ಈ ಬಾರಿ ಪೂರ್ವ ಮುಂಗಾರು ಒಂದು ತಿಂಗಳು ತಡವಾಗಿದ್ದು, ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಮುಸುಕಿನ ಜೋಳ ಬಿತ್ತನೆ ಹೆಚ್ಚಳವಾಗಿದೆ. ರೈತರು ಹೆಚ್ಚು ಓಲೈಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್. ಆಬಿದ್ ತಿಳಿಸಿದರು.
ಚಾಮರಾಜನಗರ : ಈ ಬಾರಿ ಪೂರ್ವ ಮುಂಗಾರು ಒಂದು ತಿಂಗಳು ತಡವಾಗಿದ್ದು, ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಮುಸುಕಿನ ಜೋಳ ಬಿತ್ತನೆ ಹೆಚ್ಚಳವಾಗಿದೆ. ರೈತರು ಹೆಚ್ಚು ಓಲೈಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್. ಆಬಿದ್ ತಿಳಿಸಿದರು.
ನಗರದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಅಖಿಲ ಭಾರತ ಸುಸಂಘಟಿತ ಜೋಳ ಮತ್ತು ಹತ್ತಿ ಬೆಳೆಗಳ ಪ್ರಾಯೋಜನೆ ಹಾಗೂ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಮುಂಗಾರು ತಾಂತ್ರಿಕ ಕಾರ್ಯಾಗಾರವನ್ನು ಕೇಂದ್ರದ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
undefined
ಈ ನಿಟ್ಟಿನಲ್ಲಿ ಪರ್ಯಾಯವಾಗಿ ದಿಂದ ಪರಿಚಯಿಸಿರುವ ಸುಧಾರಿತ, ಅಲ್ಪಾವಧಿ ದ್ವಿದಳ ಧಾನ್ಯ ತಳಿಗಳ ಬೇಸಾಯವನ್ನು ಕೈಗೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ರೈತರು ಪೊಟ್ಯಾಷ್ ಗೊಬ್ಬರವನ್ನು ಬಳಸದಿರುವುದು ಬೆಳೆಗಳಲ್ಲಿ ರೋಗ ಕೀಟ ಹಾಗೂ ಇತರೆ ಸಮಸ್ಯೆಗಳಿಗೆ ಆಸ್ಪದವಾಗಿದ್ದು, ಪೊಟ್ಯಾಶ್‌ಯುಕ್ತ ಸಂಯುಕ್ತ ರಸಗೊಬ್ಬರಗಳನ್ನು ಬಳಸಲು ತಿಳಿಸಿದರು. ಜೊತೆಗೆ ಮಣ್ಣು ಪರೀಕ್ಷೆ ಆಧಾರಿತವಾಗಿ ಸಮತೋಲನ ಸಸ್ಯಪೋಷಣೆಗೆ ಆದ್ಯತೆ ನೀಡಿ ಮಣ್ಣಿನ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ. ದೊರಸ್ವಾಮಿ ಅವರು ಈ ರೀತಿಯ ವಿಸ್ತರಣಾ ಕಾರ್ಯಕ್ರಮಗಳು ರೈತರಿಗೆ ಉತ್ತಮ ತಾಂತ್ರಿಕ ಮಾಹಿತಿ ಕೊಡುವ ಒಂದು ವ್ಯವಸ್ಥೆಯಾಗಿದ್ದು ಒಂದೇ ವೇದಿಕೆಯಲ್ಲಿ ವಿಜ್ಞಾನಿಗಳು ಮತ್ತು ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ರೈತ ಬಾಂಧವರಿಗೆ ಲಭ್ಯವಾಗಿರುತ್ತಾರೆ, ಈ ನಿಟ್ಟಿನಲ್ಲಿ ರೈತ ಬಾಂಧವರು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಉತ್ತಮ ಬೇಸಾಯ ಕೈಗೊಳ್ಳಬೇಕೆಂದು ತಿಳಿಸಿದರು. ಬೆಳೆ ಬೇಸಾಯಕ್ಕೂ ಮೊದಲು, ಶಿಫಾರಸ್ಸಿನ ಪ್ರಮಾಣದ ಸಾವಯವ ಗೊಬ್ಬರಗಳ ಬಳಕೆ, ಹಗುರ ಮಣ್ಣಿನಲ್ಲಿ ಕೆರೆಗೋಡಿನ ಬಳಕೆ ಮಾಡಬೇಕೆಂದು ತಿಳಿಸುತ್ತಾ ವಿವೇಚನೆ ಇಲ್ಲದೆ ರಾಸಾಯನಿಕ ಗೊಬ್ಬರಗಳನ್ನು ಬಳಸಿದರೆ ಅದು ಮಣ್ಣಿನ ನಾಶಕ್ಕೆ ಕಾರಣವಾಗಿ ವ್ಯವಸಾಯ ಲಾಭಕರವಾಗುವುದಿಲ್ಲ ಎಂದು ತಿಳಿಸಿದರು. ವ್ಯವಸಾಯದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಇಳುವರನ್ನು ಪಡೆದು, ಮಣ್ಣು ನೀರು ಸಂರಕ್ಷಣೆಯಾಗುವುದೆಂದು ತಿಳಿಸಿದರು. ಬೆಂಗಳೂರು ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಓ.ಆರ್. ನಟರಾಜು ಮಾತನಾಡಿ, ಕೃಷಿಯಲ್ಲಿ ಹೈನುಗಾರಿಕೆ ಅಳವಡಿಕೆಯ ಉದ್ದೇಶಗಳನ್ನು ಮನನ ಮಾಡಿಕೊಟ್ಟರು. ಕಡಿಮೆ ಖರ್ಚಿನಲ್ಲಿ ಪಶು ಸಂಗೋಪನೆ ಕೈಗೊಳ್ಳಲು ಆಹಾರ ನಿರ್ವಹಣೆ ಮತ್ತು ಆರೋಗ್ಯ ನಿರ್ವಹಣೆಗೆ ಸುಲಭ ಹಾಗೂ ಸ್ಥಳೀಯ ಕ್ರಮಗಳನ್ನು ಅನುಸರಿಸಬೇಕು. ರೈತರು ಕೃತಕ ಆಹಾರಗಳಿಗೆ ಹೆಚ್ಚಿನ ಖರ್ಚು ಮಾಡುತ್ತಿದ್ದು, ಸ್ಥಳೀಯವಾಗಿ ಸಿಗುವ ಏಕದಳ ಧಾನ್ಯ, ದ್ವಿದಳ ಧಾನ್ಯಗಳು ಹಾಗೂ ಇತರ ಮೇವಿನ ಬೆಳೆಗಳ ಸಂಯೋಜನೆ ಮಾಡಿ ಕಡಿಮೆ ಖರ್ಚಿನಲ್ಲಿ ಪಶು ಆಹಾರ ತಾವೇ ಉತ್ಪಾದಿಸಿ ನಿರ್ವಹಿಸಬೇಕು. ಶುಚಿ ಹಾಲು ಉತ್ಪಾದನೆಗೆ ಅಗತ್ಯ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲು ಕರೆ ನೀಡಿದರು.
ಒಣಮೇವು ಪೌಷ್ಟೀಕರಿಸುವ ಸುಲಭ ಪದ್ಧತಿಗಳನ್ನು ತಿಳಿಸಿಕೊಟ್ಟರು. ಕೋಳಿ ಸಾಕಾಣಿಕೆಯಲ್ಲಿ ಕಂಡ ಬರುವ ಪ್ರಮುಖ ರೋಗಗಳ ನಿರ್ವಹಣಾ ಕ್ರಮಗಳನ್ನು ವಿವರಿಸಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಗಿರೀಶ್ ಮಾತನಾಡಿ ಸಮಗ್ರ ಕೃಷಿಯಲ್ಲಿ ರೇಷ್ಮೆ ಬೇಸಾಯ ಬಹಳ ಸೂಕ್ತವಾಗಿದ್ದು, ಇದು ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ನಿರಂತರ ಆದಾಯಕ್ಕೆ ಪೂರಕವಾಗಿದೆ, ರೈತರು ನಮ್ಮ ಜಿಲ್ಲೆಯಲ್ಲೇ ಇರುವ ಮಾರುಕಟ್ಟೆ ಬಳಕೆ ಮಾಡಿಕೊಳ್ಳಲು ಉತ್ತಮವಾಗಿ ರೇಷ್ಮೆ ಉತ್ಪಾದನೆ ಕೈಗೊಳ್ಳಬೇಕು. ಇಲಾಖೆ ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿ ಅವರ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಡಾ.ಮನೋಹರ್ ಸರ್ಕಾರದ ಪಶುಸಂಗೋಪನೆ ಕುರಿತಾದ ಯೋಜನೆಗಳ ಬಗ್ಗೆ ವಿವರಣೆ ನೀಡಿ ಸೂಕ್ತ ಲಸಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು. ಇದಲ್ಲದೇ, ಜಾನುವಾರುಗಳ ವಿಮೆ ಮಾಡಿಸುವುದರಿಂದ ಆಗುವ ಅನುಕೂಲಗಳು ಹಾಗೂ ಅದಕ್ಕಿರುವ ಮಾನದಂಡಗಳ ಬಗ್ಗೆ ತಿಳಿಸಿಕೊಟ್ಟರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ, ರಾಷ್ಟ್ರೀಯ ಬೀಜ ಪ್ರಾಯೋಜನೆಯ ಪ್ರಾಧ್ಯಾಪಕ ಡಾ.ರಮಣಪ್ಪ ಸುಧಾರಿತ ರಾಗಿ, ಜೋಳ, ತೊಗರಿ, ಸೂರ್ಯಕಾಂತಿ ಮತ್ತು ಇತರ ಧಾನ್ಯ ಬೆಳೆಗಳ ತಳಿಗಳ ಬಗ್ಗೆ ವಿವರಣೆ ನೀಡಿ ಅವುಗಳ ಅವಧಿ ಮತ್ತು ಅಳವಡಿಸಿಕೊಳ್ಳುವ ಕಾಲಗಳ ವಿವರಣೆ ನೀಡಿದರು.
ರೈತರು ಬಿಜೋತ್ಪಾದನೆ ಮೂಲಕ ಶೇಕಡ ೧೫ ರಿಂದ ೨೦ ರಷ್ಟು ಹೆಚ್ಚಿನ ಆದಾಯವನ್ನು ಆಯ್ದ ಬೆಳೆಗಳಲ್ಲಿ ಪಡೆದುಕೊಳ್ಳಬೇಕೆಂದು ತಿಳಿಸುತ್ತಾ ಮಳೆ ಅನಿಶ್ಚಿತತೆ ಸಂದರ್ಭದಲ್ಲಿ ಪರ್ಯಾಯ ಬೆಳೆ ಯೋಜನೆಗೆ ಪೂರಕವಾದ ಅಲ್ಪಾವಧಿ ಬೆಳೆ ತಳಿಗಳ ಬಗ್ಗೆ ಮತ್ತು ಆ ತಳಿಗಳ ವಿಶೇಷತೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಅಖಿಲ ಭಾರತ ಸುಸಂಘಟಿತ ಜೋಳ ಬೆಳೆ ಪ್ರಾಯೋಜನೆಯ ಮುಖ್ಯಸ್ಥ ಡಾ. ಸೋಮು,ಜಿ ತಮ್ಮ ಕೇಂದ್ರದಿಂದ ಜಿಲ್ಲೆಯ ರೈತರಿಗಾಗಿ ಬಿಡುಗಡೆಗೊಳಿಸಿರುವ ಸುಧಾರಿತ ಜೋಳದ ಮೇವಿನ ಹಾಗೂ ಕಾಳಿನ ತಳಿಗಳ ವಿಶೇಷತೆಗಳನ್ನು ರೈತರಿಗೆ ತಿಳಿಸಿ ರೈತರ ಮಟ್ಟದಲ್ಲಿ ಉತ್ತಮ ಬೀಜವನ್ನು ಆಯ್ಕೆ ಮಾಡಿ ಸಂರಕ್ಷಿಸುವ ವೈಜ್ಞಾನಿಕ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಪ್ರ್ರಾಯೋಜನೆಯ ಮುಖ್ಯಸ್ಥ ಡಾ.ಶಶಿಕುಮಾರ್,ಸಿ. ಪ್ರಸ್ತುತ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು ಕಪ್ಪುಮಣ್ಣಿನ ಪ್ರದೇಶಗಳಲ್ಲಿ ಹೆಚ್ಚಿನ ನೀರನ್ನು ಬಸಿಯುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡುತ್ತಾ ಮುಂದೆ ಕೈಗೊಳ್ಳುವ ಇತರೆ ಕಾರ್ಯಗಳಲ್ಲಿ ಬೀಜೋಪಚಾರಗಳನ್ನು, ಅದರಲ್ಲೂ ದ್ವಿದಳಧಾನ್ಯ ಬೆಳೆಗಳಲ್ಲಿ ಬೆಳೆಗಳಲ್ಲಿ ಜೈವಿಕ ಗೊಬ್ಬರಗಳ ಬೀಜೋಪಚಾರವನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಸೂರ್ಯಕಾಂತಿ ಮತ್ತು ಜೋಳ ಬೆಳೆಗಳಲ್ಲಿ ಸಸಿಗಳನ್ನು ವಿರಳ ಮಾಡಿ ಸರಿಯಾದ ಸಸಿ ಸಂಖ್ಯೆಯನ್ನು ಕಾಪಾಡಿಕೊಂಡು ಉತ್ತಮ ಬೆಳವಣಿಗೆ ಹಾಗು ಇಳುವರಿ ಪಡೆಯಲು ವ್ಯವಸ್ಥಿತರಾಗಬೇಕೆಂದು ಮತ್ತು ಸೂರ್ಯಕಾಂತಿ ಬೆಳೆಯಲ್ಲಿ ಬೋರಾಕ್ಸ್ ಸಿಂಪರಣೆಯನ್ನು ಮತ್ತು ಜೇನುಪೆಟ್ಟಿಗೆ ಇಡುವ ಚಟುವಟಿಕೆಯನ್ನು ಅಳವಡಿಸಿ ಪರಾಗಸ್ಪರ್ಶ ಕ್ರಿಯೆ ಹೆಚ್ಚಿಸಿ, ಇಳುವರಿ ಹೆಚ್ಚಿಸಲು ಸಹಕಾರವಾಗುವುದೆಂದು ತಿಳಿಸಿಕೊಟ್ಟರು.
ಅದೇ ರೀತಿ ಮುಂದಿನ ದಿನಗಳಲ್ಲಿ ಬಿತ್ತುವ ಕಡಲೆಕಾಯಿ ಬೆಳೆಗೆ ಕಡ್ಡಾಯವಾಗಿ ಜಿಪ್ಸಂ ಬಳೆಸಲು ತಿಳಿಸಿ, ಇದರಿಂದ ಕಾಳು ಗಟ್ಟಿಗೊಂಡು, ಇಳುವರಿ ಹೆಚ್ಚಳವಾಗಿ, ಉತ್ತಮ ಎಣ್ಣೆ ಅಂಶ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕೀಟಶಾಸ್ತ್ರ ವಿಜ್ಞಾನಿ ಡಾ.ಶಿವರಾಯ ನಾವಿ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತಿಳಿಸಿಕೊಟ್ಟು ರೈತರು ಸ್ಥಳೀಯವಾಗಿ ತಯಾರಿಸಿ ಬಳಸಬಹುದಾದ ಸಾವಯವ ಸಸ್ಯ ಸಂರಕ್ಷಣಾ ಪರಿಕರಗಳ ಬಗ್ಗೆ ವಿವರಣೆ ನೀಡಿದರು.
ತೋಟಗಾರಿಕಾ ವಿಜ್ಞಾನಿ ಡಾ.ಮೋಹನ್‌ಕುಮಾರ್.ಎ.ಬಿ ಸುಧಾರಿತ ತೋಟಗಾರಿಕಾ ಬೆಳೆ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಬೀಜೋತ್ಪಾದನೆ ಮಾಡಲು ಆಸಕ್ತಿ ಇರುವ ರೈತರು ಕೇಂದ್ರವನ್ನು ಸಂಪರ್ಕಿಸಲು ಮನವಿ ಮಾಡಿದರು. ಮುಂದುವರೆದು, ಮುಂಗಾರು ಹಂಗಾಮಿನ ಬೆಳೆ ನಿರ್ವಹಣೆಯನ್ನು ವೈಜ್ಞಾನಿಕ ಶಿಫಾರಸ್ಸಿನ ಮೇರೆಗೆ ಕೈಗೊಂಡು ಮಾರುಕಟ್ಟೆ ಪೂರಕ ಉತ್ಪನ್ನಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಡಸೋಗೆ, ಹರದನಹಳ್ಳಿ, ಪುತ್ತನಪುರ, ಬೂದಿಪಡಗ, ಮುನೇಶ್ವರ ಕಾಲೋನಿ, ಅರಕಲವಾಡಿ, ಯಳಂದೂರು, ವೈ.ಕೆ.ಮೋಳೆ, ಇರಸವಾಡಿ ಹಾಗೂ ಇತರೆ ಗ್ರಾಮಗಳ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ವಿಜ್ಞಾನಿಗಳ ಸಂವಾದ ಕೈಗೊಂಡು ರೈತರ ಹಲವಾರು ವ್ಯವಸಾಯ ಸಂಬಂಧಿತ ಸಮಸ್ಯೆಗಳಾದ ಬೀಜೋಪಚಾರ, ಕಳೆನಿರ್ವಹಣೆ, ರೋಗಗಳ ನಿರ್ವಹಣೆ, ಕೀಟಗಳ ನಿರ್ವಹಣೆ ಹಾಗೂ ನೀರು ನಿರ್ವಹಣೆ ಕುರಿತ ರೈತರ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಸೂಕ್ತ ಹಾಗು ಸಮಂಜಸ ಪರಿಹಾರಗಳನ್ನು ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರದ ರೇಷ್ಮೆ ಕೃಷಿ ವಿಜ್ಞಾನಿ ಡಾ. ಚಂದ್ರಶೇಖರ್. ಎಸ್. ಕಳ್ಳೀಮನಿಯವರು ಮುಂಗಾರು ತಾಂತ್ರಿಕ ಕಾರ್ಯಾಗಾರದ ಉದ್ದೇಶಗಳು ಹಾಗೂ ಹಿನ್ನೆಲೆಯನ್ನು ವಿವರಿಸಿದರು.
ಕೇಂದ್ರದ ಗೃಹ ವಿಜ್ಞಾನಿ ಡಾ. ದೀಪ,ಜೆ. ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತ ಕೃಷಿ ತಂತ್ರಜ್ಞಾನಗಳ ಸಂಬಂಧಿತ ಒಂದು ವಸ್ತು ಪ್ರದರ್ಶನ ಮತ್ತು ಸುಧಾರಿತ ಆಯ್ದ ಬೆಳೆಗಳ ತಳಿ ಬೀಜಗಳ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಆದಾಯ ದ್ವಿಗುಣಗೊಳಿಸಿಕೊಂಡಿರುವ ಆಯ್ದ ಸಮಗ್ರ ಕೃಷಿಕರನ್ನು ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು.
ಜಿಲ್ಲೆಯಲ್ಲಿ ಹಲವಾರು ಕಡೆ ಉತ್ತಮವಾದ ಮುಂಗಾರು ಮಳೆಯಾಗಿದ್ದು, ಬಿತ್ತನೆ ಪೂರ್ವ ಚಟುವಟಿಕೆಗಳಲ್ಲಿ ರೈತರು ತೊಡಗಿದ್ದು, ಬಿತ್ತನೆ ಹಾಗೂ ನಂತರ ನಿರ್ವಹಣಾ ಕ್ರಮಗಳ ತಾಂತ್ರಿಕ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಡೆದುಕೊಳ್ಳಿ.ಆಯ್ದ ಬೆಳೆಗಳ ಉತ್ತಮ ಗುಣಮಟ್ಟದ ಸುಧಾರಿತ ತಳಿಗಳ ಬಿತ್ತನೆ ಬೀಜವು ಕೇಂದ್ರದಲ್ಲಿ ನಿಗದಿತ ಬೆಲೆಗೆ ಲಭ್ಯವಿದ್ದು ರೈತರು ತಮಗೆ ಸೂಕ್ತವಾದ ಬೆಳೆ ತಳಿಗಳನ್ನು ಖರೀದಿಸಿ ಬೆಳೆಯಲು ಮುಂದಾಗಿ.
ಡಾ.ಯೋಗೇಶ್,ಜಿ.ಎಸ್.,ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ, ಚಾಮರಾಜನಗರ