ಜೀವನದಿ ಕಾವೇರಿ ಒಡಲಿಗೆ ಸೇರುತ್ತಿದೆ ಶುಂಠಿತ್ಯಾಜ್ಯ ನೀರು: ಶುದ್ಧೀಕರಣ ಘಟಕಗಳಿಂದ ಕಾವೇರಿಗೆ ಕಂಟಕ

By Govindaraj S  |  First Published Dec 23, 2024, 9:23 PM IST

ಕೊಡಗು ಜಿಲ್ಲೆಯಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುವ ಕಾವೇರಿ ಜೀವನದಿ ಎಂದೇ ಖ್ಯಾತಿ ಪಡೆದಿದೆ. ಆದರೆ ಅದೇ ಜೀವನದಿ ಕಳೆದ ಹಲವು ವರ್ಷಗಳಿಂದ ರೋಗ ರುಜಿನಗಳನ್ನು ತಂದೊಡ್ಡುವ ನದಿಯಾಗಿ ಬದಲಾಗುತ್ತಿದೆ ಎನ್ನುವುದು ಆತಂಕಕಾರಿ ಸಂಗತಿ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಡಿ.23): ಕೊಡಗು ಜಿಲ್ಲೆಯಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುವ ಕಾವೇರಿ ಜೀವನದಿ ಎಂದೇ ಖ್ಯಾತಿ ಪಡೆದಿದೆ. ಆದರೆ ಅದೇ ಜೀವನದಿ ಕಳೆದ ಹಲವು ವರ್ಷಗಳಿಂದ ರೋಗ ರುಜಿನಗಳನ್ನು ತಂದೊಡ್ಡುವ ನದಿಯಾಗಿ ಬದಲಾಗುತ್ತಿದೆ ಎನ್ನುವುದು ಆತಂಕಕಾರಿ ಸಂಗತಿ. ಹೌದು ಕಾವೇರಿ ನದಿ ತವರು ಜಿಲ್ಲೆ ಕೊಡಗಿನಲ್ಲಿಯೇ ಕಲುಷಿತಗೊಳ್ಳುತ್ತಿದ್ದಾಳೆ. ಹೀಗೆ ಕಲುಷಿತಗೊಳ್ಳುವುದಕ್ಕೆ ಕಾವೇರಿ ನದಿ ತಟದಲ್ಲೇ ದಿನವೊಂದರಲ್ಲೇ ಲಕ್ಷಾಂತರ ಲೋಡ್ ಶುಂಠಿಯನ್ನು ಶುದ್ಧಿಕರಣ ಮಾಡುವ ಹತ್ತಾರು ಘಟಕಗಳು ಅದಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

Tap to resize

Latest Videos

undefined

ಅದರಲ್ಲೂ ಮೈಸೂರು ಕೊಡಗು ಗಡಿಭಾಗವಾಗದ ಕುಶಾಲನಗರ ತಾಲ್ಲೂಕಿನಲ್ಲಿ ಕುಶಾಲನಗರದಲ್ಲಿ ಆರಂಭವಾಗಿ ಶಿರಂಗಾಲದವರೆಗೆ 10 ಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಒಂದೊಂದು ಘಟಕವೂ ನಿತ್ಯ ನಾಲ್ಕಾರು ಲೋಡ್ ಶುಂಠಿಯನ್ನು ಶುದ್ಧೀಕರಣ ಮಾಡುತ್ತಿವೆ. ಹೀಗೆ ಶುದ್ಧೀಕರಣ ಮಾಡಿದ ಅದರ ತ್ಯಾಜ್ಯದ ನೀರು ನೇರವಾಗಿ ಕಾವೇರಿ ಒಡಲನ್ನು ಸೇರುತ್ತಿದೆ. ಸಹಜವಾಗಿಯೇ ಶುಂಠಿ ಬೆಳೆಯಲು ಎತ್ತೇಚ್ಛವಾಗಿ ಕೀಟನಾಶಕ ಮತ್ತು ಗೊಬ್ಬರಗಳನ್ನು ಬಳಸಲಾಗುತ್ತಿದೆ. ಈ ಕೀಟನಾಶಕಗಳನ್ನು ಬಳಸಿ ಬೆಳೆದ ಶುಂಠಿಯನ್ನು ಕಾವೇರಿ ನದಿ ತಟದಲ್ಲಿ ಶುದ್ಧೀಕರಣ ಮಾಡಲಾಗುತ್ತಿದ್ದು, ಅಲ್ಲಿ ಉತ್ಪಾದನೆಯಾಗುವ ಲಕ್ಷಾಂತರ ಲೀಟರ್ ತ್ಯಾಜ್ಯದ ನೀರು ನೇರ ಕಾವೇರಿ ಒಡಲಿಗೆ ಸೇರುತ್ತಿದೆ. 

ಪರಿಸರ ರಕ್ಷಿಸಿದರೆ ವಿಶ್ವದಲ್ಲೇ ಭಾರತ ನ.1: ಯು.ಟಿ.ಖಾದರ್

ಇದನ್ನು ಯಾರೂ ನಿಯಂತ್ರಿಸುವವರೇ ಇಲ್ಲ ಇನ್ನುವಂತೆ ಆಗಿದೆ. ಕುಶಾಲನಗರ ಸಮೀಪದಲ್ಲೇ ಇರುವ ಮೈಸೂರು ಜಿಲ್ಲೆಯ ಗಡಿ ಗ್ರಾಮವಾಗಿರುವ ಕೊಪ್ಪದಲ್ಲೂ ಎರಡು ಶುಂಠಿ ಶುದ್ಧೀಕರಣ ಘಟಕಗಳಿವೆ. ಅವುಗಳೂ ಕೂಡ ಶುಂಠಿ ಶುದ್ಧೀಕರಿಸಿದ ನೀರನ್ನು ನೇರವಾಗಿ ಕಾವೇರಿ ನದಿಗೆ ಬಿಡುತ್ತಿವೆ. ಇದಕ್ಕೆ ಯಾವುದೇ ಅಡೆತಡೆಗಳೇ ಇಲ್ಲ ಎನ್ನುವಂತೆ ಆಗಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ, ಕಣಿವೆ, ಹೆಬ್ಬಾಲೆ ಮತ್ತು ಶಿರಂಗಾಲ ಗ್ರಾಮಗಳಲ್ಲೂ ಶುಂಠಿ ಶುದ್ಧೀಕರಣ ಘಟಕಗಳು ಶುಂಠಿಯನ್ನು ಶುದ್ಧೀಕರಿಸಿದ ನೀರನ್ನು ನೇರವಾಗಿ ಕಾವೇರಿ ನದಿಗೆ ಬಿಡುತ್ತಿವೆ. ಇದು ಜಗತ್ ಜಾಹೀರಾಗಿ ನಡೆಯುತ್ತಿದ್ದರೂ ಸಂಬಂಧಿಸಿ ಗ್ರಾಮದ ಪಂಚಾಯಿತಿಗಳು, ತಾಲ್ಲೂಕು ಆಡಳಿತಗಳು ಕಣ್ಮುಚ್ಚಿ ಕುಳಿತ್ತಿವೆ. 

ಮುಂದೆ ಈ ನೀರು ಕೆಆರ್ಎಸ್ ಜಲಾಶಯವನ್ನು ಸೇರಿ ರಾಜ್ಯದ ಕೋಟ್ಯಂತರ ಜನರಿಗೆ ಕುಡಿಯುವ ನೀರಾಗಿ ಪೂರೈಕೆಯಾಗುತ್ತಿದೆ. ಹೀಗಾಗಿ ಇದು ರೋಗವನ್ನು ತಂದೊಡ್ಡುವುದು ಖಚಿತ. ಇದು ಒಂದೆಡೆಯಾದರೆ ಮತ್ತೊಂದೆಡೆ ಕಾವೇರಿ ನದಿಗೆ ಪಟ್ಟಣ, ನಗರಗಳ ಪ್ರತಿಯೊಂದು ಕೊಳಚೆ ತ್ಯಾಜ್ಯದ ನೀರು ಕೂಡ ಕಾವೇರಿ ನದಿಗೆ ಸೇರುತ್ತಿದೆ. ಇದಕ್ಕೂ ಕೂಡ ಯಾವುದೇ ಕಡಿವಾಣ ಇಲ್ಲ. ಕುಶಾಲನಗರದ ಮಾರುಕಟ್ಟೆ ಹಿಂಭಾಗದಲ್ಲಿ ಕಾವೇರಿ ನದಿಗೆ ಚರಂಡಿಯೊಂದರಿಂದ ಪಟ್ಟಣದ ಪ್ರತಿಯೊಂದು ತ್ಯಾಜ್ಯದ ನೀರು ನೀರುತ್ತಿದೆ. ಈಗಾಗಲೇ ಕಾವೇರಿ ನದಿಗೆ ಯಾವುದೇ ತ್ಯಾಜ್ಯದ ನೀರು ಸೇರದಂತೆ ನೋಡಿಕೊಳ್ಳುವಂತೆ ರಾಜ್ಯ ಉಚ್ಛನ್ಯಾಯಾಲಯ ಕೂಡ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಭತ್ತ ಕಟಾವು ಮಾಡಲು ಕೂಲಿ ಕಾರ್ಮಿಕರು ಇಲ್ಲ.. ಯಂತ್ರವು ಇಲ್ಲ: ಮತ್ತೊಂದೆಡೆ ಮಾರುಕಟ್ಟೆಯ ಸಮಸ್ಯೆ!

ಕೆಲವೆಡೆ ಚರಂಡಿಯ ಮೂಲಕ ಕಾವೇರಿ ನದಿಗೆ ಕೊಳಚೆ ಹೋಗಿ ಸೇರದಂತೆ ನಿಯಂತ್ರಿಸುತ್ತಿದ್ದರೂ ಮತ್ತೆ ಕೆಲವೆಡೆ ತ್ಯಾಜ್ಯದ ನೀರು ಕಾವೇರಿ ಒಡಲು ಸೇರುತ್ತಿದೆ. ಹೀಗಾಗಿಯೇ ಬೇಸಿಗೆ ಬಂತೆಂದರೆ ಕಾವೇರಿ ನೀರು ಕೊಡಗು ಜಿಲ್ಲೆಯಲ್ಲಿ ಸಿ ಗುಣಮಟ್ಟಕ್ಕೆ ಬಂದು ತಲುಪಿತ್ತಿದೆ. ಅಂದರೆ ಈ ನೀರನ್ನು ಕಾಡು ಪ್ರಾಣಿಗಳು ಕೂಡ ಕುಡಿಯಲು ಯೋಗ್ಯವಲ್ಲ ಎನ್ನುವ ಹಂತಕ್ಕೆ ಕಲುಷಿತಗೊಂಡಿರುತ್ತದೆ. ಒಟ್ಟಿನಲ್ಲಿ ಕಾವೇರಿ ನದಿ ದಂಡೆಯಲ್ಲಿ ಇರುವ ಹತ್ತಾರು ಶುಂಠಿ ಶುದ್ಧೀಕರಣ ಘಟಕಗಳ ತ್ಯಾಜ್ಯದ ನೀರು ಮತ್ತು ಇತರೆ ತ್ಯಾಜ್ಯದ ನೀರು ಕಾವೇರಿಗೆ ಸೇರದಂತೆ ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ.

click me!