ಚಾಮರಾಜನಗರ: ಗುಮ್ಮಕ್ಕಲ್ಲು ಗುಡ್ಡದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ..!

By Kannadaprabha News  |  First Published Dec 2, 2023, 10:45 PM IST

ಸ್ಫೋಟಕ ಬಳಕೆಗೂ ಅನುಮತಿ ಪಡೆದಿಲ್ಲ. ಆದರೂ, ಲೀಸ್‌ ರದ್ದಾಗಿದ್ದ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರಿಸಲು ಅನುಮತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ದಾರರು ಮನವಿ ಮಾಡಿಕೊಂಡಿದ್ದಾರೆ. ಆದರೆ, ಲೀಸ್‌ದಾರರಾದ ಸುರೇಶ್‌ ಹಾಗೂ ಮಾದೇಶ (ಹಳೇಯ ಲೀಸ್‌ದಾರರು) ಮಾತ್ರ ವಾರದಿಂದೀಚೆಗೆ ಗುಡ್ಡ ಕುಸಿತ ಪ್ರದೇಶದಲ್ಲಿ ಗುಡ್ಡ ಕುಸಿದಾಗ ಬಿದ್ದ ಕಲ್ಲು ಸಾಗಿಸಿದ್ದಾರೆ.


ಗುಂಡ್ಲುಪೇಟೆ(ಡಿ.03):  ಮಡಹಳ್ಳಿ ಗುಮ್ಮಕ್ಕಲ್ಲು ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಅನುಮತಿ ಇಲ್ಲದೆ ಮತ್ತೆ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಮಡಹಳ್ಳಿ ಸ.ನಂ.೧೯೨ ರಲ್ಲಿ ಗುಡ್ಡ ಕುಸಿತಕ್ಕೂ ಮುನ್ನ ಲೀಸ್‌ ಪಡೆದಿದ್ದ ಸುರೇಶ್‌ ಹಾಗೂ ಮಾದೇಶ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಸಿಕ್ಕಿಲ್ಲ.

ಸ್ಫೋಟಕ ಬಳಕೆಗೂ ಅನುಮತಿ ಪಡೆದಿಲ್ಲ. ಆದರೂ, ಲೀಸ್‌ ರದ್ದಾಗಿದ್ದ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರಿಸಲು ಅನುಮತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ದಾರರು ಮನವಿ ಮಾಡಿಕೊಂಡಿದ್ದಾರೆ. ಆದರೆ, ಲೀಸ್‌ದಾರರಾದ ಸುರೇಶ್‌ ಹಾಗೂ ಮಾದೇಶ (ಹಳೇಯ ಲೀಸ್‌ದಾರರು) ಮಾತ್ರ ವಾರದಿಂದೀಚೆಗೆ ಗುಡ್ಡ ಕುಸಿತ ಪ್ರದೇಶದಲ್ಲಿ ಗುಡ್ಡ ಕುಸಿದಾಗ ಬಿದ್ದ ಕಲ್ಲು ಸಾಗಿಸಿದ್ದಾರೆ. ನೂರಾರು ಅಡಿ ಕ್ವಾರಿಯಲ್ಲಿ ನಿಂತ ಮಳೆಯ ನೀರನ್ನು ಡಿಸೇಲ್‌ ಯಂತ್ರದ ಮೂಲಕ ಮೇಲೆ ತೆಗೆದಿದ್ದಾರೆ. ಅಲ್ಲದೆ ಸ್ಫೋಟಕವನ್ನು ಅಕ್ರಮವಾಗಿ ಬಳಸಿ ಕಲ್ಲನ್ನು ಸ್ಫೋಟಿಸಿದ್ದಾರೆ ಎನ್ನಲಾಗಿದೆ. ಯಾವುದೇ ಅನುಮತಿ ಇಲ್ಲದೆ ಯಾರ ಕೃಪಾ ಕಟಾಕ್ಷದಲ್ಲಿ ನಿಷೇಧಗೊಂಡಿದ್ದ ಕ್ವಾರಿಯಲ್ಲಿ ಬೆಂಚ್‌ ಮಾರ್ಕ್‌ ಹೆಸರಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Tap to resize

Latest Videos

undefined

ಸ್ವಾತಂತ್ರ್ಯ ಬಂದು 76 ವರ್ಷ ಕಳೆದ್ರೂ ಇನ್ನೂ ಗುಡಿಸಲುಗಳಲ್ಲೇ ಬುಡಕಟ್ಟು ಸೋಲಿಗರ ವಾಸ: ಇದೇನಾ ಅಭಿವೃದ್ಧಿ?

ಡಿಜಿಎಂಎಸ್‌ ಅನುಮತಿ ಕೊಟ್ಟಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ದಾರರಿಗೆ ಬೆಂಚ್‌ ಮಾರ್ಕ್‌ ಮಾಡುವುದಕ್ಕೂ ಹೇಳಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಸ್ಪಷ್ಟಪಡಿಸಿದ್ದಾರೆ.
ಸ್ಥಗಿತಗೊಂಡಿದ್ದ ಕ್ವಾರಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಲೀಸ್‌ದಾರರಿಗೆ ಹೇಳುವಂತೆ ಭೂ ವಿಜ್ಞಾನಿ ಯಶಸ್ವಿನಿಗೆ ಸೂಚನೆ ನೀಡಿದ್ದೇನೆ. ಗಣಿಗಾರಿಕೆ ನಡೆಸದಂತೆ ಹೇಳುವೆ ಎಂದರು.

ಉತ್ತರ ಸಿಗುತ್ತಿಲ್ಲ

ಆದರೆ ಈ ಭಾಗದ ಭೂ ವಿಜ್ಞಾನಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಗೊತ್ತಿಲ್ಲವೇ? ಬೆಂಚ್‌ ಮಾರ್ಕ್‌ ಮಾಡಲು ಸ್ಫೋಟಕ ಕೊಟ್ಟಿದ್ದು ಯಾರು? ನಿಷೇಧಿತ ಪ್ರದೇಶದಲ್ಲಿದ್ದ ಕಲ್ಲು ಸಾಗಿಸಿದ್ದು ಯಾರು? ನಿಷೇಧಿತ ಕ್ವಾರಿಯಲ್ಲಿ ಮಳೆಯ ನೀರು ಹೊರ ಹಾಕಿದ್ದು ಯಾರು?ನಿಷೇಧಿತ ಕ್ವಾರಿಯ ಕಲ್ಲು ರಾಯಲ್ಟಿ ಇಲ್ಲದೆ ಮಾರಾಟ ಮಾಡಿದ್ದು ಯಾರು? ಎಂಬ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉತ್ತರ ನೀಡಬೇಕಿದೆ.

ಪಟ್ಟಾ ಭೂಮಿ ನೆಪ

ಮಡಹಳ್ಳಿ ಗುಮ್ಮಕ್ಕಲ್ಲು ಗುಡ್ಡದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ ಬಳಿಕ ಸ್ಥಗಿತಗೊಂಡ ಕ್ವಾರಿಯ ಪಕ್ಕದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನೆಪದಲ್ಲಿ ಹಳೆಯ ಲೀಸ್‌ದಾರರೊಬ್ಬರು ನಿಷೇಧಿತ ಕ್ವಾರಿ ಪ್ರದೇಶದಲ್ಲಿ ಕಲ್ಲು ತೆಗೆಯುತ್ತಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ: 7 ವರ್ಷ ಕಳೆದ್ರೂ ನಿವೇಶನ ಕಳೆದುಕೊಂಡವರಿಗೆ ಸಿಗದ ಪರಿಹಾರ: ಜಿಲ್ಲಾಡಳಿತ ವಿರುದ್ಧ ಸಂತ್ರಸ್ಥರ

ಪಟ್ಟಾ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರು ನಿಷೇಧಿತ ಕ್ವಾರಿಯ ಕಲ್ಲು ಸಾಗಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವ ಕೆಲಸ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಡುವುದೇ ಕಾದು ನೋಡಬೇಕು.

ಡಿಜಿಎಂಎಸ್‌ ಪರ್ಮಿಷನ್‌ ಸಿಕ್ಕಿದ ಹಿನ್ನಲೆ ಬೆಂಚ್‌ ಮಾರ್ಕ್‌ ಮಾಡಲು ಕೆಲಸ ಶುರು ಮಾಡಿರುವುದು ನಿಜ. ನೀವು ಪತ್ರಿಕೆಯಲ್ಲಿ ಬರೆಯೋದು ಬೇಡ, ಕೆಲಸ ನಿಲ್ಲಿಸುತ್ತೇನೆ ಎಂದು ಹಳೆಯ ಲೀಸ್‌ದಾರ ಮಾದೇಶ ತಿಳಿಸಿದ್ದಾರೆ.  

click me!