ನಾಲ್ಕು ವರ್ಷದಿಂದ ನನ್ನ ಕೊಲೆಗೆ ಸಂಚು ನಡೀತಿದೆ; ಆದ್ರೆ, ನನ್ನ ಆಪ್ತನ ಮೇಲೆ ಅಟ್ಯಾಕ್ ಆಗಿದೆ: ಹೆಚ್.ಡಿ. ರೇವಣ್ಣ

By Sathish Kumar KH  |  First Published Jan 14, 2024, 1:16 PM IST

ನಾಲ್ಕು ವರ್ಷದಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಕೊಲೆ ಮಾಡಲು ಸಂಚು ನಡೆದಿತ್ತು. ಆದರೆ, ನನ್ನ ಆಪ್ತ ಅಶ್ವತ್ಥನ ಕಾರನ್ನು ಅಡ್ಡಗಟ್ಟಿ ಅಟ್ಯಾಕ್‌ ಮಾಡಿದ್ದಾರೆ.


ಹಾಸನ (ಜ.14):  ನಾಲ್ಕು ವರ್ಷದಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಕೊಲೆ ಮಾಡಲು ಸಂಚು ನಡೆದಿತ್ತು. ಆದರೆ, ನನ್ನ ಆಪ್ತ ಅಶ್ವತ್ಥನ ಕಾರನ್ನು ಅಡ್ಡಗಟ್ಟಿ ಅಟ್ಯಾಕ್‌ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆತಂಕಕಾರಿ ವಿಚಾರವನ್ನು ಹೊರ ಹಾಕಿದ್ದಾರೆ.

ಭಾನುವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಟಾರ್ಗೆಟ್ ಮಾಡಿದ್ದಾರೆ, ನನ್ನ ಕೊಲೆಗೂ ಸಂಚು ನಡೆದಿತ್ತು. 4 ವರ್ಷಗಳಿಂದ ನನ್ನ ವಿರುದ್ದ ಸಂಚು ನಡೀತಿದೆ. ನನ್ನ ಆಪ್ತ ಅಶ್ವತ್ಥ ಮೇಲೆ ಅಟ್ಯಾಕ್ ಆದಾಗ ನನ್ನನ್ನು ಟಾರ್ಗೆಟ್ ಮಾಡಿದ್ದರು. ಇಂತಹ ಬ್ಲಾಕ್ ಮೆಲ್ ರಾಜಕೀಯಕ್ಕೆ ಕಾನೂನಿನ ಪ್ರಕಾರ ಉತ್ತರ ಕೊಡುತ್ತೇನೆ. ಅಶ್ವತ್ಥ ಕಾರು ಅಡ್ಡಗಟ್ಟಿ ಕೊಲೆಯತ್ನ ಪ್ರಯತ್ನ ನಡೆದಿತ್ತು. ನನ್ನನು ಮುಗಿಸಲು ಪ್ಲಾನ್ ನಡೆದಿತ್ತು. ನಾನು ಯಾವುದಕ್ಕೂ ಹೆದರೋದಿಲ್ಲ. ಇವರನ್ನು ಕಾನೂನಿನ ಮೂಲಕ ಎದುರಿಸುವೆ ಎಂದು ಹೇಳಿದರು.

Tap to resize

Latest Videos

ಹಾಸನ: ರೇವಣ್ಣ ಆಪ್ತನ ಹತ್ಯೆಗೆ ಯತ್ನ, ಗುತ್ತಿಗೆದಾರನಿಂದ ಮಾಹಿತಿ ಪಡೆದ ಎಸ್‌ಪಿ ಸುಜೀತಾ

ಈ ಜಿಲ್ಲೆಯೊಳಗೆ ಇಲ್ಲಿಯವರಲ್ಲ, ಬೇರೆ ಕಡೆಯವರು ಬಂದು ಇಲ್ಲಿ ಅಟ್ಯಾಕ್‌ ಮಾಡುತ್ತಿದ್ದಾರೆ. ಅವರಿಗೆ ಯಾರಾರು ದುಡ್ಡು ಕೊಡ್ತಾರೆ, ಯಾರಾರು ಏನು ಮಾಡ್ತಾರೆ ಎನ್ನುವುದು ನನಗೆ ಗೊತ್ತಿದೆ. ಅದ್ಯಾವಂದು ಆಸ್ತಿ ಬರೆಸಿಕೊಂಡಿದ್ದೀನಿ, ಈ ಜಿಲ್ಲೆಯೊಳಗೆ ಜನ ಸಾಮಾನ್ಯರಿಗೆ ತೊಂದರೆ ಮಾಡುವಂತದ್ದು ನಾನು ಏನು ಮಾಡಿದ್ದೀನಿ. ನಾವೆಲ್ಲ ಈ ತರಹದ ಕೆಲಸ ಮಾಡುವುದಕ್ಕೆ ಆಗುತ್ತೇನ್ರಿ? ಕೆಲವು ರಾಜಕಾರಣಿಗಳು ದೇವೇಗೌಡನ ಕುಟುಂಬವನ್ನು ಎದುರಿಸಲಿಕ್ಕಾಗದೇ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

Hassan: ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಪ್ರಕರಣ ಸಿಐಡಿಗೆ ವರ್ಗಾಯಿಸಿ ಎಡಿಜಿಪಿ ಆದೇಶ

ಇದು ಬ್ಲ್ಯಾಕ್‌ ಮೇಲ್‌ ರಾಜಕಾರಣವಾಗಿದೆ. ಇಂಥವರಿಗೆ ರಾಷ್ಟ್ರೀಯ ಪಕ್ಷಗಳು ಹಿಂದುಗಡೆಯಿಂದ ಸಪೋರ್ಟ್‌ ಮಾಡುತ್ತಿದ್ದಾರೆ. ನಾನು ಯಾವುದೇ ಬೇನಾಮಿ ಆಸ್ತಿ ಮಾಡಿದ್ದರೂ ಸರ್ಕಾರ ತನಿಖೆ ಮಾಡಿ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ. ನಾನಾಗಲೀ, ಸ್ವರೂಪ್‌ ಆಗಲೀ ಅಥವಾ ನಮ್ಮ ಕುಟುಂಬದವರು ಯಾರಾದರೂ ಬೇನಾಮಿ ಆಸ್ತಿ ಮಾಡಿದ್ದರೆ ತನಿಖೆ ಮಾಡಲಿ. ನನ್ನ ಮೇಲೆ, ನನ್ನ ಮಗನ ಮೇಲೆ ಕೇಸ್ ಹಾಕುತ್ತಿದೆ. ಇಂಥವರನ್ನು ರಾಷ್ಟ್ರೀಯ ಪಕ್ಷ ಬಿಜೆಪಿ ಇಟ್ಟುಕೊಂಡಿದೆ. ಆದರೂ, ನಾನು ಬಿಜೆಪಿ ರಾಷ್ಟ್ರೀಯ ಪಕ್ಷದ ನಾಯಕರು ಬಂದಾಗ ಗೌರವ ಕೊಡುತ್ತಿದ್ದೇನೆ ಎಂದು ಹೇಳಿದರು.

click me!