ಮಾಜಿ ಸಿಎಂ ಜೆ.ಎಚ್.ಪಟೇಲ್ ಪತ್ನಿ ನಿಧನ/ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು/ ಬೆಂಗಳೂರಿನ ನಿವಾಸದಲ್ಲಿ ನಿಧನ/ ಭಾನುವಾರ ಅಂತ್ಯಕ್ರಿಯೆ
ದಾವಣಗೆರೆ[ನ. 09] ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್.ಪಟೇಲ್ ಅವರ ಪತ್ನಿ ಸರ್ವಮಂಗಳಮ್ಮ ಪಟೇಲ್ (84) ಶನಿವಾರ ನಿಧರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳಮ್ಮ ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ನಿಧನರಾಗಿದ್ದಾರೆ.
ಸರ್ವಮಂಗಳಮ್ಮ ಅವರು ಮಾಜಿ ಶಾಸಕ, ಪುತ್ರ ಮಹಿಮಾ ಪಟೇಲ್ ಸೇರಿ ಇಬ್ಬರು ಪುತ್ರರಿದ್ದು ಒಬ್ಬ ಪುತ್ರ ನಿಧನರಾಗಿದ್ದಾರೆ. ಜೆ.ಎಚ್.ಪಟೇಲ್ ಅವರ ರಾಜಕೀಯ ಜೀವನದಲ್ಲಿ ಸರ್ವಮಂಗಳ ಮಹತ್ವದ ಪಾತ್ರ ವಹಿಸಿದ್ದರು.
ಅಸಿಸ್ಟಂಟ್ ಕಮಿಷನರ್ ಅವರ ಮಗಳಾಗಿದ್ದರೂ ಎಲ್ಲಿಯೂ ಅಹಂಕಾರ ಸ್ವಭಾವ ತೋರಿದವರಲ್ಲ. ಮನೆಗೆ ಬಂದ ಎಲ್ಲರನ್ನೂ ಗೌರವ ಹಾಗೂ ಉದಾರದಿಂದ ನಡೆಸಿ ಕೊಳ್ಳುತ್ತಿದ್ದರು.
ಅಂತ್ಯಕ್ರಿಯೆ ಭಾನುವಾರ ಕಾರಿಗನೂರಿನಲ್ಲಿ ನಡೆಲಿದೆ. ಜೆ.ಎಚ್.ಪಟೇಲ್ ಸಮಾಧಿಯೇ ಬಳಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳುನ ತಿಳಿಸಿವೆ.