* ಸಿರಿಗೆರೆ ಸಮೀಪದ ಓಬಳಾಪುರ ಗ್ರಾಮದ ಕಾಗೆ ಕಾಟ
* ಕಾಗೆ ಕುಕ್ಕಿದ ನೋವಿಗೆ ಹಾಸಿಗೆ ಹಿಡಿದ ಜನ
* ಮನೆಯಿಂದ ಹೊರಗೆ ಬರುವ ಎಲ್ಲಾ ಜನರ ಮೇಲೆಯೂ ದಾಳಿ
ಸಿರಿಗೆರೆ/ಚಿತ್ರದುರ್ಗ(ಜ.28): ಸಿರಿಗೆರೆ ಸಮೀಪದ ಓಬಳಾಪುರ ಗ್ರಾಮದ ಜನರಲ್ಲಿ ಕಾಗೆಯೊಂದು(Crow) ಭಾರಿ ಭೀತಿ ಹುಟ್ಟಿಸಿದೆ. ಜನರು ಮನೆಯಿಂದ ಹೊರ ಬಂದರೆ ಸಾಕು, ಕಾಗೆ ಇದ್ದಕ್ಕಿದ್ದಂತೆ ಬಂದು ತಲೆಗೋ, ಭುಜಕ್ಕೋ ಕುಕ್ಕಿಬಂದಷ್ಟೇ ವೇಗವಾಗಿ ಹಾರಿಹೋಗುತ್ತದೆ. ಅದು ಕುಕ್ಕಿದ ನೋವಿಗೆ ಹಲವರು ಹಾಸಿಗೆ ಹಿಡಿದ ಪ್ರಸಂಗವೂ ನಡೆದಿವೆ.
ರೈತರು(Farmers) ಜಮೀನು, ತೋಟದ ಕೆಲಸಕ್ಕೂ ಹೋಗುವಾಗಲೂ ಈ ಕಾಗೆಯ ದಾಳಿಗೆ(Attack) ಒಳಗಾಗುತ್ತಿದ್ದಾರೆ. ಕಾಗೆ ಶನಿದೇವರ ಸಂಕೇತ. ಇದು ಶನೀಶ್ವರನ(Shaneshwara Swamy) ಕಾಟವೇ ಇರಬೇಕೆಂದು ಭಾವಿಸಿರುವ ಗ್ರಾಮದ ಹಲವು ಜನರು ಪಾವಗಡದ ಶನಿ ದೇವರ ಸನ್ನಿಧಿಗೆ ಹೋಗಿ ಪೂಜೆ, ನೈವೇದ್ಯ ಸಲ್ಲಿಸಿ ಈ ಕಾಟದಿಂದ ಗ್ರಾಮದ ಜನರನ್ನು ಮುಕ್ತಗೊಳಿಸಲು ಪ್ರಾರ್ಥನೆ ಸಲ್ಲಿಸಿದ್ದಾರೆ.
ರಾಜಸ್ಥಾನ ಬಳಿಕ ಇದೀಗ ಮಂಗಳೂರಿನಲ್ಲಿ ಕಾಗೆಗಳ ನಿಗೂಢ ಸಾವು; ಹಕ್ಕಿ ಜ್ವರ ಭೀತಿ!
ಊರಿನ ಏಳೆಂಟು ಜನರನ್ನು ಗುರುತಿಟ್ಟುಕೊಂಡು ದಾಳಿ ಮಾಡುತ್ತದೆ ಎಂದು ತಿಳಿದಿದ್ದೆವು. ಆದರೆ ಅದು ಮನೆಯಿಂದ ಹೊರಗೆ ಬರುವ ಎಲ್ಲಾ ಜನರ ಮೇಲೆಯೂ ದಾಳಿ ನಡೆಸುತ್ತಿದೆ ಎಂದು ಗ್ರಾ.ಪಂ.ಸದಸ್ಯ ಶಂಕರಗೌಡ ಹೇಳಿದ್ದಾರೆ.
ಅಂಕೋಲಾ: ಕರೆದಾಗಲೆಲ್ಲ ಬಂದು ಕೈಮೇಲೇರುವ ಕಾಕ, ಮಾನವನ ಜತೆ ಕಾಗೆ ಫ್ರೆಂಡ್‌ಶಿಪ್..!
ಒಂದು ಕಡೆ ಜನರ ಮೇಲೆ ದಾಳಿ ಮಾಡುತ್ತಿರುವ ಕಾಗೆ. ಇನ್ನೊಂದು ಕಡೆ ಮಾನವನ ಜೊತೆ ಕಾಗೆಯೊಂದು ಸ್ನೇಹ ಬೆಳೆಸಿದ ಅಪರೂಪದ ಘಟನೆ ಸಾಕ್ಷಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ. ಕಳೆದ 10 ವರ್ಷದಿಂದ ಕಾಗೆಯೊಂದು ಉತ್ತರ ಕನ್ನಡ(Uttara Kannada) ಜಿಲ್ಲೆಯ ಅಂಕೋಲಾ(Ankola) ಪಟ್ಟಣದ ವ್ಯಕ್ತಿಯೊಬ್ಬನ ಸಲುಗೆ-ಸಂಪರ್ಕ ಬೆಳೆಸಿದ ಪರಿ ಸೋಜಿಗವಾಗಿದೆ. ಹೌದು, ಕಾಗೆಗಳ ಜೀವನ ಶೈಲಿಯೆ ವ್ಯತಿರಿಕ್ತವಾದದು. ಅವು ಮನುಷ್ಯನ ಹತ್ತಿರ ಸುಳಿಯಲಾರದು. ಆದರೆ ಕಂತ್ರಿ (ಮಾಧವನಗರ)ದ ನಿವೃತ್ತ ನೌಕರ ವಿಠ್ಠಲ ಶೆಟ್ಟಿ ಅವರು ಕರೆದಾಗ ಕೈ ಮೇಲೆ ಬಂದು ಕಾಗೆ ಕುಳಿತು ಗಮನ ಸೆಳೆಯುತ್ತಿದೆ.
ವಿಠ್ಠಲ ಶೆಟ್ಟಿ ಅವರು ಕಾಗೆಗೆ ಹೆಚ್ಚಾಗಿ ಚಪಾತಿಯನ್ನು ಕೈಯಲ್ಲಿ ಹಿಡಿದು ಆತ್ಮೀಯವಾಗಿ ಬಾರೋ ಬಾರೋ ಎನ್ನುತ್ತಲೇ ಹಾರಿ ಬಂದು ಕೈಯಲ್ಲಿ ಕುಳಿತುಕೊಳ್ಳುತ್ತದೆ. 10ರಿಂದ 15 ನಿಮಿಷ ಕೈ ಮೇಲೆ ಕುಳಿತು ಆನಂತರ ಹಾರಿ ಹೋಗುತ್ತದೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ, ಹಾಗೆ ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ತಪ್ಪದೇ ಬರುವ ಈ ಕಾಗೆ ಕುಟುಂಬದ ಸದಸ್ಯನಂತೆ ಆತ್ಮೀಯತೆ ಬೆಳೆಸಿಕೊಂಡಿದೆ. ವಿಠ್ಠಲ ಶೆಟ್ಟಿಅವರು ಎಂದಾದರೂ ಮನೆ ಬಿಟ್ಟು ಒಂದೆರಡು ದಿನ ಹೊರಗಡೆ ಹೋದಾಗ, ಈ ಕಾಗೆ ಅವರ ಮನೆಯ ಬಾಗಿಲಲ್ಲೆ ಕುಳಿತು ಕಾದಿರುತ್ತದೆ.
ಕಾಗೆಯ ಒಡನಾಟವಾಗಿದ್ದು ಹೀಗೆ:
ಕಳೆದ 10 ವರ್ಷದ ಹಿಂದೆ ಒಂದು ಕಾಲು ಇಲ್ಲದ ಕಾಗೆಯೊಂದು ಇವರ ಮನೆಯ ಹತ್ತಿರ ಹಾರಾಡುತ್ತಿತ್ತು. ವಿಠ್ಠಲ ಶೆಟ್ಟಿಅವರು ಈ ಕಾಲು ಇರದೇ ಇರುವುದನ್ನುಕಂಡು ತಿಂಡಿ ನೀಡಿ ಆತ್ಮೀಯತೆ ತೋರಿಸಿದ್ದರಂತೆ. 6 ತಿಂಗಳ ನಂತರ ಈ ಕಾಗೆ 2 ಕಾಗೆ ಮರಿಗಳನ್ನು ಹೊತ್ತು ವಿಠ್ಠಲ ಶೆಟ್ಟಿಅವರ ಮನೆಯಂಗಳಕ್ಕೆ ಬಂದಿತ್ತು ಎನ್ನಲಾಗಿದೆ. ಅದರಲ್ಲಿ ಒಂದು ಕಾಗೆ ಅಸ್ವಸ್ಥ ಸ್ಥಿತಿಯಲ್ಲಿದ್ದರೆ, ಇನ್ನೊಂದು ಕಾಗೆ ಚುರುಕಾಗಿತ್ತು. ಚುರುಕಾಗಿದ್ದ ಕಾಗೆಯನ್ನು ತಾಯಿ ತೆಗೆದುಕೊಂಡು ಹಾರಿ ಹೋಯಿತು. ಅಸ್ವಸ್ಥವಾಗಿದ್ದ ಕಾಗೆಗೆ ಉಪಚರಿಸಿ, ಆಹಾರ(Food) ನೀಡಿದರಂತೆ. ಚೇತರಿಸಿಕೊಂಡ ಮರಿ ಕಾಗೆ ಹಾರಿ ಹೋದರೂ ಸಹ ಪ್ರತಿ ದಿನ, ಶೆಟ್ಟಿ ಅವರು ಕರೆದಾಗ ಬಂದು, ನೀಡಿದ್ದನ್ನು ತಿಂದು ಹೋಗುತ್ತಿದೆ.
'ಹಕ್ಕಿ ಜ್ವರದಿಂದ ಕಾಗೆ, ವಲಸೆ ಹಕ್ಕಿಗಳು ಸತ್ತಿಲ್ಲ'
ಮನುಷ್ಯ(Human) ಹಾಗೂ ಪ್ರಾಣಿ-ಪಕ್ಷಿಗಳು(Animal-Bird) ಈ ಜೀವ ಸಂಕುಲದ ಸರಪಣಿಯಾಗಿವೆ. ಅವನ್ನು ಪ್ರೀತಿಯಿಂದ ನೋಡಿಕೊಂಡರೆ, ಪ್ರೀತಿ ಸಂಪಾದಿಸುವುದು ಸುಲಭ. ಈ ಕಾಗೆಯನ್ನುಒಂದು ದಿನ ನೋಡದಿದ್ದರೂ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ ಎಂದು ವಿಠ್ಠಲ ಶೆಟ್ಟಿ ತಿಳಿಸಿದ್ದಾರೆ.
ತಿಥಿಗೆ ಬೇಕು ಕಾಗೆ...
ಮಹಾಲಯ ಅಮಾವಾಸ್ಯೆಯಂದು ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಮನುಷ್ಯ ಇಹಲೋಕ ತ್ಯಜಿಸಿದ ಹನ್ನೆರಡನೇ ದಿನ ಉತ್ತರಕ್ರಿಯೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸತ್ತ ವ್ಯಕ್ತಿಗೆ ಇಟ್ಟ ಎಡೆಯನ್ನು ಮೊದಲು ಕಾಗೆ ಮುಟ್ಟಬೇಕು. ಹಾಗೆ ಕಾಗೆ ತಿನ್ನದೇ ಬೇರೆಯವರು ತಿಥಿ ಊಟ ಮಾಡುವಂತಿಲ್ಲ. ಸತ್ತವರ ಆತ್ಮ ಕಾಗೆ ರೂಪದಲ್ಲಿ ಬಂದು ಊಟ ಸ್ವೀಕರಿಸುತ್ತದೆ ಎಂಬುದು ನಂಬಿಕೆ. ಹಾಗೆ ಕಾಗೆ ಬಂದು ತಿಂದರೆ ಸತ್ತವರಿಗೆ ತೃಪ್ತಿಯಾಗಿದೆ ಎಂದು ಭಾವಿಸಲಾಗುತ್ತದೆ.