ಕುರಿ ಮಾಂಸದೊಂದಿಗೆ ದನದ ಮಾಂಸ ಮಿಶ್ರಣಗೊಳಿಸಿ ಮಾರಾಟ| ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದ ಘಟನೆ| ನಾಲ್ಕು ಮಂದಿಯನ್ನ ಬಂಧಿಸಿದ ಪೊಲೀಸರು| ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ|
ಕೊಪ್ಪ(ಏ.20): ತೋಟದಲ್ಲಿ ಗೋವುಗಳನ್ನು ಹತ್ಯೆ ಮಾಡಿ ಅವುಗಳ ಮಾಂಸವನ್ನು ಕುರಿ ಮಾಂಸದೊಂದಿಗೆ ಮಿಶ್ರಣಗೊಳಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಪೊಲೀಸರು ಭಾನುವಾರ ಬಂಧಿಸಿ, 40 ಕೆ.ಜಿ. ಗೋಮಾಂಸ ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿರಾಜ್, ಅನಿಲ್ ಡಿಮೆಲ್ಲೊ, ಡೆಂನ್ಜಿಲ್, ಡೆಮಿಸ್ ಡಿಸೋಜಾ ಬಂಧಿತ ಆರೋಪಿಗಳು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಯಪುರದಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿತ್ತು. ಕೆಲವು ದಿನಗಳ ನಂತರದಲ್ಲಿ ತಾಲೂಕು ಆಡಳಿತ ಮಾಂಸ ಮಾರಾಟಕ್ಕೆ ಅವಕಾಶ ನೀಡಿದೆ.
ಚಿಕ್ಕಮಗಳೂರು ಮಳೆ: ಸಿಡಿಲಿಗೆ ಮೂವರು ಕಾರ್ಮಿಕರು ಸಾವು
ಕುರಿ ಮಾಂಸಕ್ಕೆ ಭಾರಿ ಡಿಮ್ಯಾಂಡ್ ಬಂದಿದ್ದರಿಂದ ಜಯಪುರದ ಬಸ್ ನಿಲ್ದಾಣದ ಎಸ್.ಆರ್. ಚಿಕನ್ ಸೆಂಟರ್‌ನವರು ಸಮೀಪದ ತೋಟದಲ್ಲಿ ದನಗಳನ್ನು ಕಡಿದು, ಅವುಗಳ ಮಾಂಸವನ್ನು ಕುರಿ ಮಾಂಸದೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ರಾಜು, ವೃತ್ತ ನಿರೀಕ್ಷಕ ವಸಿಂ ಆಹಮ್ಮದ್, ಜಯಪುರ ಪಿಎಸ್‌ಐ ಸತೀಶ್ ನೇತೃತ್ವದಲ್ಲಿ ಅಂಗಡಿಯ ಮೇಲೆ ದಾಳಿ ನಡೆಸಿ ಗೋ ಮಾಂಸವನ್ನು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.