ಬಾಗಲಕೋಟೆ: ಕುಸಿದ ಅರಿಷಿಣ ಬೀಜದ ಬೇಡಿಕೆ, ಆತಂಕದಲ್ಲಿ ಮಾರಾಟಗಾರ

Published : May 19, 2023, 08:58 AM IST
ಬಾಗಲಕೋಟೆ:  ಕುಸಿದ ಅರಿಷಿಣ ಬೀಜದ ಬೇಡಿಕೆ, ಆತಂಕದಲ್ಲಿ ಮಾರಾಟಗಾರ

ಸಾರಾಂಶ

ಪ್ರಸಕ್ತ ವರ್ಷ ಮಳೆ ಸುರಿವ ಪ್ರಮಾಣ ಆಶಾದಾಯಕವಾಗಿದ್ದರೂ ಅರಿಷಿಣ ಬೆಳೆಗೆ ಉತ್ತಮ ಬೆಲೆ ಬರುವ ಎಲ್ಲ ನೀರಿಕ್ಷೆಗಳಿದ್ದರೂ ಈ ಬಾರಿ ಅರಿಷಿಣ ಬೀಜಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

 ರಬಕವಿ-ಬನಹಟ್ಟಿ (ಮೇ.19) : ಪ್ರಸಕ್ತ ವರ್ಷ ಮಳೆ ಸುರಿವ ಪ್ರಮಾಣ ಆಶಾದಾಯಕವಾಗಿದ್ದರೂ ಅರಿಷಿಣ ಬೆಳೆಗೆ ಉತ್ತಮ ಬೆಲೆ ಬರುವ ಎಲ್ಲ ನೀರಿಕ್ಷೆಗಳಿದ್ದರೂ ಈ ಬಾರಿ ಅರಿಷಿಣ ಬೀಜಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಕಳೆದ ಬಾರಿ ಅರಿಷಿಣ ಬೀಜಗಳನ್ನು ಖರೀದಿಸಲು ನಾಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದ ರೈತರು ಈ ಬಾರಿ ಕೇಳುವವರಿಲ್ಲದೇ ಬೀಜ ಮಾರಾಟಗಾರರು ಕೂಡ ಕಂಗಾಲಾಗಿದ್ದು, ಪಕ್ಕದ ರಾಜ್ಯಗಳ ರೈತರು ಖರೀದಿಗೆ ಮುಂದಾಗದ ಕಾರಣ ಮಾರಾಟಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರತಿವರ್ಷ ಈ ಭಾಗಕ್ಕೆ ತಮಿಳುನಾಡಿನ ಸೇಲಂ ಹಾಗೂ ಕಡಪಾ ಪಟ್ಟಣಗಳಿಂದÜ ಅರಿಷಿಣ ಬೀಜಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸೇಲಂ ತಳಿಯ ಅರಿಷಿಣ ಬೀಜಗಳ ಇಳುವರಿ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಚೆನ್ನಾಗಿ ಬಂದಿದೆ. ಆದರೂ ಅಲ್ಲಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಆಮದು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಆದ್ದರಿಂದ ಸೇಲಂನಿಂದ ಬರುವ ಅರಿಷಿಣ ಬೀಜಗಳ ಪೂರೈಕೆಯೂ ಹೆಚ್ಚಾಗಿದೆ. ತಮಿಳುನಾಡಿನ ರೈತರ ಮತ್ತು ಸೇಲಂ ರೈತರು ಬೆಳೆದ ಅರಿಷಿಣ ಬೆಳೆಯ ಪೂರೈಕೆ ನಮ್ಮ ರಾಜ್ಯದ ರೈತರಿಗೆ ಬೀಜಗಳ ಮೂಲ ಸೆಲೆಯಾಗಿದ್ದ ಕಾರಣ ಅಲ್ಲಿಂದ ಅರಿಷಿಣ ಬೀಜ ವಿಫುಲವಾಗಿ ಬರುತ್ತಿರುವುದರಿಂದ ಇಲ್ಲಿ ಬೇಡಿಕೆ ಕಡಿಮೆಯಾಗಿದೆ. ಈ ಕಾರಣದಿಂದ ಬೀಜದ ದರ ಕಡಿಮೆಯಾಗಲು ಕಾರಣವಾಗಿದೆ.

ತಂತ್ರ-ಮಂತ್ರಗಳಲ್ಲಿ ಬಳಸಲಾಗೋ ತರಕಾರಿಗಳಿಂದ ಸಮಸ್ಯೆಗಳು ದೂರ

ಸೇಲಂ ತಳಿಯ ಬೀಜದ ದರ ಕಡಿಮೆಯಾಗಲು ಪ್ರಮುಖ ಕಾರಣ:

ಪ್ರತಿ ಸಲ ಭಟ್ಟಿಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಕಳಿಸುವ ಅರಿಷಿಣ ದರ .8 ರಿಂದ 9 ಸಾವಿರ ದರದಲ್ಲಿ ಸಾಂಗ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಈ ಬಾರಿ ಪ್ರತಿ ಕ್ವಿಂಟಲ್‌ ಅರಿಷಿಣಕ್ಕೆ ಕೇವಲ .5 ರಿಂದ 6 ಸಾವಿರ ದರವಾಗಿ ಕುಸಿದ ಕಾರಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೀಜ ಖರೀದಿಸಲು ಮುಂದಾಗುತ್ತಿಲ್ಲ. ಕಾರಣ ಅರಿಷಿಣ ಬೀಜ ನಾಟಿ ಮಾಡಿದ ಮೇಲೆ ಅದರ ನಿರ್ವಹಣೆ ವೆಚ್ಚದಾಯಕವಾಗಿದ್ದು, ಬೀಜಗಳ ಸಾಗಾಣಿಕೆ ವೆಚ್ಚದಲ್ಲಿ ಕೂಡಾ ಹೆಚ್ಚಾಗುತ್ತದೆ. ಇಷ್ಟೆಲ್ಲ ಮಾಡಿದಾಗಲೂ ಒಂದು ಎಕರೆಗೆ ಕೇವಲ 30 ಕ್ಷಿಂಟಲ್‌ ಅರಿಸಿಣ ಇಳುವರಿ ಬರುತ್ತದೆ ಎನ್ನುತ್ತಾರೆ ಈ ಭಾಗದ ರೈತರು.

ಆದ್ದರಿಂದ ಅರಿಷಿಣ ಬೆಳೆಯುವ ರೈತರು ಪರಾರ‍ಯಯ ಬೆಳೆಯಾಗಿ ಕಬ್ಬು ಬೆಳೆಯುವತ್ತ ಹೆಚ್ಚು ವಾಲುತ್ತಿದ್ದಾರೆ. ಕಾರಣ ಕಬ್ಬಿಗೆ ನಿರ್ವಹಣೆ ಕಡಿಮೆ ಮತ್ತು ಅರಿಸಿಣಕ್ಕೆ ವ್ಯವಸ್ಥೆ ಮಾಡಿದಷ್ಟುಕಬ್ಬಿಗೆ ವ್ಯವಸ್ಥೆ ಮಾಡಿದರೆ ಪ್ರತಿ ಎಕರೆಗೆ ಕನಿಷ್ಠವೆಂದರೂ 70 ರಿಂದ 80 ಟನ್‌ ಇಳುವರಿ ಪಡೆಯಬಹುದು. ಇದರಿಂದ ರೈತರ ಆದಾಯದಲ್ಲೂ ಹೆಚ್ಚಳವಾಗುತ್ತದೆಂದು ಹೇಳುತ್ತಾರೆ ರೈತ ಮುಖಂಡ ಜಗದಾಳ ಗ್ರಾಮದ ಬಸವಂತಪ್ಪ ಕರಿಗೌಡರ.

ಜಗದಾಳ ಮತ್ತು ನಾವಲಗಿ ಗ್ರಾಮಗಳ ಸುತ್ತ ಮುತ್ತಲಿನ ಭಾಗದಲ್ಲಿ ಪ್ರತಿವರ್ಷ ಕನಿಷ್ಠ ಅಂದಾಜು 100 ಟನ್‌ಗೂ ಹೆಚ್ಚು ಅರಿಷಿಣ ಬೀಜಗಳು ಮಾರಾಟವಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ 50 ಟನ್ನಿನಷ್ಟಾದರೂ ಮಾರಾಟವಾಗುತ್ತದೆ ಇಲ್ಲವೋ ಎಂಬ ದುಸ್ಥಿತಿ ಎದುರಾಗಿದೆ. ಮಾರಾಟಕ್ಕೆಂದು ಸಾರಿಗೆಗೆ ಮಾಡಿದ ವೆಚ್ಚ ಮತ್ತು ಮಾರಾಟವಾಗದೇ ಮರಳಬೇಕಾದರೆ ಮತ್ತೆ ಸಾಗಾಣಿಕೆ ವೆಚ್ಚವನ್ನು ಭರಿಸುವುದು ವಿಪರೀತ ನಷ್ಟಕರ ಎಂಬಂತಾಗಿದೆ ಎನ್ನುತ್ತಾರೆ ಮಾರಾಟಗಾರರು.

ಜಗದಾಳ ಗ್ರಾಮಕ್ಕೆ ಅರಿಷಿಣ ಬೀಜಗಳನ್ನು ಖರೀದಿಸಲು ರಬಕವಿ ಬನಹಟ್ಟಿ, ಜಮಖಂಡಿ, ಗೋಕಾಕ, ರಾಯಬಾಗ ಮತ್ತು ಅಥಣಿ ತಾಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ರೈತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಯಾರೂ ಬರುತ್ತಿಲ್ಲ.

ಅರಿಷಿಣ ಬೀಜಗಳಲ್ಲಿಯೂ ಕೂಡ ಸಾಕಷ್ಟುಕಲಬೆರೆಕೆಯ ಬೀಜಗಳು ಬರುತ್ತಿರುವುದರಿಂದ ಬೆಳೆದ ರೈತನಿಗೆ ಇಳುವರಿ ಬಾರದೇ ನಷ್ಟವಾಗುತ್ತಿರುವ ಕಾರಣ ರೈತರು ಅರಿಷಿಣ ಬೆಳೆಯ ಸಹವಾಸವೇ ಬೇಡ ಎಂದು ಕಬ್ಬು ಬೆಳೆಯತ್ತ ವಾಲುತ್ತಿದ್ದಾರೆ ಎಂದು ರಾಯಬಾಗ ತಾಲೂಕಿನ ರೈತ ಬಸವರಾಜ ಗುಳಪ್ಪನವರ ಪತ್ರಿಕೆಗೆ ತಿಳಿಸಿದರು...

ಮತ್ತೆ ಕೊರೋನಾ ಸದ್ದು ಮಾಡುತ್ತಿದೆ, ಒಳ್ಳೇದು ಅಂತ ಅರಿಷಿಣವನ್ನು ಬೇಕಾಬಿಟ್ಟಿ ತಿನ್ಬೇಡಿ!

ಪರಸ್ಥಿತಿ ಹೀಗೇ ಇದ್ದರೆ ಅರಿಷಿಣ ಬೆಲೆ ಗಗನಕ್ಕೆ

ರಬಕವಿ-ಬನಹಟ್ಟಿತಾಲೂಕಿನ ಜಗದಾಳ, ನಾವಲಗಿ, ಹಳಿಂಗಳಿ, ಹನಗಂಡಿ ಮೊದಲಾದೆಡೆ ಅರಿಸಿಣ ಕೃಷಿಕರಿಗೆ ಪರಿಶ್ರಮದ ಮತ್ತು ಹೆಚ್ಚು ಲಾಭಕರವಾದ ಬೆಳೆಯಾಗಿದ್ದರೂ ಈ ಬಾರಿ ಮಾತ್ರ ರೈತರು ಅದರತ್ತ ಮುಖ ಮಾಡುತ್ತಿಲ್ಲ. ಸದ್ಯದ ಮಾರುಕಟ್ಟೆದರ ಗಮನಿಸಿ ಅರಿಸಿಣ ಬೆಳೆಯಲು ರೈತರು ಮುಂದಾಗದಿದ್ದರೆ ಇದರಿಂದಾಗಿ ಈ ಬಾರಿ ಅತೀ ಕಡಿಮೆ ಇಳುವರಿ ಬಂದರೆ ಮುಂದಿನ ದಿನಗಳಲ್ಲಿ ಮತ್ತೆ ಅರಿಸಿಣದ ದರ ಮುಗಿಲು ನೋಡುವ ಸಾಧ್ಯತೆ ಹೆಚ್ಚಾಗಿದೆ. ಆಗ ಮತ್ತೆ ನಮ್ಮ ರೈತರು ಹೆಚ್ಚಿಗೆ ಬೆಳೆಯಲು ಎಲ್ಲರೂ ಮುಂದಾಗುತ್ತಾರೆ. ಹೆಚ್ಚಿನ ಫಸಲು ಮಾರುಕಟ್ಟೆಯಲ್ಲಿದ್ದಾಗ ಮತ್ತೆ ಬೆಲೆ ಕುಸಿತ ಖಚಿತ. ಲಾವಣಿ ಬೆಳೆಗಳ ಮಾಹಿತಿ ಮತ್ತು ಕೊರತೆಯ ಬಗ್ಗೆ ಮುಂಜಾಗ್ರತೆ ವಹಿಸಿ ರೈತರು ಸಮಯೋಚಿತವಾಗಿ ಮತ್ತು ಮಿಶ್ರ ಬೇಸಾಯ ಮಾಡುವ ಮೂಲಕ ಆರ್ಥಿಕ ಸುಭದ್ರತೆ ಹೊಂದುವಲ್ಲಿ ಮುತುವರ್ಜಿ ವಹಿಸಬೇಕಿರುವುದು ಇಂದಿನ ಅಗತ್ಯತೆಗಳಲ್ಲಿ ಬಹು ಮುಖ್ಯವಾಗಿದೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ