Bagalkot: 66ರ ಇಳಿವಯಸ್ಸಲ್ಲೂ ಪೇಪರ್‌ ಹಾಕುವ ಸೈನಿಕ..!

By Kannadaprabha News  |  First Published Sep 4, 2022, 10:29 AM IST

ಬಸಪ್ಪ ಪಾಣಿಶೆಟ್ಟಿ ಓದಿದ್ದು ದ್ವಿತೀಯ ಪಿಯುಸಿ, ಆ ಕಾಲದಲ್ಲಿ ಪಿಯುಸಿ ಸಾಮಾನ್ಯವೇನಲ್ಲ. ಪಡೆದ ಶಿಕ್ಷಣಕ್ಕೆ ಸರಿಯಾದ ಕೆಲಸ ಸಿಗಲಿಲ್ಲವೆಂದು ಹಿಂಜರಿಯದೇ 1989 ಏಪ್ರಿಲ್‌ 1ರಂದು ದಿನಪತ್ರಿಕೆ ಹಂಚಲು ಆರಂಬಿಸಿದರು. ಆಗ ದಿನಕ್ಕೆ 40 ಪತ್ರಿಕೆ ಹಂಚುತ್ತಿದ್ದವರು ಈಗ 400 ದಿನಪತ್ರಿಕೆಯನ್ನು ಹಂಚುತ್ತಿದ್ದಾರೆ.


ಚಂದ್ರಶೇಖರ ಶಾರದಾಳ

ಕಲಾದಗಿ(ಸೆ.04):  ಅವರಿಗೆ ವಯಸ್ಸು ಅರುವತ್ತಾರು, ಮಾಡುವ ಕಾಯಕದಲ್ಲಿ ಹದಿನಾರರ ಹದಿಹರೆಯದವರನ್ನು ಮೀರಿಸುವ ತಾಕತ್ತು. ನಿತ್ಯ ಬೆಳಗ್ಗೆ ಸೂರ್ಯೋದಯದ ಮುನ್ನವೇ ಕೆಲಸಕ್ಕೆ ಹಾಜರ್‌. ಸಿಕ್ಕ ಅಲ್ಪ ಆದಾಯದರಲ್ಲೇ ತೃಪ್ತಿ ಪಡುವ ತೃಪ್ತಗುಣ ಇವರದು! ಇಳಿವಯಸ್ಸಿನಲ್ಲೂ ಸದಾ ಚಟುವಟಿಕೆಯಿಂದ ಕಾಯಕವೇ ಕೈಲಾಸ ಎನ್ನುವ ದೃಷ್ಠಿಕೋನದಲ್ಲೇ ನೋಡುವ ಮನೋಭಾವ. ಇದು ಬೇರಾರೂ ಅಲ್ಲ ಕಲಾದಗಿ ಗ್ರಾಮದಲ್ಲಿ ಕಳೆದ 33 ವರ್ಷದಿಂದ ದಿನ ಪತ್ರಿಕೆ ಹಂಚುವ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಸಪ್ಪ ಪಾಣಿಶೆಟ್ಟಿ. ಇಂದು ಪತ್ರಿಕೆ ವಿತರಕರ ದಿನಾಚರಣೆ ಸಂದರ್ಭ ಇವರನ್ನು ನೆನೆಯದಿರಲು ಸಾಧ್ಯವೇ?

Tap to resize

Latest Videos

undefined

ಶಿಸ್ತಿನ ಸಿಪಾಯಿ:

ಪೇಪರ್‌ ಹಾಕುವುದು ಏನ್‌ ಮಹಾ! ಎನ್ನುವವರೇ ಹೆಚ್ಚು, ಆದರೆ ನಿಜವಾದ ಕತೆ ಅದರ ವ್ಯಥೆ ಹಂಚುವವರೇ ಬಲ್ಲರು. ದಿನ ಪತ್ರಿಕೆ ಹಂಚುವ ಕೆಲಸ ಮಾಡುವುದು ಕಷ್ಟಕರವಾದ ಕೆಲಸ ಮತ್ತೊಂದಿಲ್ಲ. ಮನೆಯಲ್ಲಿ, ಸಂಬಂಧಿಕರ ಮನೆಯಲ್ಲಿ ಏನೇ ತೊಂದರೆ ಇದ್ದರೂ ಅದೆಲ್ಲವನ್ನು ಬದಿಗೊತ್ತಿ ದಿನಾಲು ಬೆಳಗ್ಗೆ 4 ಗಂಟೆಗೆ ಎದ್ದು ಬಂದಿರುವ ಎಲ್ಲಾ ಪತ್ರಿಕೆಗಳನ್ನು ಹೊದಾಣಿಕೆ ಮಾಡಿ ಜೋಡಿಸಿ, ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಪತ್ರಿಕೆಗಳನ್ನು ಬಂಡಲ್‌ ಮಾಡಿ ಇಟ್ಟು, ಸರಿಯಾದ ಸಮಯಕ್ಕೆ ತಲುಪಿಸುವ ಕಾಯಕ ಮಾಡುವುದು ಒಂದು ತೆರನಾಗಿ ಸೈನಿಕ ಶಿಸ್ತಿನ ಸಿಪಾಯಿ ಮಾಡುವ ಕೆಲಸಕ್ಕೆ ಸಮ. ಅದಕ್ಕಿಂತಲೂ ಮಿಗಿಲು ಎನ್ನಬಹುದು.

ಸ್ಮಶಾನ ಜಾಗ ಇಲ್ಲದ್ದಕ್ಕೆ ಗ್ರಾಮ ಪಂಚಾಯತಿ ಎದುರೇ ಶವ ಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!

ಮೂರು ದಶಕ ಸವೆಸಿದ್ದಾರೆ:

ಬಸಪ್ಪ ಪಾಣಿಶೆಟ್ಟಿ ಓದಿದ್ದು ದ್ವಿತೀಯ ಪಿಯುಸಿ, ಆ ಕಾಲದಲ್ಲಿ ಪಿಯುಸಿ ಸಾಮಾನ್ಯವೇನಲ್ಲ. ಪಡೆದ ಶಿಕ್ಷಣಕ್ಕೆ ಸರಿಯಾದ ಕೆಲಸ ಸಿಗಲಿಲ್ಲವೆಂದು ಹಿಂಜರಿಯದೇ 1989 ಏಪ್ರಿಲ್‌ 1ರಂದು ದಿನಪತ್ರಿಕೆ ಹಂಚಲು ಆರಂಬಿಸಿದರು. ಆಗ ದಿನಕ್ಕೆ 40 ಪತ್ರಿಕೆ ಹಂಚುತ್ತಿದ್ದವರು ಈಗ 400 ದಿನಪತ್ರಿಕೆಯನ್ನು ಹಂಚುತ್ತಿದ್ದಾರೆ. ಕಾಲಕಾಲಕ್ಕೆ ತುಸು ಹೆಚ್ಚು ಕಡಿಮೆ ಆಗಿದ್ದಿರಬಹುದು. ಮಾಡುವ ಕೆಲಸ ಪ್ರಾಮಾಣಿಕತನ ಮತ್ತು ನಿಷ್ಠೆಯಿಂದ ಮಾಡಿದರೆ ಅದರಲ್ಲೇ ಆನಂದ ಕಾಣಬಹುದು ಎಂಬುದಕ್ಕೆ ಪಾಣಿಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿ.

ಕೊರಳಲ್ಲಿ ಕೆಂಪು ಕಂದು ಬಿಳಿ ಬಣ್ಣ ಮಿಶ್ರಿತ ಟವೆಲ್‌, ತಲೆಯಲ್ಲಿ ಕಂದು ಬಣ್ಣದ ಉಣ್ಣೆಯ ಟೋಪಿ, ಸೈಕಲ್‌ ಮೇಲೆ ಕೂತು ಪೆಡಲ್‌ ತುಳಿಯಲು ಆರಂಬಿಸಿದರೆ ಚಹಾ ಅಂಗಡಿ, ಸರ್ಕಾರಿ ಕೇಚರಿ, ಶಾಲೆಗಳು, ಪಾನ್‌ಶಾಪ್‌, ಬಟ್ಟೆಅಂಗಡಿ, ಮನೆಗಳು, ಮಾರ್ಕೆಟ್‌ನಲ್ಲಿನ ಅಂಗಡಿಗಳಿಗೆ ಸರಸರನೇ ದಿನಪತ್ರಿಕೆ ವಿತರಿಸುವ ಕಾರ್ಯ ಇವರ ಸರಿಸಮಾನ ವಯಸ್ಕರು ಶ್ಲಾಘಿಸದೇ ಇದ್ದಿರಲಿಕ್ಕಿಲ್ಲ. ಅರುವತ್ತಾರರ ಇಳಿ ವಯಸ್ಸಿನಲ್ಲಿ ಹದಿನಾರರ ಹರೆಯದ ಯುವಕರೂ ನಾಚುವಂತೆ ಮಾಡುತ್ತಾರೆ ಪತ್ರಿಕೆ ಹಂಚುವ ಕಾರ್ಯ.

ಮನೆಯಲ್ಲಿ ಬೆಳಗಿನ ಚಹಾದ ಹೊತ್ತಿಗೆ ಟೇಬಲ್‌ ಮೇಲೆ ಅಂದಿನ ದಿನಪತ್ರಿಕೆ ಇರದಿದ್ದರೆ ಮನೆಯವರ ಮೇಲೆ ಸಿಟುಕು ಸಹಜ ಎಂದು ಎನ್ನಲಾಗುತ್ತದೆ. ಮನೆಯವರ ಮೇಲೆ ಸಿಟುಕ ಆಗದಂತೆ ಸರಿಯಾದ ಸಮಯಕ್ಕೆ ಪತ್ರಿಕೆ ತಲುಪಿಸುತ್ತಿರುವುದು ಇವರ ನಿತ್ಯದ ಸಾಧನೆ ಕಾಯಕ. ಗ್ರಾಮದಲ್ಲಿ ಯಾರೇ ವಿಧಿವಶರಾದರೂ ಅವರ ನಿಧನ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಮಾಡುವುದರಲ್ಲಿ ಇವರದು ಮೊದಲನೆಯ ಹೆಜ್ಜೆ. ಇದು ಒಂದು ಸೇವೆ ಎಂದು ಪರಿಗಣಿಸಿ ಕಾರ್ಯ ಮಾಡುವ ಪರಿ ಅವರಿಗೆ ಅವರೇ ಸಾಟಿ. ಇವರ ಸೇವೆಗೆ ಜಿಲ್ಲಾಡಳಿತ 2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದೆ.

ಹುನಗುಂದ: ಮರೋಳ ಏತ ನೀರಾವರಿ ಯೋಜನೆ ಕಳಪೆ: ಅಭಯ ಪಾಟೀಲ

ವರ್ಷದ ಹನ್ನೆರಡೂ ತಿಂಗಳು, 365 ದಿನಗಳು ಅದರಲ್ಲಿ ಎರಡು ದಿನ ಪತ್ರಿಕೆಗೆ ರಜೆ, ಆ ದಿನಗಳಷ್ಟೇ ಅವರಿಗೆ ಪೂರ್ಣ ವಿಶ್ರಾಂತಿ ಉಳಿದ 363 ದಿನಗಳು ಕೆಲಸವೇ, ಬೇಸಿಗೆಕಾಲ, ಚಳಿಗಾಲ, ಮಳೆಗಾಲ, ವಸಂತಕಾಲ ಯಾವುದೇ ಕಾಲಕ್ಕೂ ಬಗ್ಗದೆ, ಜಗ್ಗದೇ, ಅಂಜದೇ ಅಳುಕದೇ ಸೈಕಲ್‌ ಹ್ಯಾಂಡಲ್‌ಗೆ ಪೇಪರ್‌ ತುಂಬಿದ ಹತ್ತಾರು ಚೀಲ ಜೋತುಬಿಟ್ಟುಕೊಂಡು ಟ್ರಿನ್‌ಟ್ರಿನ್‌ ಬೆಲ್‌ ಹೊಡೆದು ಪತ್ರಿಕೆ ಹಾಕುವುದು ಬಸಪ್ಪ ಪಾಣಿಶೆಟ್ಟಿನಿತ್ಯದ ಕಾಯಕಕ್ಕೆ ಪತ್ರಿಕೆ ವಿತರಕರ ದಿನಾಚರಣೆಯಂದು ಒಂದು ಹಾಟ್ಸ ಅಪ್‌.

ನಾನು ಕಳೆದ 33 ವರ್ಷದಿಂದ ದಿನ ಪತ್ರಕೆ ಹಂಚುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ಕೆಲಸವೂ ಒಂದು ರೀತಿಯಲ್ಲಿ ದೇಶ ಸೇವೆಯ ಕೆಲಸವೇ, ದೇಶ ಪ್ರೇಮ, ಜನಜಾಗೃತಿ ಮೂಡಿಸುವಂತಹ ಸುದ್ದಿಗಳನ್ನು ಹೊತ್ತ ಪತ್ರಿಕೆಯನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುವುದರಲ್ಲೀ ಏನೋ ಆನಂದ ಅಂತ ಕಲಾದಗಿ ಪತ್ರಿಕೆ ವಿತರಕ ಬಸಪ್ಪ ಪಾಣಿಶೆಟ್ಟಿ ತಿಳಿಸಿದ್ದಾರೆ.  
 

click me!