗಳ ಮೂಲಕ ಅಗತ್ಯ ಔಷದಿಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುವುದರಿಂದ ಜನ ಸಾಮಾನ್ಯರಿಗೆ ತುಂಬ ಅನುಕೂಲ ಆಗುತ್ತೇವೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ 2 ಸಮುದಾಯ ಆರೋಗ್ಯ ಕೇಂಧ್ರ ಹಾಗೂ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಎಂಎಸ್‌ಐಎಲ್ ಮೂಲಕ ಕೇಂದ್ರಗಳನ್ನು ತೆರೆಯಲಾಗುವುದು.
- ಡಾ.ಇಂದಿರಾ ಆರ್.ಕಬಾಡೆ ಜಿಲ್ಲಾ ಆರೋಗ್ಯಾಧಿಕಾರಿ
ಬಡವರಿಗೆ ಹೆಚ್ಚು ಲಾಭ :
ದೇಶದಲ್ಲಿ 8 ಸಾವಿರಕ್ಕೂ ಅಧಿಕ ಜನೌಷಧಿ(Janaushadhi) ಮಳಿಗೆಗಳನ್ನು ಸ್ಥಾಪಿಸಿದ್ದು ಉನ್ನತ ಗುಣಮಟ್ಟದ ಔಷಧಿ ವಿತರಿಸಲಾಗುತ್ತಿದ್ದು, ಬಡವರು, ಮಧ್ಯಮ ವರ್ಗದವರ ಔಷಧ(Medicine) ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ(Mansukh Mandaviya) ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಫಾರ್ಮಸಿಟಿಕಲ್ಸ್ ಆ್ಯಂಡ್ ಮೆಡಿಕಲ್ ಡಿವೈಸ್ ಬ್ಯೂರೋ ಆಫ್ ಇಂಡಿಯಾದಿಂದ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಜನೌಷಧಿ ಮಳಿಗೆ ಕಾರ್ಯಕ್ರಮದಡಿ ನಾಗರಿಕರಿಗೆ ಅಗತ್ಯವಾಗಿರುವ ಔಷಧಿಗಳನ್ನು ಯುವ ಸಮೂಹ ಒಳಗೊಂಡಿರುವ ಜನಮಿತ್ರ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ತಲುಪಿಸುತ್ತಿದ್ದಾರೆ. ಪ್ರತಿ ತಿಂಗಳೂ ಔಷಧ ನಿಯಂತ್ರಕರು ಸೂಕ್ತ ತಪಾಸಣೆ ನಡೆಸುವ ಮೂಲಕ ಜನರಿಗೆ ಅತ್ಯುತ್ತಮ ಸೇವೆ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ರೈತಪರ, ಜನಪರ ಮತ್ತು ಕೈಗಾರಿಕಾ ಸ್ನೇಹಿಯಾಗಿ ಆಡಳಿತ ನಡೆಸುತ್ತಿದೆ ಎಂದು ಬಣ್ಣಿಸಿದರು.
ಜನೌಷಧಿ ಕೇಂದ್ರಕ್ಕೆ ಶಿಫಾರಸು: ದೇಶದಲ್ಲಿಯೇ ಉಡುಪಿ ನಂ.1
ಜನೌಷಧಿ ಮಳಿಗೆಗಳಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಲಾಭವಾಗುತ್ತಿದೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಮಾಸಿಕ ಕನಿಷ್ಠ 4 ಸಾವಿರ ಮೊತ್ತದ ಔಷಧಿ ಅಗತ್ಯವಿದೆ. ಆದರೆ, ಜನೌಷಧಿ ಮಳಿಗೆಗಳಲ್ಲಿ ಕೆಲವೇ ನೂರು ರುಪಾಯಿಯಲ್ಲಿ ಎಲ್ಲ ಔಷಧಿಗಳು ದೊರೆಯುತ್ತಿವೆ. ರಕ್ತದೊತ್ತಡ(BP), ಮಧುಮೇಹ(Diabetes), ಕ್ಯಾನ್ಸರ್(Cancer) ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಜೀವನ ಪರ್ಯಂತ ಔಷಧ ಪಡೆಯುವ ಪರಿಸ್ಥಿತಿ ಇದ್ದು, ಇವರ ಮಾಸಿಕ ವೆಚ್ಚವನ್ನು ಸರ್ಕಾರ(Government) ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದರು.