ಉದ್ಯಮಿಗಳ ಸಾಲ ಮನ್ನಾ ಮಾಡೋ ಸರ್ಕಾರಕ್ಕೆ ರೈತರು ಕಾಣ್ತಿಲ್ಲ. ಒನ್ ಟೈಂ ಸೆಟಲ್ಮೆಂಟ್ ಮಾಡೋ ಮೂಲಕ ರೈತರನ್ನು ರಕ್ಷಿಸಿ ಎಂದು ಬಳ್ಳಾರಿಯ ಅನ್ನದಾತ ಕಣ್ಣೀರು ಹಾಕುತ್ತಿದ್ದಾರೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಡಿ.27): ಸದ್ಯ ಆ ರೈತರು ಸಾಲಸೋಲ ಮಾಡಿ ಒಂದಷ್ಟು ಬೆಳೆಯನ್ನು ಬೆಳೆಯುತ್ತಿದ್ದಾರೆ. ಲಾಭನೋ ನಷ್ಟನೋ ಇದ್ದದ್ರಲ್ಲಿಯೇ ವ್ಯವಸಾಯವನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ರೇ, ಕಳೆದೆರಡು ವರ್ಷದಿಂದ ಕೊರೊನಾ ಕಾಟ ಸೇರಿದಂತೆ ಅತಿವೃಷ್ಟಿ ಅನಾವೃಷ್ಟಿಯಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಹೊಂದಿದ್ದಾರೆ. ಹೀಗಾಗಿ ದಶಕಗಳ ಹಿಂದೆ ತೆಗೆದುಕೊಂಡ ಸಾಲದ ಅಸಲಿ ಮೊತ್ತದ ಮೂವತ್ತು ಪರ್ಸೆಂಟ್ ಹಣವನ್ನು ತೆಗೆದು ಕೊಂಡು ಬ್ಯಾಂಕ್ ನವರು ಒಂಟೈಮ್ ಸೆಟಲ್ ಮೆಂಟ್ ಮಾಡಿ ಎನ್ನುತ್ತಿದ್ದಾರೆ. ಇದಕ್ಕೆ ಬ್ಯಾಂಕ್ನವರು ಒಪ್ಪುದ ಕಾರಣ ಬಳ್ಳಾರಿಯ ಅನ್ನದಾತ ಕಣ್ಣಿರು ಹಾಕುತ್ತಿದ್ದಾರೆ.
undefined
ದಶಕದ ಹಿಂದೆ ತೆಗೆದುಕೊಂಡ ಸಾಲಕ್ಕೆ ಮುಕ್ತಿ ಕೊಡಿ ಎನ್ನುತ್ತಿರೋ ರೈತರು:
ಕೈಯಲ್ಲಿ ಬ್ಯಾಂಕಿನ ನೋಟಿಸ್ ಪ್ರತಿಯನ್ನು ಹಿಡಿದುಕೊಂಡು ಕುಳಿತಿರೋ ಅನ್ನದಾತರು. ಬ್ಯಾಂಕಿನ ಮುಂದೆ ಪೊಲೀಸ್ ಭದ್ರತೆಯಲ್ಲಿಯೇ ಪ್ರತಿಭಟನೆ ಮಾಡುತ್ತಿರೋ ರೈತರು.. ಹೀಗೆ ಬಿಸಿಲು ನೆರಳೆನ್ನದೇ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡುತ್ತಿರೋ ರೈತರು ಇಂದು ನಿನ್ನೆಯ ಸಾಲ ಮನ್ನಾ ಮಾಡಿ ಅನ್ನುತ್ತಿಲ್ಲ. ಬದಲಾಗಿ ಕಳೆದ ಹತ್ತು ಹದಿನೈದು ವರ್ಷದ ಹಿಂದೆಯೇ ತೆಗೆದುಕೊಂಡಿರೋ ಸಾಲವನ್ನು ಕಟ್ಟಲಾಗದೇ ಒನ್ ಟೈಂ ಸೆಟಲ್ ಮೆಂಟ್ ಮಾಡಿ ಎನ್ನುತ್ತಿದ್ಧಾರೆ.
ಬೆಳೆ ಸಾಲ, ಟ್ರಾಕ್ಟರ್ ಸಾಲ ಸೇರಿದಂತೆ ವಿವಿಧ ಕಾರಣಗಳಿ ಗಾಗಿ ಹತ್ತು ಹದಿನೈದು ವರ್ಷದ ಹಿಂದೆಯೇ ಬಳ್ಳಾರಿಯ ನೂರಾರು ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕಿನಲ್ಲಿ ಸಾಲ ಪಡೆದಿದ್ರು. ಎಸ್ಬಿಐ, ದೇನಾ ಬ್ಯಾಂಕ್, ಸೇರಿದಂತೆ ಕೆಲ ಬ್ಯಾಂಕುಗಳು ಸಾಲದಲ್ಲಿ ಒಂದಷ್ಟು ಹಣವನ್ನು ಪಡೆದು ಒನ್ ಟೈಂ ಸೆಟಲ್ ಮೆಂಟ್ ಮಾಡಿದ್ದಾರೆ. ಆದ್ರೇ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾತ್ರ ಹೀಗೆ ಮಾಡದೇ ರೈತರ ಜೀವನದ ಜೊತೆ ಆಟವಾಡುತ್ತಿದೆ ಎನ್ನುವುದು ರೈತರ ಆರೋಪವಾಗಿದೆ.
ಈಗ ಖರೀದಿಸಿ, ನಂತರ ಪಾವತಿಸಿ, ಏನಿದು BNPL?ಇ-ಕಾಮರ್ಸ್ ತಾಣಗಳಲ್ಲಿ ಇದರ ಬಳಕೆ ಹೇಗೆ?
ವರ್ಷಗಳೇ ಉರುಳಿದ್ರು ತೀರದ ಸಾಲ ಬಡ್ಡಿಯ ಸುಳಿಯಲ್ಲಿ ಅನ್ನದಾತ:
ಇನ್ನೂ ಬ್ಯಾಂಕ್ ಗೆ ಸಾಕಷ್ಟು ಬಾರಿ ಅಲೆದು ಅಲೆದು ಸಾಕಾಗಿರೋ ರೈತರು ಇದೀಗ ಪ್ರತಿಭಟನೆ ಮಾಡುತ್ತಿದ್ದು, ದಶಕದ ಸಾಲಕ್ಕೆ ಅಂತಿಮ ಮುದ್ರೆ ಹಾಕಿ ಎನ್ನುತ್ತಿದ್ಧಾರೆ. ಉದ್ಯಮಿಗಳಿಗಾದ್ರೇ, ಸಾವಿರಾರು ಕೋಟಿ ಹಣ ಸಾಲ ಮನ್ನಾ ಮಾಡುತ್ತಾರೆ ಆದ್ರೇ, ಅನ್ನದಾತನಿಗೇಕೆ ಈ ನಿರ್ಲಕ್ಷ್ಯ ಎನ್ನುವುದು ರೈತರ ಆರೋಪವಾಗಿದೆ. ಅಲ್ಲದೇ ಕೇವಲ ಸಾಲದ ಬಡ್ಡಿ ಅಲ್ಲದೇ, ಚಕ್ರಬಡ್ಡಿ, ವಾರ್ಷಿಕ ಶುಲ್ಕ, ಡಾಕುಮೆಂಟ್, ಫೀಸ್, ನೋಟಿಸ್ ಫೀಸ್ ಸೇರಿದಂತೆ ಅದು ಇದು ಎಂದೆಲ್ಲ ನೂರೆಂಟ್ ಫೀಸ್ ಹಾಕೋ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ ಎನ್ನವುದು ರೈತರ ಆರೋಪವಾಗಿದೆ.
ಸಾಲದ ಕಿರುಕುಳಕ್ಕೆ ಬೇಸತ್ತು ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪತ್ರಕರ್ತ
ಇನ್ನೂ ಸಾಲ ಕಟ್ಟದೇ ದೇಶಬಿಟ್ಟು ಹೋದ ಅದೆಷ್ಟೋ ಉದ್ಯಮಿಗಳಿಗೆ ಒಂದಲ್ಲೊಂದು ರೀತಿಯಲ್ಲಿ ಬ್ಯಾಂಕಿನವರು ಮತ್ತು ಸರ್ಕಾರ ನೆರವು ನೀಡುತ್ತಿದೆ. ಆದ್ರೇ, ಬೆಳೆ ಕೈಕೊಟ್ಟ ಹಿನ್ನೆಲೆ ಸಾಲ ಕಟ್ಟಲಾಗದೇ ಪರದಾಡುತ್ತಿರೋ ರೈತರು ನೆರವಿಗೆ ಸರ್ಕಾರ ಬಾರದೇ ಇರವುದು ದುರ್ದೈವದ ಸಂಗತಿಯಾಗಿದೆ.