ರಾಜ್ಯದಲ್ಲಿಯೂ ನಡೆಯಿತು ಪೈಶಾಚಿಕ ಕೃತ್ಯ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ

By Suvarna News  |  First Published Dec 3, 2019, 9:47 AM IST

ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪೈಶಾಚಿಕ ಘಟನೆ ಇದೀಗ ರಾಜ್ಯದಲ್ಲಿಯೂ ನಡೆದಿದೆ. ದಿಶಾ ಪ್ರಕರಣ ಮಾಸುವ ಮುನ್ನವೇ ಈ ಕೃತ್ಯ ನಡೆದಿದೆ. 


ಕಲಬುರಗಿ [ಡಿ.03]:  ದಿಶಾ ಅತ್ಯಾಚಾರ ಕೊಲೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿಯೇ ಇಂತಹದ್ದೆ ಒಂದು ಪೈಶಾಚಿಕ ಕೃತ್ಯ ನಡೆದಿದೆ. 

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಯಾಕಾಪುರ ಗ್ರಾಮದಲ್ಲಿ ಅಪ್ತಾಪ್ತ ಬಾಲಕಿಗೆ ಚಾಕೋಲೇಟ್ ಕೊಡಿಸುವುದಾಗಿ ಹೇಳಿ ಕರೆದೊಯ್ದು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ. 

Tap to resize

Latest Videos

ಯಾಕಾಪುರ ಗ್ರಾಮದವನೇ ಆದ ಯಲ್ಲಪ್ಪ [32]ಎನ್ನುವವನಿಂದ ಕೃತ್ಯ ನಡೆದಿದ್ದಾಗಿ ಆರೋಪಿಸಲಾಗಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೋಮವಾರ ಸಂಜೆ ವೇಳೆಗೆ ಬಾಲಕಿ ನಾಪತ್ತೆಯಾಗಿದ್ದು, ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಈ ದುಷ್ಕೃತ್ಯ ಎಸಗಲಾಗಿದೆ. ಗ್ರಾಮದ ಹೊರವಲಯದ ಕೆನಾಲ್ ಬಳಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 

click me!