* ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ, ಬುದ್ದಿ ಜೀವಿಗಳ ವಿರುದ್ಧ ಆಕ್ರೋಶ
* ಕನ್ಹಯ್ಯಾ, ಆತ್ಮಕ್ಕೆ ಶಾಂತಿ ಕೋರಿ ಬಿಜೆಪಿಯಿಂದ ಮೌನಾಚರಣೆ
* ಹತ್ಯೆಯ ಹಂತಕರನ್ನ ಗಲ್ಲಿಗೇರಿಸವಂತೆ ಒತ್ತಾಯ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜೂ.29): ರಾಜಾಸ್ಥಾನ ಹಿಂದೂ ಯುವಕ ಕನ್ನಯ್ಯ ಲಾಲ್ ಹತ್ಯೆಗೈದಿರುವ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ರಾಜಸ್ಥಾನ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಒಂದು ಕೋಮಿನ ಪರವಾಗಿ ಅಧಿಕಾರ ನಡೆಸುತ್ತಿರುವ ಆ ಸರ್ಕಾರವನ್ನು ವಜಾ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಹತ್ಯೆಯ ಹಂತಕರನ್ನ ಗಲ್ಲಿಗೇರಿಸವಂತೆ ಒತ್ತಾಯ
ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ಮೃತ ಕನ್ಹಯ್ಯಾ, ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ಮಾಡಿದರು.ನಂತರ ಮಾತಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ರಾಜಾಸ್ಥಾನದಲ್ಲಿ ಮೊಹಮದ್ ಗೌಸ್ ಮತ್ತು ಮೊಹಮದ್ ರಿಯಾಜ್ ಎಂಬ ಉಗ್ರವಾದಿಗಳು ಟೈಲರ್ ವೃತ್ತಿಯ ಕನ್ನಯ್ಯ ಲಾಲ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಿ ರಾಜಾರೋಷವಾಗಿ ವೀಡಿಯೋ ಹರಿಬಿಟ್ಟಿದ್ದಾರೆ ಎಂದರೆ ದೇಶದಲ್ಲಿರುವ ಹಲವು ರಾಜಕೀಯ ಪಕ್ಷಗಳು ಈ ಕ್ರೌರ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ದೇಶದ ಸಂಪತ್ತು ಲೂಟಿ ಮಾಡಿರುವ ಕಾಂಗ್ರೆಸ್ ಪಕ್ಷ, ದೇಶದ್ರೋಹಿಗಳನ್ನು ಇಡಿ ವಿಚಾರಣೆ ಮಾಡಿದರೆ ಅವರ ಪರವಾಗಿ ಬೀದಿಗಿಳಿದು ಪ್ರತಿಭಟಿಸುತ್ತೀರಾ ಆದರೆ ದೇಶದಲ್ಲಿ ಹಲವಾರು ಜನ ಹಿಂದೂ ಯುವಕರನ್ನು ಕೊಲೆಗೈದಾಗಲೂ ಕೂಡ ಕಾಂಗ್ರೆಸ್ಸಿಗರು ಇಂದು ತುಟಿ ಬಿಚ್ಚುತ್ತಿಲ್ಲ. ಹಿಂದೂಗಳನ್ನು ದಮನ ಮಾಡುವ ಮೂಲಕ ಅಽಕಾರ ಅನುಭವಿಸಬಹುದೆಂಬ ಭ್ರಮೆಯಲ್ಲಿದ್ದಾರೆ ಹಾಗಾಗಿ ಕಾಂಗ್ರೆಸ್ಸಿಗರ ಮೇಲೇಯೇ ಅನುಮಾನವಿದೆ ಎಂದರು.
Dharwad: ನಾನು ನೂಪುರ್ ಶರ್ಮಾ ಬೆಂಬಲಿಸುತ್ತೇನೆ, ತಾಕತ್ ಇದ್ರೆ ನನ್ನನ್ನ ತಡಿರಿ ಎಂದ ಮುತಾಲಿಕ್
ಬುದ್ದಿಜೀವಿಗಳ ವಿರುದ್ಧ ಕಿಡಿ
ಸಹಿಷ್ಣುತೆಯನ್ನು ನಮ್ಮ ಜೀವನದ ಭಾಗವಾಗಿಟ್ಟುಕೊಂಡಿರುವ ಭಾರತೀಯ ಸಂಸ್ಕೃತಿಯಲ್ಲೆ ಸಹಿಷ್ಣುತೆ ಬಂದಿದೆ. ನೀವು ನಮಗೆ ಪಾಠ ಹೇಳುತ್ತೀರಾ ಬುದ್ದಿಜೀವಿಗಳೆ ನೀವು ತಿಳಿಯಿರಿ ಈ ಸಹಿಷ್ಣುತೆಯನ್ನು ಧರ್ಮಾಂಧರಿಗೆ, ಕೊಲೆಗಡುಕರಿಗೆ ಎಂದಾದರೋ ನೀವು ಮಾತನಾಡಿದ್ದೀರಾ? ನಿಮ್ಮ ಡೋಗಿತನದ ಪರಮಾವದಿ ಇಂದು ಈ ದೇಶವನ್ನು ಯಾವದಿಕ್ಕಿಗೆ ಕೊಂಡೊಯ್ಯುತ್ತಿದ್ದೀರಾ ಎಂಬ ಬಗ್ಗೆ ಆಲೋಚನೆಯೇ ಇಲ್ಲಾ. ಕಾಂಗ್ರೆಸ್ಸಿಗರು ಮತ್ತು ಬುದ್ದಿ ಜೀವಿಗಳುನ ಇದೇ ಪರಿಪಾಠವನ್ನು ಮುಂದುವರೆಸಿದರೆ ಅವರು ನಿಮ್ಮನ್ನು ಮುಗಿಸಲು ಯೋಚಿಸದೆ ನಿಮಗೆ ತಿರುಗಬಾಣವಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಎಚ್ಚರಿಸಿದರು.
ನಗರಸಭಾ ಅಧ್ಯಕ್ಷ ವರಸಿದ್ದವೇಣುಗೋಪಾಲ್ ಮಾತಾಡಿ ರಾಜಸ್ಥಾನದ ಟೈಲರ್ ಅಂಗಡಿಗೆ ಶಿಖಂಡಿಗಳಂತೆ ನುಗ್ಗಿ ಆತನ ಶಿರಚ್ಚೇದ ಮಾಡಿ ವೀಡಿಯೋ ಹರಿಬಿಟ್ಟು ಮಾರಕಾಸ ತೋರಿಸುವ ಮೂಲಕ ಮುಂದೆ ಮುಸಲ್ಮಾನರ ವಿರುದ್ದವಾಗಿ ಯಾವುದೆ ಭಾರತೀಯ ಹಿಂದೂವಾಗಿದ್ದರೂ ನಿಮ್ಮನ್ನು ಇದೇ ರೀತಿ ಕೊಲ್ಲುತ್ತೇವೆಂದು ಬೆದರಿಕೆ ಹಾಕುತ್ತಾರೆ. ಕನ್ನಯ್ಯಲಾಲ್ ಮಾಡಿದ ತಪ್ಪಾದರೂ ಏನು? ನೂಪುರ್ ಶರ್ಮ ಮಾಡಿದ ಅಪರಾಧವಾದರೂ ಏನು? ಎಂದು ಈ ಶಿಖಂಡಿಗಳು ಹೇಳಬೇಕು. ಹಿಂದೂ ಧರ್ಮದ ಪ್ರತೀಕವಾದ ಶ್ರೀರಾಮಚಂದ್ರ, ಸೀತೆ, ಹನುಮ, ರಾಘವೇಂದ್ರ ಸ್ವಾಮಿಗಳ -ಟೋಗಳನ್ನು ಪುರುಷರ, ಮಹಿಳೆಯರ ಒಳ ಉಡುಪುಗಳಲ್ಲಿ ಹರಿಬಿಟ್ಟಾಗ ಹಿಂದೂಗಳಿಗಾದ ನೋವನ್ನು ಹೇಗೆ ತಡೆದುಕೊಳ್ಳುವುದು ಆಗ ಎಲ್ಲಿ ಹೋಗಿದ್ದಿರಿ ನೀವು ? ಪ್ರಗತಿಪರ, ಬುದ್ದಿಜೀವಿ ಎಂದು ಮಾತನಾಡುವವರು ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲೆಸದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರುಗಳು ಭಾಗವಹಿಸಿದರು.