ನಾಡಿನ ಜೀವನದಿ ಎಂದು ಕರೆಸಿಕೊಳ್ಳುವ ಕಾವೇರಿ ನದಿ ನಾಡಿನುದ್ಧಕ್ಕೂ ಹರಿದು ಲಕ್ಷಾಂತರ ರೈತರ ಬದುಕನ್ನು ಹಸನು ಮಾಡುತ್ತದೆ. ಆದರೆ ತವರು ಜಿಲ್ಲೆ ಕೊಡಗಿನಲ್ಲಿಯೇ ಕಾವೇರಿ ಒಡಲು ಬತ್ತುತ್ತಿದ್ದು ಜಿಲ್ಲೆಗೆ ಅಷ್ಟೇ ಅಲ್ಲ ನಾಡಿಗೆ ಕಂಟಕ ಎದುರಾಗುತ್ತಾ ಎನ್ನುವ ಆತಂಕ ಶುರುವಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.29) : ನಾಡಿನ ಜೀವನದಿ ಎಂದು ಕರೆಸಿಕೊಳ್ಳುವ ಕಾವೇರಿ ನದಿ ನಾಡಿನುದ್ಧಕ್ಕೂ ಹರಿದು ಲಕ್ಷಾಂತರ ರೈತರ ಬದುಕನ್ನು ಹಸನು ಮಾಡುತ್ತದೆ. ಆದರೆ ತವರು ಜಿಲ್ಲೆ ಕೊಡಗಿನಲ್ಲಿಯೇ ಕಾವೇರಿ ಒಡಲು ಬತ್ತುತ್ತಿದ್ದು ಜಿಲ್ಲೆಗೆ ಅಷ್ಟೇ ಅಲ್ಲ ನಾಡಿಗೆ ಕಂಟಕ ಎದುರಾಗುತ್ತಾ ಎನ್ನುವ ಆತಂಕ ಶುರುವಾಗಿದೆ.
ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ(Cauvery river) ಇಡೀ ವರ್ಷ ನಾಡಿನುದ್ಧಕ್ಕೂ ಹರಿದು ರೈತರ ಬದುಕನ್ನು ಹಸನು ಮಾಡುತ್ತಾಳೆ. ರೈತರು ಅಷ್ಟೇ ಅಲ್ಲ ರಾಜ್ಯದ ಹಲವು ಜಿಲ್ಲೆಗಳ ಕೋಟ್ಯಂತರ ಜನರಿಗೆ ಜೀವ ಜಲವನ್ನು ಪೂರೈಸುತ್ತಿತ್ತು. ಆದರೆ ಈ ಬಾರಿ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ನದಿ ಆಗಸ್ಟ್ ತಿಂಗಳಲ್ಲಿಯೇ ಅದರಲ್ಲೂ ತವರು ಜಿಲ್ಲೆ ಕೊಡಗಿನಲ್ಲೇ ಬತ್ತುವ ದುಃಸ್ಥಿತಿ ಬಂದಿದೆ.
ಕಾವೇರಿ ನದಿ ನೀರು ವಿವಾದ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶ!
ಹೀಗಾಗಿ ಇದು ಕೊಡಗು ಜಿಲ್ಲೆಗೂ ಕುಡಿಯುವ ನೀರಿಗೂ ಆತಂಕ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳು ಎಂದರೆ ಬಿಟ್ಟು ಬಿಡದೆ ಮಳೆ ಸುರಿಯುವ ಅವಧಿ. ಈ ಸಮಯದಲ್ಲಿ ಕಾವೇರಿ ನದಿ ಪ್ರವಾಹದ ರೂಪದಲ್ಲಿ ಹರಿಯುತಿತ್ತು. ಆ ಪರಿಸ್ಥಿತಿಯನ್ನು ಕಳೆದ ನಾಲ್ಕೈದು ವರ್ಷಗಳ ಕಾಲ ತಾವೆಲ್ಲರೂ ನೋಡಿಯೇ ಇದ್ದೀರಾ. ಆದರೆ ಈ ಬಾರಿ ಜುಲೈ ತಿಂಗಳವರೆಗೆ ಬಾರದ ಮಳೆ ಜುಲೈ ತಿಂಗಳ ಅಂತ್ಯದಲ್ಲಿ ತೀವ್ರವಾಗಿ ಸುರಿದಿತ್ತು. ಮತ್ತೆ ಆಗಸ್ಟ್ ತಿಂಗಳಲ್ಲಿ ಮಳೆ ಬಹುತೇಕ ಕಡಿಮೆಯಾಗಿತ್ತು. ಇದೀಗ ಇಡೀ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಕಾವೇರಿ ನದಿ ಕೂಡ ಬತ್ತುವ ಹಂತಕ್ಕೆ ಬಂದಿದೆ.
ಒಂದೆಡೆ ಕಾವೇರಿ ನದಿ ಬತ್ತುತ್ತಿದ್ದರೆ ಮತ್ತೊಂದೆಡೆ ತಮಿಳುನಾಡು ನಿತ್ಯ 25 ಸಾವಿರ ಕ್ಯುಸೆಕ್ ನೀರನ್ನು ತಮಗೆ ಹರಿಸಬೇಕು ಎಂದು ತಾಕೀತು ಮಾಡುತ್ತಿದೆ. ಮತ್ತೊಂದೆಡೆ ಕಾವೇರಿ ನೀರು ನಿರ್ವಹಣಾ ಮಂಡಳಿಯು ನಿತ್ಯ 5 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚಿಸಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಕೃಷಿ ಮತ್ತು ಕುಡಿಯುವ ನೀರನ್ನು ಪೂರೈಸುತ್ತಿದ್ದ ಕೆಆರ್ಎಸ್ ಕೂಡ ಬರಿದಾಗುತ್ತಿರುವ ನಡುವೆಯೇ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸೆಪ್ಟೆಂಬರ್ ತಿಂಗಳಾದರೂ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆ ಸುರಿಯುತ್ತಿದ್ದರಿಂದ ಸಹಜವಾಗಿಯೇ ಕಾವೇರಿ ನದಿಯಲ್ಲಿ ಡಿಸೆಂಬರ್ ಅಥವಾ ಜನವರಿ ತಿಂಗಳವರೆಗೆ ಭಾರೀ ಪ್ರಮಾಣದ ನೀರು ಹರಿಯುತಿತ್ತು. ಆದರೆ ಈ ಬಾರಿ ಈಗಾಗಲೇ ನದಿ ಬತ್ತುವ ಹಂತಕ್ಕೆ ತಲುಪಿದ್ದು ಇನ್ನೊಂದು ತಿಂಗಳು ಇದೇ ರೀತಿ ತುಂಬಾ ಬಿಸಿಲ ಛಾಯೆ ಮುಂದುವರಿದರೆ ಸೆಪ್ಟೆಂಬರ್ ತಿಂಗಳಲ್ಲೇ ಕಾವೇರಿ ಪೂರ್ಣ ಬತ್ತಿ ಹೋದರೆ ಅಚ್ಚರಿಯೇನಲ್ಲ. ಇಂತಹ ಸ್ಥಿತಿಯಲ್ಲಿ ತಮಿಳುನಾಡು ತಮಗೆ ನೀರು ಹರಿಸಬೇಕು ಎಂದು ಕೇಳಿದರೆ ಅದ್ಹೇಗೆ ಸಾಧ್ಯ ಎಂದು ರೈತ ವಿಶ್ವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆ ವರ್ಗಾವಣೆಗೆ ಹರಾಜು ನಡೆಯುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ ಆರೋಪ
ಒಂದೆಡೆ ಕಾವೇರಿ ನದಿಯ ಒಡಲು ಬತ್ತುತ್ತಿದ್ದರೆ, 1.8 ಟಿಎಂಸಿ ಸಾಮರ್ಥ್ಯದ ಚಿಕ್ಲಿಹೊಳೆ ಜಲಾಶಯವೂ ಖಾಲಿಯಾಗುವ ಹಂತಕ್ಕೆ ತಲುಪಿದೆ. ಮಗದೊಂದೆಡೆ ಹಾರಂಗಿ ಜಲಾಶಯದಲ್ಲೂ ಸಂಗ್ರಹವಾಗಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಜಲಾಶಯವನ್ನು ನಂಬಿಕೊಂಡು ವಿವಿಧ ಬೆಳೆಯನ್ನು ಬೆಳೆದಿರುವ ಕುಶಾಲನಗರ ತಾಲ್ಲೂಕು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.