ಮುಂಗಾರು ಹಂಗಾಮು ಬೆಳೆಗೆ ಆಂಧ್ರ ಮತ್ತು ಕರ್ನಾಟಕ ಸೇರಿ ಸುಮಾರು 110-115 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ, 10-15 ಟಿಎಂಸಿ ನೀರು ಕೊರತೆಯಾಗುತ್ತದೆ. ಸದ್ಯ ಲಭ್ಯ ಇರುವ ನೀರಿನ ಪ್ರಮಾಣದ ಲೆಕ್ಕಾಚಾರದಲ್ಲಿ ಇನ್ನು ಹಿಂಗಾರು ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬಂದರೇ ಯಾವುದೇ ಸಮಸ್ಯೆ ಇರುವುದಿಲ್ಲ.
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.24): ಕಾವೇರಿ ಕಣಿವೆಯಲ್ಲಿ ನೀರಿಗಾಗಿ ಬೃಹತ್ ಹೋರಾಟ ನಡೆದಿರುವ ನಡುವೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿಯೂ ಆತಂಕ ಎದುರಾಗಿದೆ. ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ತಗ್ಗಿದ್ದು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಮುಂಗಾರು ಬೆಳೆ ದಕ್ಕಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಿನಿಂದಲೇ ನೀರು ಬಳಕೆಯಲ್ಲಿ ಮಿತವ್ಯಯ ಸಾಧಿಸಿ ಅಗತ್ಯ ಕ್ರಮ ಕೈಗೊಂಡರೆ ಮಾತ್ರ ಬೆಳೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕಷ್ಟ ಎನ್ನುತ್ತಾರೆ ಅಧಿಕಾರಿಗಳು.
undefined
ಈಗಾಗಲೇ ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಆನ್ ಆಂಡ ಆಫ್ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿಯೂ ಈಗಿನಿಂದಲೇ ನಿಯಂತ್ರಣ ಮಾಡಿಕೊಂಡರೆ ಬೆಳೆ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ತುಂಗಭದ್ರಾ ಜಲಾಶಯದಲ್ಲಿ ಇದುವರೆಗೂ ಸುಮಾರು 35-40 ಟಿಎಂಸಿ ನೀರು ಬಳಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಜಲಾಶಯದಲ್ಲಿ ಸೆ. 23 ರಂದು 61.49 ಟಿಎಂಸಿ ನೀರು ಲಭ್ಯವಿದೆ. ಎರಡೂ ಸೇರಿದಂತೆ ಜಲಾಶಯದಲ್ಲಿ ಸುಮಾರು 95-100 ಟಿಎಂಸಿ ನೀರು ಲಭ್ಯವಾದಂತಾಗುತ್ತದೆ. ಇದರಿಂದ ಡೆಡ್ ಸ್ಟೋರೇಜ್ ಮತ್ತು ಆವಿಯಾಗುವ ನೀರಿನ ಪ್ರಮಾಣ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಲೆಕ್ಕಾಚಾರ ಹಾಕಿದರೂ ಕನಿಷ್ಠ 10 ಟಿಎಂಸಿ ಬೇಕಾಗುತ್ತದೆ. ಅಂದರೆ ಬಳಕೆಗೆ 85-95 ಟಿಎಂಸಿ ನೀರು ಲಭ್ಯವಾಗುತ್ತದೆ. ಆದರೆ, ಮುಂಗಾರು ಹಂಗಾಮು ಬೆಳೆಗೆ ಆಂಧ್ರ ಮತ್ತು ಕರ್ನಾಟಕ ಸೇರಿ ಸುಮಾರು 110-115 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ, 10-15 ಟಿಎಂಸಿ ನೀರು ಕೊರತೆಯಾಗುತ್ತದೆ. ಸದ್ಯ ಲಭ್ಯ ಇರುವ ನೀರಿನ ಪ್ರಮಾಣದ ಲೆಕ್ಕಾಚಾರದಲ್ಲಿ ಇನ್ನು ಹಿಂಗಾರು ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬಂದರೇ ಯಾವುದೇ ಸಮಸ್ಯೆ ಇರುವುದಿಲ್ಲ.
ಜೆಡಿಎಸ್ ಕಡೆಗಣಿಸುವ ಪಕ್ಷ ಅಲ್ಲ, ಮೈತ್ರಿ ಅನಿವಾರ್ಯ: ಕೋಟ ಶ್ರೀನಿವಾಸ ಪೂಜಾರಿ
ಹಿನ್ನೀರು ಪ್ರದೇಶದಲ್ಲಿಯೂ ಆತಂಕ:
ತುಂಗಭದ್ರಾ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿಯೂ ಹಲವಾರು ಏತ ನೀರಾವರಿಗಳು ಇವೆ. ಇವುಗಳು ಸಹ ನೀರಿನ ಅಭಾವ ಎದುರಿಸುತ್ತಿವೆ. ತುಂಗಭದ್ರಾ ಜಲಾಶಯದಲ್ಲಿ ನೀರು ಇಳಿಕೆಯಾಗುತ್ತಿದ್ದಂತೆ ಏತ ನೀರಾವರಿ ಪಂಪಸೆಟ್ ಗಳಿಗೂ ನೀರಿನ ಅಭಾವ ಆಗುತ್ತದೆ. ಈಗಾಗಲೇ ಏತ ನೀರಾವರಿ ಪ್ರದೇಶದಲ್ಲಿ ನೀರಿನ ಸಮಸ್ಯೆಯಾಗುತ್ತಿದ್ದು, ರೈತರು ತೀವ್ರ ಆತಂಕಗೊಂಡಿದ್ದಾರೆ. ಅಚ್ಚುಕಟ್ಟು ಪ್ರದೇಶದ ರೈತರಗಿಂತಲೂ ಕೊಪ್ಪಳ ತಾಲೂಕಿನ ಬೆಟಗೇರಿ, ಹ್ಯಾಟಿ, ಬಹದ್ದೂರುಬಂಡಿ, ಕಾತರಕಿ- ಗುಡ್ಲಾನೂರ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಆಂತಕ ಶುರುವಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು..!
ಜಲಾಶಯದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಬಳಕೆಯಲ್ಲಿ ಮಿತವ್ಯಯದ ಕ್ರಮ ವಹಿಸುವ ಮೂಲಕ ಬೆಳೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈಗಿನಿಂದಲೇ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದು ಎಂದು ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಈಗಿರುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿದರೆ ಹಿಂಗಾರಿಗೆ 10-15 ಟಿಎಂಸಿ ನೀರು ಕೊರತೆ ಆಗಬಹುದು. ಹೀಗಾಗಿ, ಈಗಿನಿಂದಲೇ ನಿಯಂತ್ರಣ ಮಾಡುವುದಕ್ಕೆ ರೈತರ ಸಹಕಾರ ಅಗತ್ಯವಾಗಿದೆ. ರೈತರೇ ಮುಂದಾಗಿ ಬಳಕೆ ಪ್ರಮಾಣ ತಗ್ಗಿಸಿಕೊಳ್ಳುವ ಮೂಲಕ ನೀರು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ಹೇಳಿದ್ದಾರೆ.
ಮೆಕ್ಕೆಜೋಳ ಬೆಳೆಗೆ ಕೀಟಭಾದೆ:
ಒಂದೆಡೆ ಭೀಕರ ಬರಗಾಲ..ಇನ್ನೊಂದೆಡೆ ಮೆಕ್ಕೆಜೋಳ ಬೆಳೆಗೆ ಕೀಟಭಾದೆ..ಈ ದೃಶ್ಯ ಕಂಡು ಬಂದಿದ್ದು ಕೊಪ್ಪಳ ಜಿಲ್ಲೆಯಲ್ಲಿ... ಯೆಸ್ ಈ ಬಾರಿ ಮಳೆಯಿಲ್ಲದೇ ಕೊಪ್ಪಳ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.. ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ..ಅಂರ್ತಜಲ ಪಾತಾಳಕ್ಕೆ ಕುಸಿದಿದೆ...ಈ ಮಧ್ಯೆ ಮುಂಗಾರು ವೈಫಲ್ಯದಿಂದ ಮೆಕ್ಕೆಜೋಳ ಬೆಳಗೆ ಕೀಟಭಾದೆ ವಕ್ಕರಿಸಿದೆ.. ಮೆಕ್ಕೆಜೋಳದ ತೆನೆ ಕಟ್ಟಿದರೂ ಸಹ ತೆನೆಗಳು ದೊಡ್ಡದಾಗುತ್ತಿಲ್ಲ..ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ..