ಬೇಸಿಗೆಯ ಬೇಗೆಗೆ ಮರಗಳಲ್ಲಿನ ಎಲೆಗಳು ಉದುರಿ ಬರಿದಾಗುವುದು ಸಾಮಾನ್ಯ. ಆದರೆ ಚಿಕ್ಕಮಗಳೂರಿನ ನಗರಸಭೆಯ ಆವರಣದಲ್ಲಿರುವ ಮರದಲ್ಲಿ ಆಲ್ಮಂಡಾ ಕೆಥರಿಟಿಕಾ ಹೂವುಗಳು ಅರಳಿ ನಿಂತಿವೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.09): ಬೇಸಿಗೆಯ (Summer) ಬೇಗೆಗೆ ಮರಗಳಲ್ಲಿನ ಎಲೆಗಳು ಉದುರಿ ಬರಿದಾಗುವುದು ಸಾಮಾನ್ಯ. ಆದರೆ ಚಿಕ್ಕಮಗಳೂರಿನ (Chikkamagaluru) ನಗರಸಭೆಯ ಆವರಣದಲ್ಲಿರುವ ಮರದಲ್ಲಿ ಆಲ್ಮಂಡಾ ಕೆಥರಿಟಿಕಾ ಹೂವುಗಳು (Allamanda Cathartica Flowers) ಅರಳಿನಿಂತಿವೆ. ಅಪರೂಪದ ವಿದೇಶಿ ಹೂವುಗಳಿಂದಾಗಿ ಮರವೆಲ್ಲ ಹಳದಿ ಬಣ್ಣದಿಂದ ಕಂಗೊಳಿಸುತ್ತಿದೆ. ನೈಜ ಸೌಂದರ್ಯದಿಂದಾಗಿ ಎಲ್ಲರನ್ನು ತನ್ನೆಡೆಗೆ ಸೆಳೆಯುತ್ತಿದೆ.
ನಗರಸಭೆ ಆವರಣದಲ್ಲಿ ಅಲ್ಮಂಡ ಕ್ಯಾಥರಿಟಿಕಾ ಹೂವು: ನಗರದ ಆವರಣದಲ್ಲಿ ಇರುವ ಪಾರ್ಕ್‌ನಲ್ಲಿ ಇದೀಗ ಅರಶಿನ ಚೆಲ್ಲಿದಂತೆ ಕಂಗೊಳಿಸುತ್ತಿರೋ ಪುಷ್ಪ ರಾಶಿ, ಹೋತೋಟದಂತೆ ಕಂಡು ಬರೋ ಉದ್ಯಾನವನ, ಬಳ್ಳಿಯಲ್ಲಿ ಅರಳಿ ನಿಂತಿರೋ ಪುಷ್ಪಗಳೊಂದಿಗೆ ಆಟವಾಡುತ್ತಿರೋ ಮಕ್ಕಳು, ಸುಮವನ್ನು ಹೀರುತ್ತಿರೋ ದುಂಬಿಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿರೋ ಜನರು.
ಹೌದು! ಚಿಕ್ಕಮಗಳೂರಿನ ನಗರಸಭೆಯ ಆವರಣದಲ್ಲಿನ ಉದ್ಯಾನವನದಲ್ಲಿ ಕಳೆದ ನಾಲ್ಕು ದಿನಗಳಿಂದ ಅಳದಿ ಹೂವಿನ ಮುಂದೆ ಜನರು ನಿಂತು ಪೋಟೋ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿರುವ ಮರಗಳಲ್ಲಿ ಆಲ್ಮಂಡಾ ಕ್ಯಾಥರಿಟಿಕಾ ವಿದೇಶಿ ಹೂವುಗಳು ಅರಳಿನಿಂತಿದ್ದು, ಮರವೆಲ್ಲಾ ಹೂವುಗಳಿಂದಲೇ ಕಂಗೊಳಿಸುತ್ತಿದೆ. ಹಳದಿ ಪುಷ್ಪದಿಂದಾಗಿ ಇಡೀ ಉದ್ಯಾವವೇ ಹಳದಿ ಮಯವಾಗಿದ್ದು ಇದನ್ನು ಸ್ಥಳೀಯರು ನೋಡಿ ಸಂತಸವನ್ನು ಹೊರಹಾಕಿದ್ದಾರೆ.
ಬೆಲೆ ಏರಿಕೆ ಖಂಡಿಸಿ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ
ವರ್ಷದಲ್ಲೋಮ್ಮೆ ನಗರಸಭೆಯಲ್ಲಿ ಹಳದಿ ಹೂವು!: ವರ್ಷಂಪ್ರತಿ ಎಪ್ರಿಲ್ ತಿಂಗಳಿನಲ್ಲಿ ಬಳ್ಳಿಯಲ್ಲಿ ಹೂವು ಅರಳುವುದು ಸಾಮಾನ್ಯ. ಹಳದಿ ಹೂವು ವರ್ಷಕ್ಕೆ ಒಂದು ಸಲ ಮಾತ್ರ ಕಾಣ್ಣಿಸಿಕೊಳ್ಳುತ್ತೇದೆ. ನಗರದಲ್ಲಿ ಅರಳಿನಿಂತಿರುವ ಹೂವುಗಳ ಸವಿಯನ್ನು ಸವಿಯಲು ಪುಟಾಣಿಗಳು, ಕಾಲೇಜಿನ ವಿದ್ಯಾರ್ಥಿಗಳು, ಹಿರಿಯರು ಸೇರಿದಂತೆ ನೂರಾರು ಮಂದಿ ಪಾರ್ಕ್ಗೆ ಆಗಮಿಸುತ್ತಿದ್ದಾರೆ.
ಇಂದಿನ ಒತ್ತಡದ ಬದುಕಿನ ನಡುವೆ ಮನಸ್ಸುಗೆ ಸಂತೋಷದ ವಾತವಾರಣವನ್ನು ಈ ಹಳದಿ ಹೋವು ನೀಡುತ್ತಿದೆ ಎಂದು ಸ್ಥಳೀಯರಾದ ವಿರೇಶ್ ಅಭಿಪ್ರಾಯಿಸಿದ್ದಾರೆ. ವರ್ಷದಲ್ಲೊಮ್ಮೆ ಏಪ್ರೀಲ್ ಅಥವಾ ಮೇ ತಿಂಗಳಿನಲ್ಲಿ ಅರಳುವ ಈ ಅಪರೂಪದ ಪುಷ್ಪವನ್ನು ಜನರು ಹಳದಿ ಹೂವು, ಏಪ್ರೀಲ್ ಹೂ ಎಂದೇ ಕರೆಯುತ್ತಿದ್ದಾರೆ. ಹಳದಿ ಪುಷ್ಪದಿಂದಾಗಿ ಮರ ಸೇರಿದಂತೆ ಪಾರ್ಕ್ ಹಳದಿ ಮಯವಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಘಮ್ಮಿಡುವ ಕಾಫಿ ತೋಟದ ಹಾದಿಯಲ್ಲಿ ಅರಳಿ ನಿಂತಿರುವ ಹೂ: ಮಲೆನಾಡಿನ ತಂಪಿಗೆ ಕಾಫಿ ಹೂವಿನ ಕಂಪು ಬೆರೆತು ವಾತಾವರಣ ಮತ್ತಷ್ಟು ಆಹ್ಲಾದವಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಬಿದ್ದ ಮಳೆ ಹೂ ಅರಳಿಸಿ ಕಾಫಿ ತೋಟಗಳ ಕಳೆ-ವೈಭವ ಹೆಚ್ಚಿಸಿದೆ. ಹಾದಿ ಸಾಗಿದಲ್ಲೆಲ್ಲಾ ಮನವನ್ನು ಮುದಗೊಳಿಸುವ ಕಾಫಿ ಹೂವಿನ ಸುಗಂಧ ಯಾವುದೋ ಅತ್ತರಿನ ಲೋಕದಲ್ಲಿ ನಾವಿರುವಂತೆ ಭಾಸಗೊಳಿಸುತ್ತದೆ.ತೋಟಗಳಲ್ಲಿ ಅರಳಿ ಘಮ್ಮಿಡುತ್ತಿರುವ ಹೂಗಳಿಂದ ಬೆಳೆಗಾರನೂ ದಿಲ್ಖುಷ್, ಜಿಲ್ಲೆಗೆ ಬರುವ ಪ್ರವಾಸಿಗರನ ಕಣ್ಣಿಗೆ ಆನಂದವೂ ಆನಂದ.
ಬೆಳೆಗಾರನಿಗೆ ಸಂಭ್ರಮವೋ ಸಂಭ್ರಮ: ಸಾಮಾನ್ಯವಾಗಿ ಕಾಫಿ ತೋಟ ಹೆಚ್ಚಾಗಿರುವ ಮಲೆನಾಡಿನ ಭಾಗದಲ್ಲಿ ಬೆಳೆಗಾರ ಬೇಸಿಗೆಯಲ್ಲಿ ಕಾಫಿ ಕೊಯ್ಲನ್ನು ಮುಗಿಸಿಕೊಂಡು.ಮುಂದಿನ ಬೆಳೆಗೆ ಪೂರಕವಾದ ಹದಗಾರಿಕೆ ಪ್ರಕ್ರಿಯೆಯಲ್ಲಿ ತೊಡಗುತ್ತಾನೆ.ಬೆಳೆಗೆ ಅಗತ್ಯವಿರುವ ನೀರನ್ನು ಸ್ಪ್ರಿಂಕ್ಲರ್ ಮೂಲಕ ಪೂರೈಸುವಂತದ್ದು ಈ ಹಂತದ ಸಾಮಾನ್ಯ ಪ್ರಕ್ರಿಯೆ.ಇದಕ್ಕೆ ಲಕ್ಷಾಂತರ ಹಣವ ನ್ನಾತ ಖರ್ಚು ಮಾಡಬೇಕಾಗುತ್ತದೆ.ಇದೇ ವೇಳೆ ಮಳೆ ಸುರಿಯಿತೆಂದರೆ ಬೆಳೆಗಾರನಿಗೆ ಸಂಭ್ರಮವೋ ಸಂಭ್ರಮ.
ಮಲೆನಾಡಿನಲ್ಲಿ ಹುಲಿ ದಾಳಿ: ವ್ಯಾಘ್ರನ ಅಟ್ಟಹಾಸಕ್ಕೆ ಜಾನುವಾರು ಬಲಿ: ಆತಂಕದಲ್ಲಿ ಗ್ರಾಮಸ್ಥರು
ಅದರಲ್ಲೂ ಒಂದೆರೆಡು ಬಾರಿ ಮಳೆ ಹೊಯ್ತೆಂದರೆ ಬೆಳೆಯ ಇಳುವರಿ ಹಾಗೂ ಲಾಭದ ಲೆಕ್ಕಾಚಾರ ಆರಂಭವಾಗುತ್ತದೆ. ಬಿರುಬೇಸಿಗೆಯಲ್ಲೂ ಸುರಿದ ಮಳೆ ಬೆಳೆಗಾರನ ಅದೃಷ್ಟ ಖುಲಾಯಿಸಿದೆ ಎಂದರೆ ತಪ್ಪಾಗದು. ಕಳೆದ ಮೂರು ನಾಲ್ಕು ದಿನಗಳಿಂದಲೂ ಸಂಜೆ ಸಮಯದಲ್ಲಿ ಸುರಿದ ಮಳೆಗೆ ಕಾಫಿ ತೋಟಗಳಲ್ಲಿ ಹೂ ಅರಳಿ ನಿಂತಿದೆ. ಇದು ಮುಂದಿನ ವರ್ಷದ ಬೆಳೆಯನ್ನು ನಿರ್ಧಾರ ಮಾಡುತ್ತೆ, ತೋಟಗಳಲ್ಲಿ ಹೂ ಅರಳಿದ ಸಮಯದಲ್ಲಿ ಎರಡು ,ಮೂರು ಸಲ ಮಳೆಯಾದ್ರೆ ಮುಂದಿನ ವರ್ಷ ಕಾಫಿ ಫಸಲು ಬಂಪರ್ ಆಗುತ್ತೆ ಎನ್ನುವು ಲೆಕ್ಕಾಚಾರ ಕಾಫಿಬೆಳೆಗಾರರಲ್ಲಿ ಇದೆ.