Chikkaballapura : 300 ಪುಟ ದಾಖಲೆ ಕೊಟ್ಟರೂ ಅನ್ನದಾತರಿಗೆ ಸಿಕ್ಕಿಲ್ಲ ಪರಿಹಾರ!

By Kannadaprabha News  |  First Published Oct 25, 2022, 5:48 AM IST

  ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕೆರೆಗಳು ಒಡೆದು ರೈತರ ಫಲವತ್ತಾದ ಕೃಷಿ ಭೂಮಿಯ ಮಣ್ಣು ಕೊಚ್ಚಿ ಹೋಗಿರುವುದಕ್ಕೆ ಪರಿಹಾರ ನೀಡಬೇಕೆಂದು ಕೋರಿ ಕಳೆದ ಒಂದು ವರ್ಷದಿಂದ ಸಂಕಷ್ಟಕ್ಕೀಡಾದ ಅನ್ನದಾತರು ಸುತ್ತದ ಸರ್ಕಾರಿ ಕಚೇರಿಗಳೇ ಇಲ್ಲ.


  ಚಿಕ್ಕಬಳ್ಳಾಪುರ (ಅ.25) :  ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕೆರೆಗಳು ಒಡೆದು ರೈತರ ಫಲವತ್ತಾದ ಕೃಷಿ ಭೂಮಿಯ ಮಣ್ಣು ಕೊಚ್ಚಿ ಹೋಗಿರುವುದಕ್ಕೆ ಪರಿಹಾರ ನೀಡಬೇಕೆಂದು ಕೋರಿ ಕಳೆದ ಒಂದು ವರ್ಷದಿಂದ ಸಂಕಷ್ಟಕ್ಕೀಡಾದ ಅನ್ನದಾತರು ಸುತ್ತದ ಸರ್ಕಾರಿ ಕಚೇರಿಗಳೇ ಇಲ್ಲ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕಬಂದರಘಟ್ಟಕೆರೆ ಕೋಡಿ ಹರಿದ ವೇಳೆ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ಕೆರೆಯ ಅಚ್ಚುಕಟ್ಟಪ್ರದೇಶಕ್ಕೆ ನುಗ್ಗಿದ ವೇಳೆ ಬೆಳೆ ಹಾಗೂ ಫಲವತ್ತಾದ(Agticultire ) ಯ ಮಣ್ಣು ಕಳೆದುಕೊಂಡ ರೈತರ (farmers)  ಕಣ್ಣೀರಿನ ಕಥೆ ಇದು. ಆದರೆ ವಿಪರ್ಯಾಸ ವರ್ಷ ಕಳೆದರೂ ಇನ್ನೂ ಕೆರೆ ಏರಿ ದುರಸ್ತಿ ಆಗಿಲ್ಲ. ಬೆಳೆ, ಕೃಷಿ ಭೂಮಿಯ ಮಣ್ಣು ಕಳೆದುಕೊಂಡ ರೈತರಿಗೆ ಅಂತೂ ಪರಿಹಾರ ಭರವಸೆ ಈಡೇರಿಲ್ಲ. ರೈತರ ಕಣ್ಣೀರಿನ ಕಥೆ ಕೇಳೋರಿಲ್ಲದಂತಾಗಿದೆ.

Tap to resize

Latest Videos

300 ಪುಟಗಳ ದಾಖಲೆ ಸಲ್ಲಿಕೆ

ರೈತರು ತಮಗೆ ಸಿಗಬೇಕಿರುವ ನ್ಯಾಯಯುತವಾದ ಪರಿಹಾರಕ್ಕಾಗಿ ಹಳ್ಳಿಯಿಂದ ರಾಜಾಧಾನಿ ಬೆಂಗಳೂರಿನವರೆಗೂ ಎಲ್ಲಾ ಕಚೇರಿಗಳಿಗೂ ಪರಿಹಾರ ಕೋಡಿ ಎಂದು ರಾಜಸ್ವ ನೀರೀಕ್ಷಕರಿಂದ ಹಿಡಿದು ತಹಸೀಲ್ದಾರ್‌, ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಬಂಧಪಟ್ಟಎಲ್ಲಾ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳವರಗೆ ರೈತರು ದಾಖಲೆಗಳ ಸಮೇತ ಬರೋಬ್ಬರಿ 300 ಪುಟಗಳ ಸಮಗ್ರ ವಿವರವುಳ್ಳ ಮನವಿ ನೀಡಲಾಗಿತ್ತು..

ಆದರೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಕೆರೆ ಕೋಡಿ ಹರಿದು ಕೆರೆ ಏರಿ ಒಡೆದಾಗ ಸುಮಾರು 120 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಠವಾಗಿದ್ದು ಸುಮಾರು 50 ಹೆಕ್ಟೇರ್‌ನಷ್ಟುಕೃಷಿ ಭೂಮಿಯ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಕೆರೆ ಅಚ್ಚುಕಟ್ಟು ಪ್ರದೇಶದ ಸುಮಾರು 96 ರೈತರಿಗೆ ಸಾಕಷ್ಟುನಷ್ಠವಾಗಿದೆ. ಮಣ್ಣು ಕೋಚ್ಚಿ ಹೋಗಿರುವ ಪರಿಣಾಮ ಬೆಳೆ ಇಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಆದರೆ ಈ ಬಗ್ಗೆ ಸಮಗ್ರವಾದ ವಿವರಗಳನ್ನು ದಾಖಲೆಗಳ ಸಮೇತ ನೊಂದ ರೈತರು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಸಲ್ಲಿಸಿ ವರ್ಷದಿಂದ ಪರಿಹಾರ ಕೋರಿದರೂ ಪರಿಹಾರ ಸಿಕ್ಕಿಲ್ಲ.

ಆದೇಶ ಪಾಲಿಸುವಂತೆ ಆಗ್ರಹ

ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸುತ್ತೊಲೆಯಲ್ಲಿ ಅತಿವೃಷ್ಟಿಯಿಂದ ಕೆರೆಗಳ ನೀರು ಹರಿದು ರೈತರ ಪಲವತ್ತಾದ ಮಣ್ಣು ಕೊಚ್ಚಿ ಹೋಗಿರುವ ನಷ್ಟಕ್ಕೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಎಸ್‌ಡಿಆರ್‌ಐ ಮಾರ್ಗಸೂಚಿಯನ್ವಯ ಪರಿಹಾರ ಪಾವತಿಸುವಂತೆ ಸೂಚಿಸಿದೆ. ಅದರಂತೆ ಶಿಡ್ಲಘಟ್ಟದ ಚಿಕ್ಕಬಂದರಘಟ್ಟಕೆರೆ ಕೋಡಿ ಹರಿದು ಮಣ್ಣು ಕಳೆದುಕೊಂಡ ರೈತರಿಗೆ ಜಿಲ್ಲಾಡಳಿತ ಪರಿಹಾರ ವಿತರಿಸಬೇಕು.

ವಿಜಯಭಾವರೆಡ್ಡಿ, ಯುವಶಕ್ತಿ ಮುಖಂಡರು.

ಅಧಿಕಾರಿಗಳೇ ಸ್ವಲ್ಪ ಗಮನಿಸಿ : 

ಕೊಪ್ಪಳ :  ಖುದ್ದು ಜಿಲ್ಲಾಧಿಕಾರಿ ಸುಂದರೇಶಬಾಬು ಅವರು ರೈತರ ಹೊಲಗಳನ್ನು ಸುತ್ತಾಡಿ ಬೆಳೆಹಾನಿಯನ್ನು ತಾಲೂಕುವಾರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಹಾನಿಯಾಗಿರುವ ಮಾಹಿತಿಯನ್ನು ಹೊಲಗಳಿಗೆ ಹೋಗಿ ಸಂಗ್ರಹಿಸಬೇಕಾದ ಕೆಳಹಂತದ ಅಧಿಕಾರಿಗಳನ್ನು ರೈತರು ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೊಲಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಬೇಕಾದ ಗ್ರಾಮ ಲೆಕ್ಕಾಧಿಕಾರಿಗಳು ಜಮೀನುಗಳತ್ತ ಸುಳಿಯುತ್ತಿಲ್ಲ. ಅನೇಕರು ಮನೆಯಲ್ಲಿ ಕುಳಿತು, ರೈತರಿಂದಲೇ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ. ತಾವಿದ್ದಲ್ಲಿಗೆ ಬಂದು ರೈತರು, ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಅಷ್ಟೇ ಅಲ್ಲ, ಹಾನಿಯಾಗಿರುವ ಬೆಳೆಯ ಕುರಿತು ಫೋಟೋ ತೆಗೆಸಿಕೊಂಡು ಹೋಗಿ ಗ್ರಾಮ ಲೆಕ್ಕಾಧಿಕಾರಿಗಳು ಇರುವಲ್ಲಿಗೆ ಹೋಗಿ ಕೊಟ್ಟುಬರಬೇಕು.

ಹೀಗೆ ಕೈಯಲ್ಲಿ ದಾಖಲೆ ಹಿಡಿದು ರೈತರೊಬ್ಬರು ಗ್ರಾಮ ಲೆಕ್ಕಾಧಿಕಾರಿಗಳ ಬಳಿಗೆ ಹೋದರೆ ಗದರಿಸಿ ಕಳುಹಿಸಿದ್ದಾರೆ. ಅಲ್ಲಿ ಮಳೆಯಾಯಿತು ಅಂದರೆ ಇಲ್ಲಿ ಬಂದು ಬಿಡ್ತಿರಿ, ಸರ್ಕಾರ ಹಣ ಕೊಡ್ತಾರೆ ಅಂದರೆ ಸಾಕು, ಬಂದು ನಿಂತು ಬಿಡುತ್ತೀರಿ ಎಂದು ಗದರಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ರೈತರೊಬ್ಬರು ತಿಳಿಸುತ್ತಾರೆ.

ಅಷ್ಟಕ್ಕೂ ಎಷ್ಟುದಾಖಲೆ ನೀಡಬೇಕು ಎನ್ನುವುದೇ ನಮಗೆ ಗೊತ್ತಾಗುತ್ತಿಲ್ಲ. ಗ್ರಾಮಲೆಕ್ಕಾಧಿಕಾರಿಗಳ ಬಳಿಯೂ ದಾಖಲೆ ನೀಡಬೇಕು ಮತ್ತು ತೋಟಗಾರಿಕೆ ಇಲಾಖೆ ಅಥವಾ ಕೃಷಿ ಇಲಾಖೆಗೂ ಒಂದು ಪ್ರತಿ ನೀಡಬೇಕು. ಹಾಗಾದರೆ ಇವರು ಇರುವುದಾದರೂ ಯಾತಕ್ಕೆ? ಸರ್ವೆ ಮಾಡುವುದಾದರೂ ಎಲ್ಲಿ? ಎನ್ನುವುದಕ್ಕೆ ಮೇಲಧಿಕಾರಿಗಳೇ ಉತ್ತರಿಸಬೇಕಾಗಿದೆ.

ಹಾನಿಯಾಗಿರುವುದು ಲೆಕ್ಕಕ್ಕಿಲ್ಲ:

ನಿಜವಾಗಿಯೂ ಹಾನಿಯಾಗಿರುವ ರೈತರು ತಮ್ಮ ದಾಖಲೆಯನ್ನು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಸುತ್ತಾಡಿ ಸಲ್ಲಿಸಲು ಆಗುವುದಿಲ್ಲ. ಹಾನಿಯಾಗದಿದ್ದರೂ ದಾಖಲೆಯನ್ನು ನೀಡಿದರೆ ಸಾಕು, ಅವರ ಖಾತೆಗೆ ಪರಿಹಾರ ಜಮೆಯಾಗುತ್ತದೆ.

ಬಹುತೇಕ ಗ್ರಾಮಲೆಕ್ಕಾಧಿಕಾರಿಗಳು ಹಳ್ಳಿಗಳಿಗೆ ಬರುವುದೇ ಇಲ್ಲ. ಅವರ ಕಚೇರಿಗಳೂ ಇಲ್ಲವಾದ್ದರಿಂದ ಅವರು ಎಲ್ಲಿ ಇರುತ್ತಾರೆ? ಅಲ್ಲಿಗೆ ಹೋಗಿ ದಾಖಲೆ ನೀಡಬೇಕು.

click me!