ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಕಳೆದ 2021-22ನೇ ಸಾಲಿನಲ್ಲಿ ಬರೋಬ್ಬರಿ 51.44 ಲಕ್ಷ ರು, ಮೊತ್ತದಷ್ಟುಅಕ್ರಮಗಳು ನಡೆದಿರುವುದು ಸಾಮಾಜಿಕ ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ (ಅ.08): ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಕಳೆದ 2021-22ನೇ ಸಾಲಿನಲ್ಲಿ ಬರೋಬ್ಬರಿ 51.44 ಲಕ್ಷ ರು, ಮೊತ್ತದಷ್ಟುಅಕ್ರಮಗಳು ನಡೆದಿರುವುದು ಸಾಮಾಜಿಕ ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ.
ಹೌದು, ನರೇಗಾ (NREGA) ಯೋಜನೆಯಡಿ ನಡೆದಿರುವ ಪ್ರತಿ ಕಾಮಗಾರಿಯನ್ನು ಸಾರ್ವಜನಿಕರ ದೂರಿನ ಮೇರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಳಪಡಿಸಲಾಗಿದ್ದು ಈ ವೇಳೆ 2021-22ನೇ ಸಾಲಿನಲ್ಲಿ ಜಿಲ್ಲಾದ್ಯಂತ 51.44 ಲಕ್ಷ ರು, ಅಕ್ರಮಗಳು ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ.
ವಸೂಲಾತಿಗೆ ಆದೇಶ:
ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಗಳು ಗ್ರಾಪಂ ಮಟ್ಟದಲ್ಲಿ ಸಾಕಷ್ಟುಅಕ್ರಮಗಳಿಗೆ ಅಸ್ಪದ ನೀಡಲಾಗಿದೆಯೆಂಬ ಆರೋಪದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ (Chikkaballapura) ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಳಪಡಿಸಿದಾಗ ಭಾರೀ ಮೊತ್ತದ ಅಕ್ರಮಗಳು ನಡೆದಿರುವುದು ಲೆಕ್ಕ ಪರಿಶೋಧನಾ ತಂಡ ಪತ್ತೆ ಹಚ್ಚಿ ಆ ಮೂಲಕ ಅಕ್ರಮವೆಗಿಸಿರುವ ಅಧಿಕಾರಿಗಳಿಂದಲೇ 51.44 ಲಕ್ಷ ರು, ವಸೂಲಾತಿಗೆ ಸಾಮಾಜಿಕ ಪರಿಶೋಧನೆ ಸೂಚಿಸಿದೆ.
ಮೂಲಗಳ ಪ್ರಕಾರ ಜಿಲ್ಲೆಯ ಬಾಗೇಪಲ್ಲಿ ಹಾಗೂ ಚಿಂತಾಮಣಿ (Chintamani) ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಟಾನದಲ್ಲಿ ಸಾಕಷ್ಟುಲೋಪದೋಷಗಳು ಕಂಡು ಬಂದಿದ್ದು ಅದರಲ್ಲೂ ಜೆಸಿಬಿ ಯಂತ್ರಗಳನ್ನು ಬಳಸಿ ನರೇಗಾ ಕಾಮಗಾರಿಗಳನ್ನು ನಿರ್ವಹಿಸಿರುವ ಬಗ್ಗೆ ಜಿಪಂಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಸಲ್ಲಿಕೆಯಾಗಿವೆ.
50 ಲಕ್ಷ ಮಾನವಳ ದಿನಗಳ ಗುರಿ
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ (N ಮಾನವ ದಿನಗಳ ಸೃಜನೆಯಲ್ಲಿ ಚಿಕ್ಕಬಳ್ಳಾಪುರ ಉತ್ತಮ ಪ್ರಗತಿ ಸಾಧಿಸಿದೆ. 2022-23ನೇ ಸಾಲಿಗೆ ಜಿಲ್ಲೆಯಲ್ಲಿ 50 ಲಕ್ಷ ಮಾನವ ದಿನಗಳ ಗುರಿಯನ್ನು ರಾಜ್ಯ ಸರ್ಕಾರ ನೀಡಿದ್ದು ಈಗಾಗಲೇ 17.09 ಲಕ್ಷ ಮಾನವ ದಿನಗಳ ಸೃಜನೆ ಆಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೊ 2,22,885 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು ಕಳೆದ ಸಾಲಿ®ಲ್ಲಿ 2,371 ಕುಟುಂಬಗಳು 100 ದಿನಗಳ ಕೂಲಿಯನ್ನು ಪೂರೈಸಿದೆ.
330 ಜಾಬ್ ಕಾರ್ಡ್ ರದ್ದು
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಮರಣ ಹೊಂದಿರುವ ಬರೋಬ್ಬರಿ 330 ಜಾಬ್ ಕಾರ್ಡ್‌ಗಳನ್ನು ಜಿಲ್ಲಾದ್ಯಂತ ಕೈ ಬಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 156 ಕುಟುಂಬಗಳು ಇಲ್ಲಿಯವರೆಗೂ 100 ದಿನಗಳ ಕೂಲಿಯನ್ನು ಪೂರೈಸಿದ್ದು 2,636 ಹೊಸ ಉದ್ಯೋಗ ಚೀಟಿಗಳನ್ನು ನರೇಗಾ ಯೋಜನೆಯಡಿ ವಿತರಿಸಲಾಗಿದೆ.
ಹರಿಯುತ್ತಿರುವ ಅಕ್ರಮ ಮದ್ಯದ ಹೊಳೆ
ಚಿಕ್ಕಬಳ್ಳಾಪುರ (ಅ.07): ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಳೆಗಾಲದಲ್ಲಿ ಅಂತೂ ಜಿಲ್ಲೆಯಲ್ಲಿ ಅಕ್ರಮ ಮದ್ಯದ ಹೊಳೆ ಹರಿದಿದ್ದು ಕೇವಲ 2 ತಿಂಗಳಲ್ಲಿ ನೂರಾರು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿರುವುದು ಎದ್ದು ಕಾಣುತ್ತಿದೆ. ಕಳೆದ ಜುಲೈ- ಆಗಸ್ಟ್ ತಿಂಗಳಲ್ಲಿ 10 ಕ್ಕೂ ಹೆಚ್ಚು ಅಕ್ರಮ ಮದ್ಯ ಸಾಗಾಟ ಪ್ರಕರಣಗಳು ದಾಖಲಾದರೆ ಚಿಲ್ಲರೆ, ಡಾಬಾ, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 120ಕ್ಕೂ ಹೆಚ್ಚು ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲು ಮಾಡಿ ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆದಿದ್ದಾರೆ.
ಮಳೆಗಾಲದಲ್ಲಿ ಜಿಲ್ಲಾದ್ಯಂತ ಮದ್ಯಕ್ಕೆ ಭಾರೀ ಬೇಡಿಕೆ ಕಂಡು ಬಂದಿದ್ದು ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಹೆಚ್ಚಾಗಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ಕೇವಲ 2 ತಿಂಗಳಲ್ಲಿ 132 ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾರ ಪ್ರಕರಣಗಳನ್ನು ದಾಖಲಿಸಿ ಒಟ್ಟು 108.810 ಲೀಟರ್‌ಮದ್ಯ, 34.33 ಲೀಟರ್ ಬಿಯರ್, ಹಾಗೂ 2.014 ಕೆಜಿ ಗಾಂಜಾವನ್ನು ಅಬಕಾರಿ ಪೊಲೀಸರು ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದಿದ್ದಾರೆ. ಅಕ್ರಮ ಮದ್ಯ ಹಾಗೂ ಸಾಗಾಟಕ್ಕೆ ಬಳಕೆಯಾದ 9 ವಾಹನಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು ಬರೋಬ್ಬರಿ ಒಟ್ಟು 123 ಆರೋಪಿಗಳನ್ನು ದಸ್ತಗಿರಿ ಮಾಡಿರುವುದು ಕಂಡು ಬಂದಿದೆ.
ವ್ಯವಸ್ಥಾಪಕನ ಹಣದ ಅವ್ಯವಹಾರ ಬೆನ್ನಲೇ ಕ್ಯಾಷಿಯರ್ ಆತ್ಮಹತ್ಯೆಗೆ ಶರಣು
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲೆಂದು ಅಬಕಾರಿ ಇಲಾಖೆ, ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಕಲಂ, 50 ರಂತೆ ತಿಳುವಳಿಕೆ ಪತ್ರಗಳನ್ನು ನೀಡಿ ಅಬಕಾರಿ ಅಕ್ರಮಗಳ ಬಗ್ಗೆ ನೀಡುವಂತೆ ಸೂಚಿಸಿದೆ. ಜಿಲ್ಲಾದ್ಯಂತ ಆಗಾಗ ದಾಳಿಗಳನ್ನು ನಡೆಸಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ವಹಿಸುವ ನಿಟ್ಟಿನಲ್ಲಿ 45 ಮಾರ್ಗಗಳನ್ನಾಗಿ ವಿಗಂಡಿಸಿಕೊಂಡಿದ್ದು ಒಟ್ಟು 347 ಪಾಯಿಂಟ್ ಬುಕ್‌ಗಳನ್ನು ಇಡಲಾಗಿದೆ. ಅಧಿಕಾರಿಗಳು ಗಸ್ತು ವೇಳೆ ಹಳೇ ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರೂ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಗಣನಿಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.