ಮಂಗಳೂರಿನಲ್ಲಿ ಬೃಹತ್‌ ಸ್ಫೋಟಕ ದಾಸ್ತಾನು : ಸುಳಿವು ನೀಡಿದ ನಾಯಿ ಹತ್ಯೆ

By Kannadaprabha NewsFirst Published Aug 17, 2021, 7:46 AM IST
Highlights
  • ಭಾರಿ ಅಕ್ರಮ ಸ್ಫೋಟಕ ವಸ್ತುಗಳ ದಾಸ್ತಾನು ಪತ್ತೆ ಹಚ್ಚಿರುವ ಪೊಲೀಸರು
  • ಅಕ್ರಮ ಸ್ಫೋಟಕ ವಸ್ತುಗಳ ದಾಸ್ತಾನು ಮಾಡಿದ್ದ ಒಬ್ಬ ಆರೋಪಿಯ ಬಂಧನ 

ಮಂಗಳೂರು (ಆ.17):  ಅಕ್ರಮ ಸ್ಫೋಟಕ ವಸ್ತುಗಳ ದಾಸ್ತಾನು ಪತ್ತೆ ಹಚ್ಚಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ(50) ಬಂಧಿತ ಆರೋಪಿ. ಈತನಿಂದ 400 ಕೆಜಿ ಸಲ್ಫರ್‌ ಪೌಡರ್‌, 8,350 ಕೆ.ಜಿ. ಪೊಟ್ಯಾಶಿಯಂ ನೈಟ್ರೇಟ್‌, 50 ಕೆಜಿ ಬೇರಿಯಂ ನೈಟ್ರೇಟ್‌, 395 ಕೆಜಿ ಪೊಟಾಷಿಯಂ ಕ್ಲೋರೈಟ್‌, 260 ಕೆ.ಜಿ. ಅಲ್ಯುಮಿನಿಯಂ ಪೌಡರ್‌, 22 ಏರ್‌ ಪಿಸ್ಟರ್‌ ಪಿಲೆಟ್ಸ್‌, 30 ಕೆ.ಜಿ. ಲೀಡ್‌ ಬಾಲ್ಸ್‌, 240 ಕೆಜಿ ಕಲ್ಲಿದ್ದಲು ಹಾಗೂ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 1.11 ಲಕ್ಷ ರು. ಎನ್ನಲಾಗಿದೆ.

Latest Videos

ಕೆಆರ್‌ಎಸ್‌ಗೆ ಈಗ ಸ್ಫೋಟಕಗಳ ಕಂಟಕ : ಪೊಲೀಸರೆ ಭಾಗಿ..?

ಮಂಗಳೂರಿನ ಬಂದರು ಅಜೀಜುದ್ದೀನ್‌ ರಸ್ತೆಯಲ್ಲಿರುವ ಗಾಂಧಿ ಸನ್ಸ್‌ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಸಂಗ್ರಹಿಸಲಾಗಿತ್ತು. ಆನಂದ ಗಟ್ಟಿಗನ್‌ಶಾಪ್‌ ನಡೆಸುತ್ತಿದ್ದು, ಇದಕ್ಕೆ ಲೈಸೆನ್ಸ್‌ ಹೊಂದಿದ್ದಾನೆ. ಆದರೆ ಪತ್ತೆಯಾಗಿರುವ ಸ್ಫೋಟಕ ಮಾರಲು ಅನುಮತಿ ಇರಲಿಲ್ಲ.

ಸುಳಿವು ನೀಡಿದ ನಾಯಿ ಕೊಲೆ!:  ಮಂಗಳೂರಿನ ಶಿವಭಾಗ್‌ ಸಮೀಪ ಜು.2ರ ತಡರಾತ್ರಿ ಬೀದಿನಾಯಿಗೆ ಗುಂಡು ಹೊಡೆದು ಕೊಲ್ಲಲಾಗಿತ್ತು. ಆರೋಪಿ ಅನಿಲ್‌ ಸೋನ್ಸ್‌ನನ್ನು ವಿಚಾರಣೆ ನಡೆಸಿದಾಗ ಗನ್‌ಗೆ 0.22 ಬುಲೆಟ್‌ ಬಳಕೆ ಮಾಡಿರುವುದು ಗೊತ್ತಾಗಿದೆ. ಈ ರೀತಿಯ ಬುಲೆಟ್‌ ಸಿಗುವ ಅಂಗಡಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಭಾರೀ ಸ್ಫೋಟಕ ಪತ್ತೆಯಾಗಿವೆ.

click me!