ಹಿನ್ನೀರು ತಂದ ಪನ್ನೀರು: ಬಾಗಲಕೋಟೆಯಲ್ಲಿ ಚುರುಕಾದ ಪ್ರಕೃತಿ!

By Web DeskFirst Published Jul 14, 2019, 7:21 PM IST
Highlights

ಬಾಗಲಕೋಟೆಯಲ್ಲಿ ಆಲಮಟ್ಟಿ ಹಿನ್ನೀರಿನ ಎಫೆಕ್ಟ್| ಮೈದುಂಬಿದ ಕೃಷ್ಣೆ, ಘಟಪ್ರಭೆ| ಸುಂದರ ಬೆಟ್ಟಗುಡ್ಡಗಳ ಮಧ್ಯೆ ಹಿನ್ನೀರಿನ ಕಲರವ| ಬಾಗಲಕೋಟೆಯಲ್ಲಿ ಆಲಮಟ್ಟಿ ಹಿನ್ನೀರಿನ ಎಫೆಕ್ಟ್| ಸುಂದರ ಬೆಟ್ಟಗುಡ್ಡಗಳ ಮಧ್ಯೆ ಹಿನ್ನೀರಿನ ಕಲರವ| ಆಲಮಟ್ಟಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹಿನ್ನೀರಿನ ಎಫೆಕ್ಟ್|

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜು.14): ಕಳೆದ ಕೆಲವು ತಿಂಗಳಿಂದ ಬರದಿಂದ ಕಂಗೆಟ್ಟು ಹೋಗಿದ್ದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಕೃಷ್ಣಾ ಮತ್ತು ಮಲಪ್ರಭಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. 

ಒಂದೆಡೆ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದೇ ತಡ, ಇತ್ತ ಬಾಗಲಕೋಟೆಯಲ್ಲಿ ಹಿನ್ನೀರಿನ ಎಫೆಕ್ಟ್ ಶುರುವಾಗಿದೆ. ಹಿನ್ನೀರಿನಿಂದ ಒಂದೆಡೆ ಮಿನಿ ಜಲಪಾತಗಳು ಕಂಡ ಬಂದರೆ ಮತ್ತೊಂದೆಡೆ ಪ್ರಕೃತಿ ಸೌಂದರ್ಯದೊಂದಿಗೆ ಮಿನಿ ಜಲಪಾತ ಸೃಷ್ಠಿಯಾಗುತ್ತಿವೆ. 

ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರೋ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ  ಮತ್ತು ಇತ್ತ ಘಟಪ್ರಭಾ ನದಿಗಳಿಗೆ ಯಥೇಚ್ಚ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಆಲಮಟ್ಟಿ ಜಲಾಶಯ ಭರ್ತಿಯಾಗಿದೆ.

"

ಇದರಿಂದ ಸಹಜವಾಗಿಯೇ ಆಲಮಟ್ಟಿ ಹಿನ್ನೀರಿನ ಭಾಗವಾಗಿರೋ ಬಾಗಲಕೋಟೆ ಸುತ್ತಮುತ್ತ ಕಳೆದ ಎರಡ್ಮೂರ ದಿನಗಳಿಂದ ನೀರು ಭರ್ತಿಯಾಗಿದ್ದು ಎಲ್ಲೆಲ್ಲೂ ಪ್ರಕೃತಿ ತಾಣಗಳು ನಿರ್ಮಾಣವಾಗುತ್ತಿವೆ. ಈ ಭಾಗದಲ್ಲಿರೋ ಕಡಿದಾದ ಪ್ರದೇಶಗಳಿಗೆ ನೀರು ತುಂಬಿಕೊಳ್ಳೋ ಸಮಯದಲ್ಲಿ ಒಂದೇ ದಿನದ ಮಟ್ಟಿಗೆ ಇಲ್ಲಿ ಮಿನಿ ಜಲಪಾತಗಳು ನಿರ್ಮಾಣವಾಗಿ ದಾರಿಹೋಕರನ್ನ , ಪರಿಸರ ಪ್ರೇಮಿಗಳನ್ನ ಕೈಬೀಸಿ ಕರೆಯುತ್ತಿವೆ. 

ಬೆಟ್ಟಗುಡ್ಡಗಳ ಮಧ್ಯೆ ಇರೋ ಅಪಾರ ಪ್ರಮಾಣದ ನೀರಿನ ಸೌಂದರ್ಯದ ಮಧ್ಯೆ ಈ ಮಿನಿ ಜಲಪಾತಗಳು ನೋಡೋದೆ ಒಂದು ಹಬ್ಬ. ಹೀಗಾಗಿ  ಪ್ರತಿವರ್ಷ ಆಲಮಟ್ಟಿ ಹಿನ್ನೀರಲ್ಲಿ ಇಂತಹ ದೃಶ್ಯಗಳನ್ನ ನೋಡೋದೆ ಸಂತಸದ ಸಂಗತಿ ಅಂತಾರೆ ಸ್ಥಳೀಯರು.

"

ಇನ್ನು ಆಲಮಟ್ಟಿ ಹಿನ್ನೀರಿನಿಂದ ಆವೃತ್ತವಾಗಿ ಅಲ್ಲಲ್ಲಿ ಕಂಡು ಬರೋ ತೆಂಗಿನ ಮರಗಳು, ಬೆಟ್ಟಗುಡ್ಡಗಳು ರಸ್ತೆ ಮಾರ್ಗವಾಗಿ ಸಂಚರಿಸೋ ಪ್ರಯಾಣಿಕರನ್ನ ಆಕರ್ಷಿಸುತ್ತವೆ. 

ಇತ್ತ ಹಿನ್ನೀರು ಬಂದಿದ್ದೇ ತಡ ಮೀನುಗಾರರು ಸಹ ಹಿನ್ನೀರಿನಲ್ಲಿ ಚಿಕ್ಕ ಚಿಕ್ಕ ನಾವಿನ ಮೂಲಕ ಮೀನು ಹಿಡಿಯೋ ಕೆಲಸದಲ್ಲಿ ನಿರತರಾಗಿರೋ ದೃಶ್ಯಗಳು ಕಂಡು ಬರುತ್ತಿವೆ. ಇನ್ನು ಸುತ್ತಮುತ್ತಲಿನ ಹೊಲಗದ್ದೆಗಳಿಗೆ, ಜನಜಾನುವಾರುಗಳಿಗೂ ಸಹ ಈ ನೀರು ವರದಾನವಾಗಿ ಪರಿಣಮಿಸಿದೆ. 

ಈ ಬಾರಿ ಅತ್ಯಂತ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಬಾಗಲಕೋಟೆಗೆ ಈಗ ಹಿನ್ನೀರು ವಿಸ್ತಾರವಾಗಿ ವ್ಯಾಪಿಸಿಕೊಂಡಿದ್ದು, ಪ್ರಕೃತಿ ಪ್ರೀಯರಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ.

"

ಒಟ್ಟಿನಲ್ಲಿ ಒಂದೆಡೆ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದೇ ತಡ ಮತ್ತೊಂದೆಡೆ ಅದರ ಹಿನ್ನೀರಿನಿಂದ ಬಾಗಲಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಕೃತಿ ಸೌಂದರ್ಯ ನಿರ್ಮಾಣವಾಗಿ ಮಿನಿ ಜಲಪಾತಗಳು ಕಂಡು ಬಂದು ಇದರೊಟ್ಟಿಗೆ ಮೀನುಗಾರಿಕೆ ಆರಂಭವಾಗಿದ್ದು, ಪ್ರಕೃತಿ ಪ್ರೀಯರ ಇನ್ನಿಲ್ಲದ ಸಂತಸಕ್ಕೆ ಕಾರಣವಾಗಿದ್ದಂತು ಸುಳ್ಳಲ್ಲ.

click me!