ಕೊರೋನಾದಿಂದ ತಗ್ಗಿದ್ದ ರಕ್ತದಾನ ಚೇತರಿಕೆಯತ್ತ!

By Kannadaprabha News  |  First Published Jun 15, 2022, 5:01 AM IST

*   ಇಂದಿಗೂ ಶೇ.15-20 ರಕ್ತಕೊರತೆ
*  8 ಲಕ್ಷ ಯುನಿಟ್‌ ರಕ್ತ ಸಂಗ್ರಹ ಗುರಿ
*  ರಕ್ತದಾನದಿಂದ ಮಿನಿ ಆರೋಗ್ಯ ಪರೀಕ್ಷೆ
 


ಬೆಂಗಳೂರು(ಜೂ.15): ಕೊರೋನಾ ಹಿನ್ನೆಲೆಯಲ್ಲಿ ತಗ್ಗಿದ್ದ ರಕ್ತದಾನ ಪ್ರಮಾಣ ಈಗ ಚೇರಿಕೆಯತ್ತ ಸಾಗಿದ್ದರೂ ಇಂದಿಗೂ ಶೇ.15-20 ರಕ್ತದಾನ ಕೊರತೆ ಮುಂದುವರೆದಿದೆ.

ಕೊರೋನಾ ಮಹಾಮಾರಿ ಬಂದ 2020 ಮಾಚ್‌ರ್‍ನಿಂದ ರಕ್ತದಾನ ಪ್ರಮಾಣವು ಸಾಕಷ್ಟು ತಗ್ಗಿತ್ತು. ಸೋಂಕಿನ ಭಯದಲ್ಲಿ ದಾನಿಗಳು ಹಿಂದೇಟು ಹಾಕುತ್ತಿದ್ದರು. 2020 ಡಿಸೆಂಬರ್‌ ವರೆಗೂ ಬಹುತೇಕ ರಕ್ತನಿಧಿ ಕೇಂದ್ರಗಳು ಬರಿದಾಗಿದ್ದವು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಆ ಸಂದರ್ಭದಲ್ಲಿ ರಕ್ತದಾನ ಪ್ರಮಾಣ ಶೇ.60ರಷ್ಟುತಗ್ಗಿತ್ತು. ಈ ಸಂದರ್ಭದಲ್ಲಿ ಥಲಸ್ಸೇಮಿಯಾದಂತಹ ರಕ್ತ ಸಂಬಂಧಿ ರೋಗಿಗಳಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ನಂತರ 2021 ಆರಂಭದಲ್ಲಿ ಕೊರೋನಾ ಲಸಿಕೆ ಅಭಿಯಾನದ ಒಂದಿಷ್ಟು ನಿಯಮಗಳಿಂದ ರಕ್ತದಾನವೂ ಚೇತರಿಕೆ ಕಾಣಲಿಲ್ಲ. ಆ ಬಳಿಕವೂ ಎರಡನೇ ಅಲೆಯಿಂದ ದಾನಿಗಳು ದೂರ ಉಳಿದರು. ಆದರೆ, ಪ್ರಸಕ್ತ ವರ್ಷಾರಂಭದಿಂದ ಸೋಂಕಿನ ತೀವ್ರತೆ ಕಡಿಮೆ ಇದ್ದು, ರಕ್ತದಾನ ಪ್ರಮಾಣ ಚೇತರಿಕೆಯಾಗುತ್ತಿದೆ ಎಂದು ರಕ್ತನಿಧಿ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಬೆಂಗಳೂರಿನ 2 ಖಾಸಗಿ ಶಾಲೆಯಲ್ಲಿ ಕೊರೋನಾ ಸ್ಫೋಟ, ಸ್ಕೂಲ್ ಕ್ಲೋಸ್

2020ರಲ್ಲಿ ಶೇ.40ರಷ್ಟು ಕುಸಿದಿದ್ದ ರಕ್ತದಾನ ಪ್ರಮಾಣ, 2021ರಲ್ಲಿ ಶೇ.30ಕ್ಕೆ ಬಂದಿತು. ಕೊರೋನಾ ಪೂರ್ವಕ್ಕೆ ಹೋಲಿಸಿದರೆ ಇಂದಿಗೂ ಶೇ.15ರಿಂದ 20ರಷ್ಟುಕೊರತೆ ಇದೆ ಎನ್ನುತ್ತಾರೆ ರಾಜ್ಯ ರೆಡ್‌ಕ್ರಾಸ್‌ ಅಧಿಕಾರಿಗಳು. ಸದ್ಯ ರಾಜ್ಯದಲ್ಲಿ ಡೆಂಘೀ ಹೆಚ್ಚಿದ್ದು, ರಕ್ತದ ಪ್ಲೇಟ್ಲೈಟ್‌ಗಳ ಬೇಡಿಕೆ ಹೆಚ್ಚಿದೆ, ರಕ್ತ ಕ್ಯಾನ್ಸರ್‌ ರೋಗಿಗಳಿಗೂ ನಿರಂತರ ರಕ್ತ ಅವಶ್ಯಕತೆ ಇದೆ. ಆರೋಗ್ಯವಂತರು ಸ್ವಯಂಪ್ರೇರಿತವಾಗಿ ಬಂದು ರಕ್ತದಾನ ಮಾಡುವ ಮೂಲಕ ನಾಲ್ಕು ಜೀವ ಉಳಿಸಬಹುದು ಎಂದು ರಕ್ತನಿಧಿ ಕೇಂದ್ರಗಳು ಮನವಿ ಮಾಡಿವೆ.

8 ಲಕ್ಷ ಯುನಿಟ್‌ ರಕ್ತ ಸಂಗ್ರಹ ಗುರಿ

ಪ್ರಸಕ್ತ ವರ್ಷ 8 ಲಕ್ಷ ರಕ್ತದ ಯೂನಿಟ್‌ಗಳನ್ನು ಸಂಗ್ರಹಿಸುವ ಗುರಿಯನ್ನು ಕರ್ನಾಟಕ ರಾಜ್ಯ ಏಡ್‌್ಸ ನಿಯಂತ್ರಣ ಸೊಸೈಟಿ(ಕೆಎಸ್‌ಎಪಿಎಸ್‌) ಹಾಕಿಕೊಂಡಿದೆ. ಈ ಕುರಿತು ಪ್ರಕಟಣೆ ನೀಡಿರುವ ಕೆಎಸ್‌ಎಪಿಎಸ್‌, ‘ರಾಜ್ಯದಲ್ಲಿ ಸುಮಾರು 8 ಕೋಟಿಗೂ ಹೆಚ್ಚು ಜನರಿದ್ದು, ಇದರಲ್ಲಿ ಶೇ.1ರಷ್ಟುಜನರಿಗೆ ಮಾತ್ರ ರಕ್ತದ ಅವಶ್ಯಕತೆ ಇದೆ. ರಾಜ್ಯದಲ್ಲಿ 248 ರಕ್ತ ಕೇಂದ್ರಗಳಿದ್ದು, ಈ ಎಲ್ಲ ಕೇಂದ್ರಗಳ ಮೂಲಕ ರಾಜ್ಯದಲ್ಲಿ ಅಗತ್ಯವಿರುವ ರಕ್ತವನ್ನು ಸ್ವಯಂ ಪ್ರೇರಿತ ರಕ್ತದಾನದಿಂದ ಸಂಗ್ರಹಿಸಲಾಗುವುದು’ ಎಂದು ತಿಳಿಸಲಾಗಿದೆ.

Covid Crisis: ಕೋವಿಡ್‌ ಪರೀಕ್ಷೆ, ಸೋಂಕು ಎರಡೂ ಇಳಿಕೆ

ರಕ್ತದಾನದಿಂದ ಮಿನಿ ಆರೋಗ್ಯ ಪರೀಕ್ಷೆ

ರಕ್ತದಾನ ಪಡೆದ ಬಳಿಕ ಆ ರಕ್ತವನ್ನು ಏಡ್ಸ್‌, ಹೆಪಟೈಟಿಸ್‌ ಬಿ, ಹೆಪಟೈಟಿಸ್‌ ಸಿ, ಸಿಫಿಲಸ್‌, ಮಲೇರಿಯಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇವುಗಳ ಜತೆಗೆ ರಕ್ತ ಸಂಗ್ರಹಕ್ಕೂ ಮುನ್ನ ಮಧುಮೇಹ, ರಕ್ತದೊತ್ತಡ, ಹಿಮೋಗ್ಲೋಬಿನ್‌ ಪರೀಕ್ಷೆ ಮಾಡಲಾಗುತ್ತದೆ. ಈ ಮೂಲಕ ರಕ್ತದಾನ ನೀಡುವ ಜತೆಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡಂತಾಗುತ್ತದೆ. ನಿರಂತರ ರಕ್ತದಾನ ಮಾಡುವವರು ಹೃದ್ರೋಗ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಚೇರ್ಮನ್‌ ವಿಜಯ್‌ ಕುಮಾರ್‌ ಪಾಟೀಲ್‌ ತಿಳಿಸಿದ್ದಾರೆ.

ಕಳೆದ ಮೂರು ವರ್ಷದ ರಕ್ತದಾನ(ಯೂನಿಟ್‌ಗಳಲ್ಲಿ)

ವರ್ಷ ಸಂಗ್ರಹವಾದ ರಕ್ತ

2019-20 8,77,654
2020-21 5,59,562
2021-22 7,85,446
 

click me!