ಬರಗಾಲದ ಛಾಯೆಯ ನಡುವೆಯೂ ಪ್ರಸಕ್ತ ವರ್ಷ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆ ₹3187 ಕೋಟಿ ವಹಿವಾಟು ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆ ಗೌರವಕ್ಕೆ ಪಾತ್ರವಾಗಿದೆ!
ಶಿವಾನಂದ ಮಲ್ಲನಗೌಡ್ರ
ಬ್ಯಾಡಗಿ (ಮೇ.20): ಬರಗಾಲದ ಛಾಯೆಯ ನಡುವೆಯೂ ಪ್ರಸಕ್ತ ವರ್ಷ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆ ₹3187 ಕೋಟಿ ವಹಿವಾಟು ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆ ಗೌರವಕ್ಕೆ ಪಾತ್ರವಾಗಿದೆ! ಆರಂಭಿಕ ವರ್ಷ (1952) ಗಳಲ್ಲಿ ಕೇವಲ ನೂರಾರು ಕೋಟಿಗೆ ಸೀಮಿತವಾಗಿದ್ದ ಮೆಣಸಿನಕಾಯಿ ವಹಿವಾಟು ಇದೀಗ ₹3 ಸಾವಿರ ಕೋಟಿಗೂ ಅಧಿಕವಾಗಿದ್ದು, ವಿಶ್ವದಲ್ಲಿಯೇ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿ ಬ್ಯಾಡಗಿ ಹೊರಹೊಮ್ಮಿದೆ. ಕಳೆದ ವರ್ಷ ₹2287 ಕೋಟಿ ವಹಿವಾಟು ಆಗಿ, ಇಲ್ಲಿನ ಎಪಿಎಂಸಿಗೆ ₹13.72 ಕೋಟಿ ಮಾರುಕಟ್ಟೆ ಶುಲ್ಕ (ಸೆಸ್) ಸಂಗ್ರಹವಾಗಿತ್ತು.
undefined
ಪ್ರಸಕ್ತ ವರ್ಷ ದಾಖಲೆಯ ₹3187 ಕೋಟಿ ವಹಿವಾಟು ನಡೆಯುವ ಮೂಲಕ ₹19.12 ಕೋಟಿ ಸೆಸ್ ಸಂಗ್ರಹವಾಗಿದೆ. ಕಳೆದ ವರ್ಷ 32 ಲಕ್ಷ ಚೀಲ (9.90 ಲಕ್ಷ ಕ್ವಿಂಟಲ್) ಆವಕವಾಗಿತ್ತು. ಈಗ 52 ಲಕ್ಷಕ್ಕೂ ಅಧಿಕ ಚೀಲ (17.9 ಲಕ್ಷ ಕ್ವಿಂಟಲ್) ಆವಕವಾಗಿ ತನ್ನದೇ ದಾಖಲೆಯನ್ನು ತಾನೇ ಮುರಿದು ಹೊಸ ಮೈಲುಗಲ್ಲು ನೆಟ್ಟಿದೆ. ಆರಂಭಿಕ ವರ್ಷ (1952) ಗಳಲ್ಲಿ ಕೇವಲ ನೂರಾರು ಕೋಟಿಗೆ ಸೀಮಿತವಾಗಿದ್ದ ಮೆಣಸಿನಕಾಯಿ ವಹಿವಾಟು ಇದೀಗ ₹3 ಸಾವಿರ ಕೋಟಿಗೂ ಅಧಿಕವಾಗಿದ್ದು, ವಿಶ್ವದಲ್ಲಿಯೇ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿ ಬ್ಯಾಡಗಿ ಹೊರಹೊಮ್ಮಿದೆ.
ಮಲೆನಾಡು, ಬಯಲುಸೀಮೆಯಲ್ಲಿ ಮಳೆಯ ಆರ್ಭಟ: ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್!
ಬಹು ಬಳಕೆ ಮೆಣಸಿನಕಾಯಿ: ಕೇವಲ ಆಹಾರ ಪದಾರ್ಥಗಳಿಗಷ್ಟೇ ಬಳಕೆಯಾಗುತ್ತಿದ್ದ ಮೆಣಸಿನನಕಾಯಿ, ಕಳೆದ 3 ದಶಕದಿಂದ ಈಚೆಗೆ ಅದರಲ್ಲಿನ ನೈಸರ್ಗಿಕ ಬಣ್ಣವು ದೇಶ-ವಿದೇಶಗಳಲ್ಲಿ ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಮಾರುಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಮೆಣಸಿನಕಾಯಿಗೆ ಪೂರಕ ಉದ್ದಿಮೆಗಳಾದ ಓಲಿಯೋರಿಸನ್ ಮತ್ತು ಪೌಡರ್ ಫ್ಯಾಕ್ಟರಿಗಳು ಮತ್ತು ಕೋಲ್ಡ್ ಸ್ಟೋರೇಜ್‌ಗಳು ತಲೆ ಎತ್ತಿವೆ. ಹೀಗಾಗಿ ಮೆಣಸಿನಕಾಯಿ ಬೃಹತ್ ಉದ್ಯಮವಾಗಿ ಹೊರಹೊಮ್ಮಿದ್ದು ವರ್ಷದಿಂದ ವರ್ಷಕ್ಕೆ ವಹಿವಾಟು ಹೆಚ್ಚಾಗಲು ಕಾರಣವಾಗಿದೆ.
ಇ-ಟೆಂಡರ್ ಪದ್ಧತಿ ಮೂಲಕ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸ್ಪರ್ಧಾತ್ಮಕ ದರ, ಪಾರದರ್ಶಕ ತೂಕ, ಎಷ್ಟೇ ಮೆಣಸಿನಕಾಯಿ ಚೀಲಗಳು ತಂದರೂ ಅಂದಿನ ದಿನವೇ ಮಾರಾಟ ಮಾಡಿ ಹಣ ಪಡೆಯುವ ವ್ಯವಸ್ಥೆ ಇಲ್ಲಿದೆ. ಹಾಗಾಗಿ ಬ್ಯಾಡಗಿ ಮಾರುಕಟ್ಟೆ ಮೇಲೆ ರೈತರು ಆತ್ಮವಿಶ್ವಾಸ ಹೊಂದಿರುವ ಕಾರಣ ವರ್ಷದಿಂದ ವರ್ಷಕ್ಕೆ ವಹಿವಾಟು ಹೆಚ್ಚಾಗುತ್ತಾ ಸಾಗಿದೆ. ಉದ್ಯಮ ಬೆಳೆದಂತೆ ಮೆಣಸಿನಕಾಯಿಯ ಉತ್ಪಾದನೆ ಕ್ಷೇತ್ರವೂ ಹೆಚ್ಚಾಗಿದೆ. ಅವಿಭಜಿತ ಧಾರವಾಡ ಜಿಲ್ಲೆ ಸೇರಿದಂತೆ ಕಲಬುರಗಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ನೆರೆಯ ಆಂಧ್ರ ಪ್ರದೇಶದ ಕರ್ನೂಲು, ಶ್ರೀಶೈಲಂ, ಅದೋನಿ ಹಾಗೂ ಗುಂಟೂರು ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.
Lok Sabha Elections 2024: 'ಬಿಹಾರಿ ಬಾಬುಗಳ' ಎಲೆಕ್ಷನ್ ಲಡಾಯಿ: ಈಶಾನ್ಯ, ಪೂರ್ವ ದೆಹಲಿ ಕ್ಷೇತ್ರ ಹೇಗಿದೆ?
ಇದರಲ್ಲಿನ ಶೇ. 80ರಷ್ಟು ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ಬರುತ್ತದೆ.ಗುಣಮಟ್ಟದ ಮೆಣಸಿನಕಾಯಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ವ್ಯಾಪಾರಸ್ಥರ ಜವಾಬ್ದಾರಿಯನ್ನು ಹೆಚ್ಚಿಸಿದೆ. ದಾಖಲೆಯ ವಹಿವಾಟು ನಡೆದಿದ್ದು, ಇದು ಪಾರದರ್ಶಕ ವ್ಯಾಪಾರಕ್ಕೆ ಸಿಕ್ಕಿರುವ ಮನ್ನಣೆ ಎಂದು ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಹೇಳಿದರು. ನಮ್ಮ ನಿರೀಕ್ಷೆಗಿಂತ ಹೆಚ್ಚು ಮೆಣಸಿನಕಾಯಿ ಆವಕ ಆಗುತ್ತಿರುವುದನ್ನು ನೋಡಿದರೆ, ಬರುವ ದಿನಗಳಲ್ಲಿ ಮಾರುಕಟ್ಟೆ ಇನ್ನೂ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬ್ಯಾಡಗಿ ಎಪಿಎಂಸಿ ಕಾರ್ಯದರ್ಶಿ ಎಚ್.ವೈ. ಸತೀಶ ಹೇಳಿದರು.