ಕೋವಿಡ್​ ಮುಗಿಯುತ್ತಲೇ ಸೇವೆಯಿಂದ ಬಿಡುಗಡೆ, ಅತಂತ್ರವಾದ ವಾರಿಯರ್ಸ್ ಕುಟುಂಬಗಳು

By Suvarna News  |  First Published Apr 5, 2022, 4:49 PM IST

* ಬಾಗಲಕೋಟೆಯಲ್ಲಿ ಅತಂತ್ರರಾದ ಕೊರೋನಾ ವಾರಿಯರ್ಸ
* ಸೇವೆಯಿಂದ ಏಕಾಏಕಿ ಬಿಡುಗಡೆಗೆ ಶಾಕ್​ ಆದ ಕುಟುಂಬಗಳು....
* ಕೊರೋನಾ ರೋಗಿಗಳಿಗೆ ಸಂಬಂಧಿ ಳೇ ಇಲ್ಲದಾಗಲೂ ಆಪ್ತರಂತೆ ಕೆಲ್ಸ ಮಾಡಿದ್ದ ಸಿಬ್ಬಂದಿ


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ​ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ, (ಏ.05): ಅವರೆಲ್ಲಾ ದೇಶ ಕೊರೋನಾ ಸಂಕಷ್ಟದಲ್ಲಿದ್ದಾಗ ರೋಗಿಗಳ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು, ಕಠಿಣ ಪರಿಸ್ಥಿತಿಯಲ್ಲಿ ಕೋವಿಡ್​ ಪೊಸಿಟಿವ್ ರೋಗಿಗಳಿಗೆ ಅವರ ಸಂಭಂದಿಗಳೇ ಇರದಿದ್ದಾಗಲೂ ಸಹ ಸಂಭಂದಿಗಳಿಗಿಂತ ಹೆಚ್ಚು ಆರೈಕೆ ಮಾಡಿದವರು, ಆದರೆ ಇದೀಗ ಅಂತಹ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಬೀದಿಗೆ ಬರುವಂತಹ ಪರಿಸ್ಥಿತಿ ಉಂಟಾಗಿ, ಕುಟುಂಬಗಳು ಅತಂತ್ರವಾಗಿವೆ. ಈ ಕುರಿತ ವರದಿ ಇಲ್ಲಿದೆ...
 
 ಅಂದಹಾಗೆ ಇಂತಹವೊಂದು ಪರಿಸ್ಥಿತಿ ನಿರ್ಮಾಣವಾಗಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು. ಕಳೆದ ಎರಡು ವರ್ಷದ ಹಿಂದೆ ಕೊರೋನಾ ಅಟ್ಟಹಾಸ ಮೆರೆದ ಸಂದರ್ಭದಲ್ಲಿ ಕೋವಿಡ್​ ಕೆಲ್ಸ ಮಾಡೋಕು ಹಿಂದೆ ಮುಂದೆ ನೋಡುವಂತಹ ಕಾಲವಿತ್ತು. ಆ ಸಮಯದಲ್ಲಿ ಸರ್ಕಾರ ಹೊರ ಗುತ್ತಿಗೆ ಮೂಲಕ ಆಹ್ವಾನ ನೀಡಿದ್ದಕ್ಕೆ ಅಂದು ಅರ್ಜಿ ಹಾಕಿ ವೈದ್ಯರು, ಶೂಶ್ರೂಷಧಿಕಾರಿಗಳು, ಪ್ರಯೋಗಶಾಲಾ ತಜ್ಞರು, ಕಿರಿಯ ಆರೋಗ್ಯ ಸಹಾಯಕರು, ಔಷಧಿ ವಿತರಕರು, ದತ್ತಾಂಶ ನಮೂದಕರು ಮತ್ತು ಗ್ರೂಪ್​ ಡಿ ನೌಕರರು ಸೇರಿ ಜಿಲ್ಲೆಯಾದ್ಯಂತ ಅಂದಾಜು 170ಕ್ಕೂ ಆಧಿಕ ಜನರು ನೇಮಕಾತಿಯಾಗಿದ್ದರು.  ಕೊರೋನಾ ಹಾವಳಿ ಅತಿಯಾದಾಗ ಮನೆ ಮಠ ಬಿಟ್ಟು ಬಂದು ಈ ಸಿಬ್ಬಂದಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಆರೈಕೆ ಸಹ ಮಾಡಿದರು. ಎಷ್ಟೋ ರೋಗಿಗಳಿಗೆ ಸಂಭಂದಿಗಳೇ ಇಲ್ಲಾದಾಗ ನರ್ಸಗಳೇ ಆಪ್ತರಾಗಿ ಪಾಲನೆ ಪೋಷಣೆ ಮಾಡಿದರು. ಈ ಮಧ್ಯೆ ತಮ್ಮ ತಮ್ಮ ಮಕ್ಕಳು ಏನಾದರೂ ಮಾಡಿ ಕೊರೋನಾ ರೋಗಿಗಳ ಸೇವೆ ಮಾಡುವುದಕ್ಕೆ ಕೈ ಜೋಡಿಸಿದ್ದಾರೆ, ಇಂದಲ್ಲ ನಾಳೆ ಏನಾದರೂ ಒಳ್ಳೆಯದಾಗುತ್ತೆ, ಸರ್ಕಾರ ಸಹ ನಮ್ಮ ಮಕ್ಕಳನ್ನ ಕೈಬಿಡೋದಿಲ್ಲ ಅನ್ನೋ ವಿಶ್ವಾಸದಲ್ಲಿದ್ದ  ಹೊರ ಗುತ್ತಿಗೆ ನೌಕರರ ಕುಟುಂಬಗಳಿಗೆ ಇದೀಗ ಶಾಕ್ ನೀಡಿದೆ. 

Tap to resize

Latest Videos

Bagalkot: ಅಕ್ರಮವಾಗಿ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರು: 54 ಲಕ್ಷ ದಂಡ ವಸೂಲಿ

ಯಾಕಂದರೆ ಕೊರೋನಾ ವಾರಿಯರ್ಸ ಆಗಿ ಕೆಲಸ ಮಾಡಿದ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರನ್ನ ಇದೀಗ ಬರೋಬ್ಬರಿ ಎರಡು ವರ್ಷ ದುಡಿಸಿಕೊಂಡು ಈಗ ಮಾರ್ಚ 31ಕ್ಕೆ ಏಕಾಏಕಿ ಸೇವೆಯಿಂದ ಬಿಡುಗಡೆ ಮಾಡಿದ್ದಾರೆ‌. ಇದರಿಂದ  ಅವರ ಕುಟುಂಬಗಳೆಲ್ಲಾ ಬೀದಿಗೆ ಬಂದು ನಿಲ್ಲುವಂತಾಗಿದ್ದು, ಕೊರೋನಾ ವಾರಿಯರ್ಸ ಆಗಿ ಸೇವೆ ಸಲ್ಲಿಸಿದವರೇ ಇಂದು ಅತಂತ್ರರಾಗೋ ಪರಿಸ್ಥಿತಿ ಬಂದಿದೆ. ನಮ್ಮ ಸೇವೆಯನ್ನ ಮುಂದುವರೆಸಿ ನಮ್ಮ ಕುಟುಂಬಗಳ ಬದುಕಿಗೆ ಆಸರೆಯಾಗುವಂತೆ ಸರ್ಕಾರಕ್ಕೆ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಮನವಿ ಮಾಡಿದ್ದಾರೆ. 

ಇನ್ನು ಈ ಮೊದಲಿದ್ದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಸ್ಟಾಪ್​ ನರ್ಸ್​ ಸೇರಿದಂತೆ ಅನೇಕ ಹುದ್ದೆಯಲ್ಲಿದ್ದವರೂ ಸಹ ಸರ್ಕಾರ ಕರೆ ಮಾಡಿದ್ದಕ್ಕೆ ಬಂದು ಮೆರಿಟ್​ ಪ್ರಕಾರ ಹೊರ ಗುತ್ತಿಗೆ ನೌಕರರಾಗಿ ನೇಮಕವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಕೊರೋನಾ ಸಮಯದಲ್ಲಿ ಉದ್ಯೋಗ ಮಾಡೋದಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ, ಯಾಕಂದರೆ ನಿರಂತರವಾಗಿ  ಮೊದಲು 6 ತಿಂಗಳಿಗೊಮ್ಮೆ ನವೀಕರಣ ಮಾಡುತ್ತಿದ್ದರು ಆದರೆ, ಇದೀಗ ಏಕಾಏಕಿ ಸೇವೆಯಿಂದ ಬಿಡುಗಡೆಗೊಳಿಸಿರೋದು 175 ಜನ ಕುಟುಂಬಗಳು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ಆಗಿದೆ. ಇವರನ್ನೇ ನಂಬಿ ಕೂತಿದ್ದ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಆರೋಗ್ಯ ಇಲಾಖೆಯ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತೇ ಆದರೆ ಇಂದು ಹೊರ ಗುತ್ತಿಗೆ ನೌಕರರನ್ನ ಮುಂದುವರೆಸೋಕೆ ಆಗದೇ ಇರೋದು ಬಹಳಷ್ಟು ದುರದೃಷ್ಟಕರವಾಗಿದ್ದು, ಕೂಡಲೇ ಈ ಸಂಭಂದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸಚಿವ ಸುಧಾಕರ ಅವರು ಗಮನ ಹರಿಸಿ ಮತ್ತೇ ನಮ್ಮ ಸೇವೆಯನ್ನ ಮುಂದುವರೆಸಲು ಅವಕಾಶ ಕೊಡಬೇಕೆಂದು ಬಾಗಲಕೋಟೆ ಜಿಲ್ಲಾ ಕೋವಿಡ್​ 19 ವಾರಿಯರ್ಸ ಗುತ್ತಿಗೆ ನೌಕರರ ಸಂಘದಿಂದ ಮನವಿ ಮಾಡಿದ್ದಾರೆ.
 
ಇತ್ತ ಸೇವೆಯಿಂದ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರನ್ನ ಕೈಬಿಟ್ಟಿದ್ದೇ ತಡ ಜಿಲ್ಲೆಯಿಂದ ಆಗಮಿಸಿದ ಹೊರ ಗುತ್ತಿಗೆ ನೌಕರರು ಜಿಲ್ಲಾಸ್ಪತ್ರೆಯಿಂದ ನವನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಸಂಚರಿಸಿ ಅಂತಿಮವಾಗಿ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಮ್ಮ ಸೇವೆಯನ್ನ ಮುಂದುವರೆಸಿ ಅಂತ ಮನವಿ ಮಾಡಿದರು. 


                                      
ಒಟ್ಟಿನಲ್ಲಿ ಕೊರೋನಾ ಸಂಕಷ್ಟ ಸಮಯದಲ್ಲಿ ಕೆಲ್ಸ ಮಾಡೋದಕ್ಕೆ ಹಿಂದೆ ಮುಂದೆ ನೋಡೋ ಕಾಲದಲ್ಲಿ ಸೇವೆಗೆಂದು ಬಂದ ಅದೆಷ್ಟೋ ಹೊರ ಗುತ್ತಿಗೆ ನೌಕರರನ್ನ ಈಗ ಕೆಲಸದಿಂದ ಸರ್ಕಾರ ತೆಗೆದು ಹಾಕಿದ್ದು, ಅವರು ಕೊರೋನಾ ಸಂಕಷ್ಟದಲ್ಲಿ ಮಾಡಿದ ಕೆಲ್ಸವನ್ನ ಆಧರಿಸಿ ಅವರನ್ನ ಮತ್ತೇ ಮುಂದುವರೆಸೋ ನಿಟ್ಟಿನಲ್ಲಿ ಸರ್ಕಾರ  ಆರೋಗ್ಯ ಇಲಾಖೆ ಮೂಲಕ ಕ್ರಮ ಕೈಗೊಳ್ಳುತ್ತಾ ಅಂತ ಕಾದು ನೋಡಬೇಕಿದೆ..

click me!