Jul 18, 2018, 9:32 PM IST
ಸಿನಿಮಾ ಸ್ಟಾರ್‌ಗ ಳು, ಕ್ರಿಕೆಟ್ ಪ್ಲೇಯರ್ಸ್‍ಗಳು, ರಾಜಕಾರಣಿಗಳಿಗೆ ಅಭಿಮಾನಿಗಳಿರುವಂತೆ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಗೂ ಅಭಿಮಾನಿಗಳು ಹುಟ್ಕೊಂಡಿದ್ದಾರೆ. ಜನ ತಮ್ಮ ನೆಚ್ಚಿನ ನಾಯಕನ ಭಾವಚಿತ್ರವನ್ನ ಆಟೋ, ಬೈಕ್, ಕಾರುಗಳ ಮೇಲೆ ಹಾಕಿಕೊಳ್ಳುವಂತೆ ಕಾಫಿನಾಡಿನ ಅಣ್ಣಾಮಲೈ ಅಭಿಮಾನಿಗಳು ತಮ್ಮ ಹೀರೋವಿನ ಫೋಟೋವನ್ನ ಆಟೋಗಳ ಮೇಲೆ ಹಾಕ್ಕೊಂಡಿದ್ದಾರೆ. ಆಟೋ ಚಾಲಕನೊಬ್ಬ ತನ್ನ ಆಟೋ ಹಿಂಬದಿ ಅಣ್ಣಾಮಲೈ ಭಾವಚಿತ್ರದ ಕೆಳಗೆ ಅಭಿಮಾನಿ ಎಂದು ಹಾಕಿಕೊಂಡು, ಮತ್ತೊಂದು ಬದಿ ಅಬ್ದುಲ್ ಕಲಾಂ ಭಾವಚಿತ್ರದ ಕೆಳಗೆ ಸ್ವಾಭಿಮಾನಿ ಅಂತ ಬರೆದುಕೊಂಡಿದ್ದಾರೆ.