Covid19| ಡ್ರೋನ್‌ನಲ್ಲಿ ಕೋವಿಡ್‌ ಲಸಿಕೆ ಪೂರೈಕೆ..!

By Kannadaprabha News  |  First Published Nov 14, 2021, 7:17 AM IST

*   ಚಂದಾಪುರದಿಂದ ಹಾರಗದ್ದೆ ಕೇಂದ್ರಕ್ಕೆ 50 ವಯಲ್‌ ರವಾನೆ
*  10 ನಿಮಿಷದಲ್ಲಿ ಯಶಸ್ವಿಯಾಗಿ 14 ಕಿ.ಮೀ. ದೂರ ತಲುಪಿದ ಡ್ರೋನ್‌
*  ರಸ್ತೆ ಮಾರ್ಗದಲ್ಲಿ ಸಾಗಲು 30-40 ನಿಮಿಷ ಅಗತ್ಯ
 


ಬೆಂಗಳೂರು(ನ.14):  ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರೀಸ್‌(National Aerospace Laboratories) (NAL) ತನ್ನ ಡ್ರೋನ್‌ ‘ಅಕ್ಟಾಕಾಪ್ಟರ್‌’ ಮೂಲಕ 50 ವಯಲ್ಸ್‌ ಕೋವಿಡ್‌ ಲಸಿಕೆಯನ್ನು ಬೆಂಗಳೂರು ಹೊರವಲಯದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರವಾನಿಸಿದೆ. ಇದು ನಗರದಲ್ಲಿ ನಡೆದ ಮೊದಲ ಕಾರ್ಯಾಚರಣೆಯಾಗಿದೆ.

ಸ್ವದೇಶಿ ನಿರ್ಮಿತ ಅಕ್ಟಾಕಾಪ್ಟರ್‌(Octacopter) ಬೆಳಗ್ಗೆ 9.43ಕ್ಕೆ ಚಂದಾಪುರ ಆರೋಗ್ಯ ಕೇಂದ್ರದಿಂದ ಕೋವಿಡ್‌ ಲಸಿಕೆಯನ್ನು(Covid Vaccine) ವಿಶೇಷವಾದ ಕಂಟೈನರ್‌ನಲ್ಲಿ ತುಂಬಿಸಿಕೊಂಡು 14 ಕಿ.ಮೀ. ದೂರದಲ್ಲಿದ್ದ ಹರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇವಲ 10 ನಿಮಿಷ ಅವಧಿಯಲ್ಲಿ ಲಸಿಕೆಯನ್ನು(Vaccine) ತಲುಪಿಸಿತು. ಲಸಿಕೆ ತಲುಪಿಸಿದ ಡ್ರೋನ್‌(Drone) ಆ ಬಳಿಕ ಮತ್ತೆ ಚಂದಾಪುರಕ್ಕೆ ವಾಪಾಸ್‌ ಆಯಿತು. ಈ ಇಡೀ ಪ್ರಕ್ರಿಯೆ ಕೇವಲ 20 ನಿಮಿಷದಲ್ಲಿ ಮುಕ್ತಾಯಗೊಂಡಿತು. ಸೆಕೆಂಡ್‌ಗೆ 10 ಮೀಟರ್‌ ದೂರ ಕ್ರಮಿಸುವ ಸಾಮರ್ಥ್ಯವನ್ನು ಈ ಡ್ರೋನ್‌ ಹೊಂದಿದೆ.

Tap to resize

Latest Videos

undefined

Vaccine: ಲಸಿಕೆ ಪಡೆಯದಿದ್ರೂ ಮೊಬೈಲ್‌ಗೆ ಮೆಸೇಜ್‌, ಖಾಸಗಿ ಉದ್ಯೋಗಿ ಮನೆಯಲ್ಲಿ 3000 ಡೋಸ್

ರಸ್ತೆ ಮಾರ್ಗದಲ್ಲಿ ಚಂದಾಪುರದಿಂದ ಹಾರಗದ್ದೆಗೆ ಲಸಿಕೆ ಸಾಗಿಸಲು 30ರಿಂದ 40 ನಿಮಿಷ ಸಮಯ ಬೇಕಾಗುತ್ತದೆ. ಆಕಾಶ ಮಾರ್ಗದಲ್ಲಿ(Sky Path) ವೇಗ ಮತ್ತು ಸುರಕ್ಷಿತವಾಗಿ ಲಸಿಕೆ ರವಾನೆಯಾಗಿದ್ದು, ಆರೋಗ್ಯ ಕೇಂದ್ರದ ವೈದ್ಯರು(Doctors) ಮತ್ತು ಸಿಬ್ಬಂದಿಗೆ ಸಂತಸ ತಂದಿದೆ. ಎನ್‌ಎಎಲ್‌ನ ಜೊತೆಗಿನ ಸಹಭಾಗಿತ್ವವನ್ನು ಮುಂದುವರಿಸುತ್ತೇವೆ ಎಂದು ರಾಜ್ಯ ಆರೋಗ್ಯ ಇಲಾಖೆಯ(Department of Health) ಡಾ, ಮನೀಷಾ ಹೇಳಿದ್ದಾರೆ.

ಸಿಎಸ್‌ಐಆರ್‌(CSIR)-ಎನ್‌ಎಲ್‌ನ ಮಾನವರಹಿತ ಆಕಾರ ವಾಹನ ವಿಭಾಗದ ಮುಖ್ಯಸ್ಥ ಡಾ. ಪಿ.ವಿ.ಸತ್ಯನಾರಾಯಣ ಮೂರ್ತಿ ಅವರು ದೂರದ ಪ್ರದೇಶಗಳಿಗೆ ಲಸಿಕೆ ರವಾನಿಸಲು ಅಕ್ಟಾಕಾಪ್ಟರ್‌ ಈ ಸಮಯದ ಅಗತ್ಯವಾಗಿದೆ. ಈ ಯೋಜನೆಯ ಹಿಂದೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುವುದಾಗಿ ಹೇಳಿದರು.

ಅಕ್ಟಾಕಾಪ್ಟರ್‌ ಬಳಕೆ ಅತ್ಯಂತ ಸರಳವಾಗಿದ್ದು, ತಾಂತ್ರಿಕ ನೈಪುಣ್ಯತೆಯನ್ನು ಪಡೆಯದವರು ಕೂಡ ಬಳಸಬಹುದಾಗಿದೆ. ಎನ್‌ಎಎಲ್‌ ಈಗಾಗಲೇ ಖಾಸಗಿ ಸಂಸ್ಥೆಗಳ ಜೊತೆಗೆ ಡ್ರೋನ್‌ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ಸಹಭಾಗಿತ್ವ ನೀಡುವ ಒಪ್ಪಂದ ಮಾಡಿಕೊಂಡಿದೆ ಎಂದು ಡಾ. ಮೂರ್ತಿ ತಿಳಿಸಿದರು. ಈ ಡ್ರೋನ್‌ ಹಗುರವಾದ ಕಾರ್ಬನ್‌ ಫೈಬರ್‌ ಬಳಸಿ ಮಾಡಲಾಗಿದ್ದು, ಡಿಜಿಟಲ್‌ ಅಟೋಪೈಲಟ್‌ ವ್ಯವಸ್ಥೆ ಸಹಿತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ.
ಈ ಸಂದರ್ಭದಲ್ಲಿ ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್‌, ಆನೇಕಲ್‌ ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್‌ ಮುಂತಾದವರು ಉಪಸ್ಥಿತರಿದ್ದರು.

Covid 19: ಎಚ್ಚರ! ಕೊರೋನಾ ಇನ್ನೂ ಮುಗಿದಿಲ್ಲ: ಕೇಂದ್ರ

40 ನಿಮಿಷ 15 ಕೇಜಿ ಭಾರ ಹೊರುವ ಸಾಮರ್ಥ್ಯ

ಎನ್‌ಎಎಲ್‌, ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನಾ ಪರಿಷತ್‌ (ಸಿಎಸ್‌ಐಆರ್‌)ನ ಸಹ ಸಂಸ್ಥೆಯಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು(Ministry of Civil Aviation) ಡ್ರೋನ್‌ ಮೂಲಕ ಲಸಿಕೆ ಸಾಗಾಟಕ್ಕೆ ಶರತ್ತು ಬದ್ಧ ಅನುಮತಿ ನೀಡಿತ್ತು. ಅಕ್ಟಾಕಾಪ್ಟರ್‌ 40 ನಿಮಿಷಗಳ ಕಾಲ 15 ಕೇಜಿ ಭಾರ ಹೊತ್ತು ಹಾರುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 36 ಕಿಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ. ಈ ಡ್ರೋನ್‌ಅನ್ನು ಔಷಧಿ, ಲಸಿಕೆ, ಆಹಾರ, ಅಂಚೆ, ಮಾನವ ಅಂಗಾಂಗ ಸಾಗಣೆ ಬಳಸಬಹುದಾಗಿದೆ ಎಂದು ಎನ್‌ಎಎಲ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸ​ರ್ಕಾರ ಮಕ್ಕಳಿಗೆ ಲಸಿಕೆ ತರಿಸಿ ಧೈರ್ಯ ತುಂಬಲಿ

ಸೋಂಕು ಕಡಿಮೆಯಾದರೆ ಮತ್ತೆ ಎಲ್ಲವೂ ಮೊದಲಿನಂತೆ ಆದೀತು ಎನ್ನುವ ವಿಶ್ವಾಸ ಇದೆ. ಎಲ್ಲೆಡೆ ಶಾಲಾರಂಭಗೊಂಡಿರುವುದರಿಂದ ನಮ್ಮಂತಹ ವಿದ್ಯಾರ್ಥಿಗಳಲ್ಲಿ(Students) ಕೊರೋನಾ ಭಯ ಇದ್ದೇ ಇದೆ. ಆದರೆ ಏನು ಮಾಡುವುದು? ಕೊರೋನಾದೊಂದಿಗೆ ನಾವು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಶಾಲೆಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಸ​ರ್ಕಾರ ಆಗಾಗ ಮಕ್ಕಳಿಗೆ(Chidren) ಆರೋಗ್ಯ ತಪಾಸಣೆ(Health Checkup) ಸಹಿತ ಕೊರೋನಾ ಲಸಿಕೆ ತರಿಸಿ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮೂರನೇ ಅಲೆಯ ಭಯ ಇರುವುದರಿಂದ ಕೊರೋನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಮುಂದಾಗಬೇಕು.
 

click me!