* ಸಿಂಗಟಾಲೂರು, ಶಿಗ್ಗಾಂವಿ, ಸವಣೂರು ಏತ ನೀರಾವರಿ ಯೋಜನೆ ಪರಿಶೀಲನೆ
* ಹನಿ ನೀರಾವರಿಯಲ್ಲಿ ಸರ್ಕಾರವೇ ರೈತರ ಭೂಮಿಗೆ ಪೈಪ್ ಅಳವಡಿಸುತ್ತದೆ
* ‘ಮಧ್ಯಪ್ರದೇಶ ಮಾದರಿ’ಯಲ್ಲಿ ಛೆಂಬರ್‌ವರೆಗೆ ಮಾತ್ರ ಪೈಪ್‌ನಲ್ಲಿ ನೀರು ಸರಬರಾಜು
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.01): ಹನಿ ನೀರಾವರಿ ವಿಫಲವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಏತ ನೀರಾವರಿ ಯೋಜನೆಗಳಲ್ಲಿ ‘ಮಧ್ಯಪ್ರದೇಶ ಮಾದರಿ’ ಅನುಸರಿಸಲು ಮುಂದಾಗಿದ್ದು, ಸಾಧ್ಯಾಸಾಧ್ಯತೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸಿದೆ.
ಸಿಂಗಟಾಲೂರು, ಶಿಗ್ಗಾಂವಿ ಹಾಗೂ ಸವಣೂರು ಏತ ನೀರಾವರಿ ಯೋಜನೆಯಲ್ಲಿ ಹನಿ ನೀರಾವರಿ ವಿಫಲವಾಗಿರುವ ಹಿನ್ನೆಲೆ ಪರ್ಯಾಯ ರೀತಿಯಲ್ಲಿ ಯೋಜನೆ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
‘ಮಧ್ಯಪ್ರದೇಶ ಮಾದರಿ’ ಅನುಸರಿಸುವುದಾಗಿ ಹೇಳಿದ್ದರು. ಇದೀಗ ಆ ಮಾದರಿಇ ಅನುಷ್ಠಾನದ ಸಾಧ್ಯಾಸಾಧ್ಯತೆ ಕುರಿತು ತಜ್ಞರ ಸಮಿತಿ ರಚಿಸಿದ್ದಾರೆ. ನಿವೃತ್ತ ಮುಖ್ಯ ಎಂಜಿನಿಯರ್ ವಿ.ಪಿ. ಉದ್ದಿಹಾಳ, ಎಸ್.ಎಸ್. ಮಂಜಪ್ಪ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಪ್ರಾಣೇಶ ಮುರನಾಳ ಸಮಿತಿಯಲ್ಲಿದ್ದಾರೆ.
ಆಂಜನೇಯ ಜನ್ಮಸ್ಥಳ ವಿವಾದ, ಆಂಧ್ರ ಆಯ್ತು ಈಗ ಮಹಾರಾಷ್ಟ್ರ ಕಿರಿಕ್
ಮಧ್ಯಪ್ರದೇಶ ಮಾದರಿ:
ಹನಿ ನೀರಾವರಿಯಲ್ಲಿ ಸರ್ಕಾರವೇ ರೈತರ ಭೂಮಿಗೆ ಪೈಪ್ ಅಳವಡಿಸುತ್ತದೆ. ಆದರೆ, ‘ಮಧ್ಯಪ್ರದೇಶ ಮಾದರಿ’ಯಲ್ಲಿ ಪೈಪ್‌ಗಳ ಮೂಲಕ ನೀರನ್ನು ರೈತರ ಭೂಮಿಗೆ ಪೂರೈಕೆ ಮಾಡದೆ, ಅಲ್ಲಲ್ಲಿ ಛೆಂಬರ್(ಗುಂಡಿ) ಮಾಡುತ್ತಾರೆ. ಛೆಂಬರ್‌ವರೆಗೆ ಮಾತ್ರ ಪೈಪ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. ಅಲ್ಲಿಂದ ರೈತರೇ ತಮ್ಮ ಭೂಮಿಗೆ ನೀರು ತೆಗೆದುಕೊಂಡು ಹೋಗಬೇಕು. ಇದುವೇ ‘ಮಧ್ಯಪ್ರದೇಶ ಮಾದರಿ’.
ಆದೇಶದಲ್ಲಿ ಏನಿದೆ?:
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಆದೇಶ ಮಾಡಿದ್ದು, ಕರ್ನಾಟಕ ನೀರಾವರಿ ನಿಗಮದ ಅಡಿ ಅನುಷ್ಠಾನಗೊಳ್ಳುತ್ತಿರುವ ಸಿಂಗಟಾಲೂರು, ಶಿಗ್ಗಾಂವಿ ಮತ್ತು ಸವಣೂರು ಏತ ನೀರಾವರಿ ಯೋಜನೆಗಳಲ್ಲಿ ಹನಿ ನೀರಾವರಿ ಯೋಜನೆ ಬದಲಾಗಿ ‘ಮಧ್ಯಪ್ರದೇಶ ಮಾದರಿ’ಯಲ್ಲಿ ಅನುಷ್ಠಾನಗೊಳಿಸಲು ತಜ್ಞ ಅಧಿಕಾರಿಗಳ ಸಮಿತಿ ರಚಿಸಿ, ಶೀಘ್ರದಲ್ಲಿ ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ:
ಸಿಂಗಟಾಲೂರು ಏತ ನೀರಾವರಿ ಯೋಜನೆ ಕೊಪ್ಪಳ, ಗದಗ ಹಾಗೂ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡು 19587 ಹೆಕ್ಟೇರ್ ಪ್ರದೇಶ ಕಾಲುವೆ ನೀರಾವರಿ ಹಾಗೂ 87793 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿದೆ. ಕಾಲುವೆ ನೀರಾವರಿ ಯೋಜನೆಯಡಿ 19587 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ. 87793 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಒದಗಿಸುವ ಪೈಕಿ 71114 ಹೆಕ್ಟೇರ್ ಯೋಜನೆ ಪ್ರಗತಿಯಲ್ಲಿದೆ. ಪ್ಯಾಕೇಜ್ 1ರಲ್ಲಿ 10080 ಹೆಕ್ಟೇರ್, ಪ್ಯಾಕೇಜ್ 2ರಲ್ಲಿ 12777 ಹೆಕ್ಟೇರ್, ಪ್ಯಾಕೇಜ್ 3ರಲ್ಲಿ 11360 ಹೆಕ್ಟೇರ್, ಪ್ಯಾಕೇಜ್ 4ರಲ್ಲಿ 17470 ಹೆಕ್ಟೇರ್ ಪ್ರದೇಶ ಹಾಗೂ ಪ್ಯಾಕೇಜ್ 5ರಲ್ಲಿ 19427 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ.
ಪೊಲೀಸರಿಗೆ ಸಚಿವ ಹಾಲಪ್ಪ ಆಚಾರ್ ತಾಕೀತು ಸರಿಯಲ್ಲ: ಕಾಂಗ್ರೆಸ್
ಶಿಗ್ಗಾಂವಿ ಏತ ನೀರಾವರಿ:
ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಸವಣೂರು ಮತ್ತು ಹಾನಗಲ್ಲ ತಾಲೂಕಿನಲ್ಲಿ ತುಂತುರು ಹನಿ ನೀರಾವರಿ ಯೋಜನೆಯಿಂದ 13500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಪೈಕಿ 9900 ಹೆಕ್ಟೇರ್ ಪ್ರದೇಶಕ್ಕೆ ತುಂತುರು ನೀರಾವರಿ ಕಲ್ಪಿಸಲಾಗಿದೆ. ಉಳಿದ 3600 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆ ಪರಿಶೀಲನೆಯಲ್ಲಿದೆ.
ಸವಣೂರು ಏತ ನೀರಾವರಿ:
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ ಇರುವ ಕಳಸೂರು ಬ್ಯಾರೇಜ್‌ನಿಂದ 1.50 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ 15500 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ಒದಗಿಸಲು ಪರಿಶೀಲನೆಯಲ್ಲಿದೆ.
ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ‘ಮಧ್ಯಪ್ರದೇಶ ಮಾದರಿ’ಯಲ್ಲಿ ಜಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ಸಮಿತಿಯನ್ನು ರಚನೆ ಮಾಡಿದ್ದಾರೆ. ಆದಷ್ಟುಬೇಗನೆ ಯೋಜನೆ ಜಾರಿಯಾಗಬೇಕಾಗಿದೆ ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.