ಬಂಡೀಪುರದಲ್ಲಿ ಡ್ರೋನ್ ಕಣ್ಗಾವಲು, ಬೈಕ್, ಜೀಪ್ ಗಸ್ತು

By Kannadaprabha NewsFirst Published Feb 29, 2020, 2:24 PM IST
Highlights

 ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಡುವೆ ಹಾದು ಹೋಗುವ ಕೇರಳ ರಸ್ತೆಯಲ್ಲಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಹಾರಾಡುವ ಮೂಲಕ ಕಣ್ಗಾವಲು ಇರಿಸಿದೆ.

ಚಾಮರಾಜನಗರ(ಫೆ.29): ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಡುವೆ ಹಾದು ಹೋಗುವ ಕೇರಳ ರಸ್ತೆಯಲ್ಲಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಹಾರಾಡುವ ಮೂಲಕ ಕಣ್ಗಾವಲು ಇರಿಸಿದೆ.

ಕೇರಳ ರಸ್ತೆಯಲ್ಲಿ ಸಾವಿರಾರು ವಾಹನಗಳ ಸಂಚಾರ ಇರುವ ಕಾರಣ ಹೆದ್ದಾರಿಯಲ್ಲಿ ಜೀಪ್, ಬೈಕ್ ಮೂಲಕ ಗಸ್ತು ನಡೆಸಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಅಲ್ಲಲ್ಲಿ ಬಿಡ
ಲಾಗುತ್ತಿದೆ. ಇದರ ಜೊತೆಗೆ ಹೆದ್ದಾರಿಯ ಬದಿಯಲ್ಲಿ ಟ್ಯಾಂಕರ್ ಮೂಲಕ ನೀರು ಸಿಂಪಡಿಸುವ ಕೆಲಸ ನಡೆಯುತ್ತಿದೆ ಎಂದು ಮದ್ದೂರು ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ತಿಳಿಸಿದರು.

26ರ ಬದಲು 34 ರೂಪಾಯಿ ಟಿಕೆಟ್: ಬಸ್ ಪ್ರಯಾಣಿಕರು ಶಾಕ್..!

ಹೆದ್ದಾರಿಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ವಾಹನಗಳಲ್ಲಿ ಎಡಬಿಡದೆ ಗಸ್ತು ನಡೆಸುತ್ತಿದ್ದಾರೆ. ಅಲ್ಲದೆ ಡ್ರೋನ್ ಕ್ಯಾಮೆರಾ ಹಾರಾಟ ನಡೆಸಲಾಗುತ್ತಿದೆ ಎಂದರು. ಹೆದ್ದಾರಿಯಲ್ಲಿ ಪ್ರವಾಸಿಗರ ವಾಹನಗಳ ಸಂಚರಿಸುವ ವೇಳೆ ನಿಲ್ಲಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಯಾವ ಕಾರಣಕ್ಕೂ ಪ್ರವಾಸಿಗರು ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು. ಹೆದ್ದಾರಿ ಬದಿಯಲ್ಲಿ ಒಣಗಿ ನಿಂತಿರುವ ಹುಲ್ಲಿಗೆ ಬೆಂಕಿ ಬೀಳದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕೋರಿದ್ದಾರೆ.

click me!