ನವರಾತ್ರಿ, ಆಯುಧಪೂಜೆ ಹಿನ್ನೆಲೆ ಹೂಗಳಿಗೆ ಭಾರೀ ಬೇಡಿಕೆ

By Kannadaprabha News  |  First Published Oct 22, 2023, 12:00 AM IST

ಹೂವಿನ ವ್ಯಾಪಾರದಿಂದ ಜೀವನ ನಿರ್ವಹಣೆ ಮಾಡುವ ಅನೇಕ ಕುಟುಂಬಗಳಿವೆ. ಮಳೆಗಾಲದಲ್ಲಿ ಹೂವಿನ ಬೇಡಿಕೆ ಕಡಿಮೆ ಇರುವುದರಿಂದ ದರ ಕುಸಿತ ಸಹಜ. ಹಬ್ಬಗಳು ಆರಂಭವಾಗುತ್ತಿದ್ದಂತೆ ಹೂಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ನವರಾತ್ರಿ ಹಾಗೂ ಆಯುಧ ಪೂಜೆ ಹಿನ್ನೆಲೆಯಲ್ಲಿ ಎಲ್ಲೆಡೆ ಹಣ್ಣು, ಹೂಗಳ ಖರೀದಿ ಭರಾಟೆ ಜೋರಾಗಿದ್ದು, ಬೆಳೆಗಾರರು, ವ್ಯಾಪಾರಿಗಳು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.


ರಾಂ ಅಜೆಕಾರು

ಕಾರ್ಕಳ(ಅ.22):  ನವರಾತ್ರಿ ಹಿನ್ನೆಯಲ್ಲಿ ಹೂಗಳಿಗೆ ಭಾರಿ ಬೇಡಿಕೆ ಬಂದಿದೆ. ಈ ಬಾರಿ ಹೂವಿಗೆ ಉತ್ತಮ ಬೇಡಿಕೆ ಬಂದಿರುವ ಕಾರಣ ಕೃಷಿಕರು ಸೇರಿದಂತೆ ವ್ಯಾಪಾರಿಗಳಲ್ಲಿ ಸಂತಸ ತಂದಿದೆ. ಹೂವಿನ ವ್ಯಾಪಾರದಿಂದ ಜೀವನ ನಿರ್ವಹಣೆ ಮಾಡುವ ಅನೇಕ ಕುಟುಂಬಗಳಿವೆ. ಮಳೆಗಾಲದಲ್ಲಿ ಹೂವಿನ ಬೇಡಿಕೆ ಕಡಿಮೆ ಇರುವುದರಿಂದ ದರ ಕುಸಿತ ಸಹಜ. ಹಬ್ಬಗಳು ಆರಂಭವಾಗುತ್ತಿದ್ದಂತೆ ಹೂಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ನವರಾತ್ರಿ ಹಾಗೂ ಆಯುಧ ಪೂಜೆ ಹಿನ್ನೆಲೆಯಲ್ಲಿ ಎಲ್ಲೆಡೆ ಹಣ್ಣು, ಹೂಗಳ ಖರೀದಿ ಭರಾಟೆ ಜೋರಾಗಿದ್ದು, ಬೆಳೆಗಾರರು, ವ್ಯಾಪಾರಿಗಳು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

Latest Videos

undefined

ಕಾರ್ಕಳ, ಹೆಬ್ರಿ, ಉಡುಪಿಯ ಹೂವಿನ ಮಾರುಕಟ್ಟೆಗಳಲ್ಲಿ ಸೇವಂತಿಗೆ, ಕಾಕಡ, ಜೀನಿಯಾ ಹೂವುಗಳು ಮೊಳವೊಂದಕ್ಕೆ ಐವತ್ತು ರು.ವರೆಗೆ ಮಾರಾಟವಾಗುತ್ತಿದೆ. ಆಯುಧ ಪೂಜೆಯ ದಿನ ನೂರು ರುಪಾಯಿ ವರೆಗೆ ಏರುವ ಸಾಧ್ಯತೆಯೂ ಇದೆ.

HARIPRIYA-VASISHTA SIMHA: ಕೃಷ್ಣಮಠದಲ್ಲಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ-ಹರಿಪ್ರಿಯಾ!

ಶಂಕರಪುರ ಮಲ್ಲಿಗೆ (ಉಡುಪಿ ಮಲ್ಲಿಗೆ) ಅಟ್ಟೆಗೆ ಹಳೆದರ 1500- 1900 ರುಪಾಯಿ ಇತ್ತು. ಈಗ ಅಟ್ಟೆಗೆ 2000 - 2400 ರುಪಾಯಿವರೆಗೆ ಮಾರಾಟವಾಗುತ್ತಿದೆ. ಕಳೆದ ಬಾರಿ ಸೇವಂತಿಗೆ ಕುಚ್ಚಿಯೊಂದಕ್ಕೆ 1500- 2000 ರು.ರೆಗೆ ಮಾರಾಟವಾಗಿದ್ದು ಈ ಬಾರಿ ಕೊಂಚ ಇಳಿಕೆಯಾಗಿದ್ದು 1600 ರಿಂದ 1800 ದರಕ್ಕೆ ಮಾರಾಟವಾಗುತ್ತಿದೆ, ಜೀನ್ಯಾ ಕಳೆದ ಬಾರಿ 1000 -1500 ಮಾರಟವಾಗುತ್ತಿತ್ತು. ಈ ಬಾರಿ 2000 ದಿಂದ 3000 ರು. ವರೆಗೆ ಮಾರಾಟವಾಗುತ್ತಿದೆ.

ಹಿಂಗಾರ ಒಂದಕ್ಕೆ 200 ರಿಂದ 500 ವರೆಗೆ ದರವಿದೆ. ಕೇದಗೆ ಕಟ್ಟು ಒಂದಕ್ಕೆ 200 ರಿಂದ 300 ರು. ವರೆಗೆ ಮಾರಾಟ ವಾಗುತ್ತಿದೆ. ಭಟ್ಕಳ ಮಲ್ಲಿಗೆ 1200- 1400 ರು. ವರೆಗೆ ಮಾರಾಟವಾಗುತ್ತಿದೆ. ಕಾಕಡ 900 ರಿಂದ 1200 ರುಪಾಯಿ ವರೆಗೆ ಮಾರಾಟವಾಗುತಿದ್ದು ದರವು ಯಥಾಸ್ಥಿತಿ ಕಾಯ್ದು ಕೊಂಡಿದೆ.

ಈ ಬಾರಿಯ ಮಳೆ ಕಡಿಮೆ ಆಗಿದ್ದರಿಂದ ನಿರೀಕ್ಷಿತ ಹೂವಿನ ಲಭ್ಯತೆ ಇಲ್ಲ ಹಾಗೂ ಬೇಡಿಕೆಯೂ ಹೆಚ್ಚಿದೆ. ಪಾವಗಡ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ, ಮೈಸೂರು ಕಡೆಗಳಲ್ಲಿ ಹೂವುಗಳನ್ನು ತರಿಸುತಿದ್ದೇವೆ. ಹೂವಿನ ಬೆಲೆ ಏರಿಕೆ ಕಂಡಿದೆ ಎಂದು ಹೂ ವ್ಯಾಪಾರಸ್ಥರಾದ ರಾಜೇಶ್ ಬೈಲೂರು ತಿಳಿಸಿದ್ದಾರೆ. 

click me!