ಹೈಕೋರ್ಟ್‌ಗೆ ಪಿ.ಐ.ಎಲ್. ಯಾರು ಸಲ್ಲಿಸಿದ್ದಾರೆ ಎನ್ನುವುದು ಗೊತ್ತಿದೆ| ಅದರ ಹಿಂದೆ ಪಿತೂರಿ ಯಾರು ಮಾಡುತ್ತಿದ್ದಾರೆ ಎಂಬುದು ಕೂಡ ಗೊತ್ತಿದೆ| ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಡಿ ಕೆ ಶಿವಕುಮಾರ್|
ಕಲಬುರಗಿ(ಜ.30): ನನಗೆ ತೊಂದರೆ ಕೊಡುವುದೇ ಕೆಲವರ ಕೆಲಸವಾಗಿ ಬಿಟ್ಟಿದೆ. ತೊಂದರೆ ಕೊಡುವುದರಲ್ಲಿಯೇ ಕೆಲವರಿಗೆ ಖುಷಿ ಸಿಗುತ್ತದೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಎಲ್ಲಿ ನೋವಿರುತ್ತದೆಯೋ ಅಲ್ಲಿ ಲಾಭ ಇರುತ್ತದೆ ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಗುರುವಾರ ಜಿಲ್ಲೆಯ ಗಾಣಗಾಪುರ ದತ್ತ ಮಂದಿರಕ್ಕೆ ಭೇಟಿ ನೀಡಿದ ನಂತರ ಕಲಬುರಗಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಡಿಕೆಶಿ ಪರವಾಗಿ ಹೋರಾಟದ ವೇಳೆ 82 ಕೋಟಿ ಸಾರ್ವಜನಿಕ ಆಸ್ತಿ ಹಾನಿ ಉಂಟಾದ ವಿಚಾರದ ಬಗ್ಗೆ ಮಾತನಾಡಿದ ಅವರು, ಹೈಕೋರ್ಟ್‌ಗೆ ಪಿ.ಐ.ಎಲ್. ಯಾರು ಸಲ್ಲಿಸಿದ್ದಾರೆ ಎನ್ನುವುದು ಗೊತ್ತಿದೆ. ಅದರ ಹಿಂದೆ ಪಿತೂರಿ ಯಾರು ಮಾಡುತ್ತಿದ್ದಾರೆ ಎಂಬುದು ಕೂಡ ಗೊತ್ತಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಎಷ್ಟೆಷ್ಟೋ ಹೋರಾಟಗಳಾಗಿವೆ, ಕಲ್ಲು ತೂರಾಟಗಳಾಗಿವೆ. ಆ ವೇಳೆ ಯಾಕೆ ಯಾರೂ ಪಿ.ಐ.ಎಲ್. ಹಾಕಲಿಲ್ಲ. ಈಗ ಯಾಕೆ ಹಾಕಿದ್ದಾರೆ. ಯಾರು ಈ ಪಿ.ಐ.ಎಲ್ ಹಾಕಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.