ರಾಜ್ಯದಲ್ಲಿ ಪದೆ ಪದೇ ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಅದನ್ನು ಹೇಗೆ ನಿಯಂತ್ರಿಸಬೇಕು? ಹವಾಮಾನ ವೈಪರಿತ್ಯ ಬದಲಾವಣೆಯ ಕ್ರಮಗಳೇನು ಎನ್ನುವ ಕುರಿತು ಚರ್ಚೆಯಾಗಬೇಕು. ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳದ ಕುರಿತು ಚರ್ಚಿಸಿ ಪರಿಹಾರ ಕ್ರಮಗಳನ್ನು ತಿಳಿಸಬೇಕು ಎಂದ ಸಿಎಂ ಬಸವರಾಜ ಬೊಮ್ಮಾಯಿ
ಬೆಳಗಾವಿ(ಡಿ.20): ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯವಾಗಿದೆ. ಹವಾಮಾನ ವೈಪರೀತ್ಯ, ಸುಸ್ಥಿರ ಅಭಿವೃದ್ಧಿ ಕುರಿತು ಸಮ್ಮೇಳನದಲ್ಲಿ ಚರ್ಚಿಸಿ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವ ಸಲಹೆಗಳನ್ನು ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಗೆ ಜೀರಿಗೆ ಸಭಾಂಗಣದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಜಿಯಾಗ್ರಾಫರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ 44ನೇ ಇಂಡಿಯಾ ಜಿಯಾಗ್ರಫಿ ಕಾಂಗ್ರೆಸ್‌ನ ಮೂರು ದಿನಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಮ್ಮೇಳನಗಳು ಬಹಳ ದಿನಗಳ ನಂತರ ಸೇರುವ ಸಭೆಗಳಾಗಬಾರದು. ರಾಜ್ಯದ ಅಭಿವೃದ್ಧಿಗೆ ಪೂರಕವಾಗುವ ಸಲಹೆ, ಯೋಜನೆಗಳನ್ನು ನೀಡುವ ಉಪಯುಕ್ತ ಕಾರ್ಯಕ್ರಮಗಳಾಗಬೇಕು. ರಾಜ್ಯದಲ್ಲಿ ಪದೆ ಪದೇ ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಅದನ್ನು ಹೇಗೆ ನಿಯಂತ್ರಿಸಬೇಕು? ಹವಾಮಾನ ವೈಪರಿತ್ಯ ಬದಲಾವಣೆಯ ಕ್ರಮಗಳೇನು ಎನ್ನುವ ಕುರಿತು ಚರ್ಚೆಯಾಗಬೇಕು. ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳದ ಕುರಿತು ಚರ್ಚಿಸಿ ಪರಿಹಾರ ಕ್ರಮಗಳನ್ನು ತಿಳಿಸಬೇಕು ಎಂದರು.
undefined
ಸಂಕ್ರಾಂತಿಗೆ ವಿದ್ಯುತ್ ಮಗ್ಗ ನೇಕಾರರಿಗೂ 5000 ರು.: ಸಿಎಂ ಬೊಮ್ಮಾಯಿ
ನೀರಿನ ನಿರ್ವಹಣೆ ಬಗ್ಗೆ ಯಾರೂ ಯೋಚನೆ ಮಾಡಿಲ್ಲ. ರಾಜ್ಯದಲ್ಲಿ 4 ಲಕ್ಷ ಹೆಕ್ಟೇರ್ ಪ್ರದೇಶ ಸವಳು-ಜವಳು ಭೂಮಿಯಾಗಿದೆ. ನಾವು ನೀರಾವರಿ ಯೋಜನೆಗೆ ಹಣ ವೆಚ್ಚ ಮಾಡುತ್ತೇವೆ. ಅದರಿಂದ ಜಮೀನು ಹಾಳು ಮಾಡುವುದಾದರೆ ಏನು ಪ್ರಯೋಜನವಾಗುವುದಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸವಳು ಜವಳು ನಿವಾರಣೆಗೆ ಯೋಜನೆ ರೂಪಿಸಿ ಒಂದೂವರೆ ಲಕ್ಷ ಎಕರೆ ಜಮೀನು ಸವಳು ಜವಳು ನಿವಾರಿಸಿದ್ದೆವು. ನೀರು ಯಾರಿಗೆ ಸೇರಿದೆ ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ. ಇದು ವ್ಯಕ್ತಿಗೆ ಸೇರಿರುವುದಾ?, ಸಮುದಾಯಕ್ಕೆ ಸೇರಿದ್ದಾ?, ಪ್ರಾಕೃತಿಕ ಸಂಪತ್ತನ್ನು ಬಳಕೆ ಮಾಡುವಲ್ಲಿ ನಾವು ಸರಿಯಾದ ಮಾರ್ಗ ಅನುಸರಿಸುತ್ತಿಲ್ಲ. ಪ್ರಾಕೃತಿಕ ಸಂಪತ್ತನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ. ನಾವು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗದಿದ್ದರೇ ನಾವು ಅವರ ಭವಿಷ್ಯದಿಂದ ಅದನ್ನು ಕದಿಯುತ್ತಿದ್ದೇವೆ ಎಂದರ್ಥ ಎಂದು ಕಳವಳ ವ್ಯಕ್ತಪಡಿಸಿದರು.
ಅಂಬೇಡ್ಕರ್ ಆದರ್ಶಗಳೇ ಆಡಳಿತಕ್ಕೆ ಪ್ರೇರಣೆ: ಸಿಎಂ ಬೊಮ್ಮಾಯಿ
ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಸಿ.ಸಿ.ಪಾಟೀಲ, ಸಿ.ಎನ್.ಅಶ್ವತ್‌ನಾರಾಯಣ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜೈವಿಕತೆ ಮತ್ತು ಆರ್ಥಿಕತೆ ಸಮಾನಾಂತರವಾಗಿ ಹೋಗುತ್ತದೆ. ಜೈವಿಕತೆಗಿಂತ ಆರ್ಥಿಕತೆ ವೇಗವಾಗಿ ಹೋಗುತ್ತಿದೆ. ಈಗ ಜೈವಿಕ ಆರ್ಥಿಕತೆ ಬರಬೇಕಿದೆ. ನಾವು ಜೈವಿಕ ನೀತಿ ಜಾರಿಗೆ ತಂದಿದ್ದೇವೆ. ಜೈವಿಕ ಆರ್ಥಿಕತೆಗೆ ನನ್ನ ಬಜೆಟ್‌ನಲ್ಲಿ .100 ಕೋಟಿ ಮೀಸಲಿಟ್ಟಿದ್ದೇನೆ. ಅನೇಕ ಪ್ರಾಣಿಗಳು ಮನುಷ್ಯನಿಗಿಂತ ಭಾರ ಹಾಗೂ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಮನುಷ್ಯ ಮಾತ್ರ ಸುದೀರ್ಘ ಜೀವನ ನಡೆಸುವ ಜೀವಿಯಾಗಿದ್ದಾನೆ. ಮನುಷ್ಯ ಎಲ್ಲ ವಾತಾವರಣದಲ್ಲಿಯೂ ಬದುಕುವ ಜೀವಿಯಾಗಿದೆ. ಕಾರಣ ಎಲ್ಲದಕ್ಕೂ ಹೊಂದಿಕೊಳ್ಳುವ ಗುಣ ಮಾನವನಿಗಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.