ಬೀದಿ ಬದಿ ವ್ಯಾಪಾರಿಯ ಮಗ ಈಗ ನ್ಯಾಯಾಧೀಶ : ಛಲಕ್ಕೆ ಉತ್ತಮ ಉದಾಹರಣೆ ಇವರು

By Kannadaprabha News  |  First Published Sep 13, 2023, 11:26 AM IST

ಶಿಕ್ಷಣಕ್ಕೆ ಹಾಗೂ ಕಲಿಯಬೇಕೆಂಬ ಛಲಕ್ಕೆ ಯಾವುದೇ ಬಡತನ ಅಡ್ಡಿ ಆಗದು ಎಂಬುದಕ್ಕೆ ಇಲ್ಲಿ ಉತ್ತಮ ಉದಾಹರಣೆಯೊಂದು ಸಿಕ್ಕಿದೆ. ರಸ್ತೆ ಬದಿ ಆಹಾರಗಳನ್ನು ಮಾರಾಟ ಮಾಡುತ್ತಿದ್ದವರ ಪುತ್ರನೋರ್ವ ನ್ಯಾಯಾಧೀಶರಾಗಿರುವ ಪ್ರಸಂಗ ಉತ್ತರ ಪ್ರದೇಶ ರಾಜ್ಯದ ಸಂಭಲ್‌ನಲ್ಲಿ ನಡೆದಿದೆ.


ಲಖನೌ: ಶಿಕ್ಷಣಕ್ಕೆ ಹಾಗೂ ಕಲಿಯಬೇಕೆಂಬ ಛಲಕ್ಕೆ ಯಾವುದೇ ಬಡತನ ಅಡ್ಡಿ ಆಗದು ಎಂಬುದಕ್ಕೆ ಇಲ್ಲಿ ಉತ್ತಮ ಉದಾಹರಣೆಯೊಂದು ಸಿಕ್ಕಿದೆ. ರಸ್ತೆ ಬದಿ ಆಹಾರಗಳನ್ನು ಮಾರಾಟ ಮಾಡುತ್ತಿದ್ದವರ ಪುತ್ರನೋರ್ವ ನ್ಯಾಯಾಧೀಶರಾಗಿರುವ ಪ್ರಸಂಗ ಉತ್ತರ ಪ್ರದೇಶ ರಾಜ್ಯದ ಸಂಭಲ್‌ನಲ್ಲಿ ನಡೆದಿದೆ. ಮೊಹಮ್ಮದ್‌ ಖಾಸಿಮ್‌ (Mohammad Kasim) ಎಂಬುವರು ಸಂಭಲ್‌ ಪ್ರಾಂತ್ಯದವರಾಗಿದ್ದು, ಅವರ ತಂದೆ ಬೀದಿ ಬದಿ ವ್ಯಾಪಾರಿಯಾಗಿದ್ದರು. ಖಾಸಿಮ್‌ ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯದಲ್ಲಿ ಎಲ್‌ಎಲ್‌ಬಿ (LLB)ಪದವಿ ಪಡೆದು, ದೆಹಲಿ ವಿಶ್ವ ವಿದ್ಯಾಲಯದಲ್ಲಿ ಎಲ್‌ಎಲ್‌ಎಂ (LLM) ಪದವಿ ಹೊಂದಿದ್ದಾರೆ. ಇವರು ಇದೀಗ ಉತ್ತರ ಪ್ರದೇಶದ ನಾಗರಿಕ ಸೇವೆ (ನ್ಯಾಯಾಂಗ)ದಲ್ಲಿ 135ನೇ ರ್‍ಯಾಂಕ್‌ ಪಡೆದು ಇದೀಗ ಸಿವಿಲ್‌ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ನನ್ನ ಸಾಧನೆಗೆ ನನ್ನ ತಾಯಿಯೇ ಪ್ರಮುಖ ಪ್ರೇರಣೆ ಎಂದು ಖಾಸಿಮ್‌ ಹಂಚಿಕೊಂಡಿದ್ದಾರೆ. ಇವರ ಸಾಧನೆಯನ್ನು ಜನರು ಪ್ರಶಂಶಿಸಿದ್ದಾರೆ. 

Many Congratulations to Mohammad Kasim bhai, my senior, mentor and a friend on clearing the Uttar Pradesh Civil Judge exam and becoming a judge! Your hard work has paid off, and I'm really proud of your achievement. Wishing you all the best in your new role on the bench! 🎉👨‍⚖️ pic.twitter.com/hbf4OGffQZ

— Adv S G Rabbani Alig (@sgrabbani_ias)

 

Tap to resize

Latest Videos

undefined

ದೇಶದ್ರೋಹ ಕಾಯ್ದೆ ಪ್ರಶ್ನಿಸಿದ್ದ ಅರ್ಜಿ ಸಾಂವಿಧಾನಿಕ ಪೀಠಕ್ಕೆ

ನವದೆಹಲಿ: ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿನ ದೇಶದ್ರೋಹ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕನಿಷ್ಠ 5 ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ಕೇಂದ್ರ ಸರ್ಕಾರವು ವಸಾಹತು ಶಾಹಿ ಕಾಲದ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಬದಲಾಗಿ ಹೊಸ ಕಾನೂನು ಜಾರಿಗೆ ಸಂಸತ್ತಿನ ಮಸೂದೆ ಮಂಡಿಸಿರುವ ಹೊತ್ತಿನಲ್ಲೇ ಸುಪ್ರೀಂಕೋರ್ಟ್‌ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಬರೋಬ್ಬರಿ 35 ಬಾರಿ ರಿಜೆಕ್ಟ್ ಆದ ಮಾಜಿ ಗೂಗಲ್‌ ಉದ್ಯೋಗಿಗೆ ಕೊನೆಗೂ ಸಿಕ್ತು 1.9 ಕೋಟಿ ರೂ ವೇತನದ ಕೆಲಸ

ಸದ್ಯ ನಾವು ಐಪಿಸಿಯಲ್ಲಿನ (IPC) ಹಲವು ಕಾಯ್ದೆಗಳನ್ನು ಬದಲಾಯಿಸಲು ಮುಂದಾಗಿದ್ದೇವೆ. ಈ ಮಸೂದೆ ಈಗಾಗಲೇ ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಹೋಗಿದೆ. ಹೀಗಾಗಿ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು ಮುಂದೂಡುವಂತೆ ಕೇಂದ್ರದ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಿದರು.

ಆದರೆ ಈ ಮನವಿ ತಿರಸ್ಕರಿಸಿದ ನ್ಯಾಯಪೀಠ, ಹಲವು ಕಾರಣಗಳಿಗಾಗಿ ನಾವು ಈ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಈಗಲೇ ದೇಶದ್ರೋಹಕ್ಕೆ ಸಂಬಂಧಿಸಿದ ಕಾಯ್ದೆಯಾದ 124ಎ (ದೇಶದ್ರೋಹ) ಐಪಿಸಿಯಲ್ಲಿ ಹಾಗೆಯೇ ಇದೆ. ಹೊಸ ಮಸೂದೆಯು ಕಾಯ್ದೆಯಾದ ಬಳಿಕ ಅದು ಪೂರ್ವಾನ್ವಯವಾಗದು ಮತ್ತು ಹೊಸ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ ಎಂಬ ನಿರೀಕ್ಷೆ ಇದೆ ಎಂದಿತು. ಹೀಗಾಗಿ 124ಎ ಅನ್ವಯ ದಾಖಲಾಗಿರುವ ಪ್ರಕರಣಗಳು ಹಿಂದಿನಂತೆಯೇ ಇರುತ್ತವೆ. ಕಾಯ್ದೆ ಅನ್ವಯವೇ ಪ್ರಕರಣಗಳನ್ನು ಪರಿಗಣಿಸಬೇಕಾಗುತ್ತದೆ. ಅಲ್ಲದೆ ಈ ಕಾಯ್ದೆಯು, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅವಕಾಶ ನೀಡುವ ಸಂವಿಧಾನದ 19 (1)(ಎ)ಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ ಎಂದು ನ್ಯಾಯಪೀಠ ಹೇಳಿತು.

3.7 ಕೋಟಿ ರೂ. ಸಂಬಳ ಪಡೆದ ಐಐಟಿ ವಿದ್ಯಾರ್ಥಿ: ಹಲವರಿಗೆ ಕೋಟಿ ಕೋಟಿ ವೇತನ!

 ಗೋರಕ್ಷಕ ಮೋನು ಮಾನೇಸಾರ್‌ ಬಂಧನ
ಗುರುಗ್ರಾಮ: ಇತ್ತೀಚೆಗೆ ಹರ್ಯಾಣದ ನೂಹ್‌ನಲ್ಲಿ ನಡೆದ ಕೋಮುಗಲಭೆ ಪ್ರಕರಣದ ಆರೋಪಿ, ಬಜರಂಗದಳ ಕಾರ್ಯಕರ್ತ ಹಾಗೂ ಗೋರಕ್ಷಕ ಮೋನು ಮಾನೇಸಾರ್‌ನನ್ನು ರಾಜಸ್ಥಾನ ಗೋಸಾಗಣೆದಾರರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಮೋನುನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ನಂತರ ರಾಜಸ್ಥಾನದಲ್ಲಿ ಅಕ್ರಮ ಗೋಕಳ್ಳಸಾಗಣೆ ಆರೋಪದ ಮೇಲೆ ಕೊಲೆಯಾಗಿದ್ದ ಇಬ್ಬರು ಮುಸ್ಲಿಮರ ಹತ್ಯೆ ಪ್ರಕರಣದಲ್ಲಿ ಕೂಡ ಈತ ಆರೋಪಿ ಆಗಿರುವ ಕಾರಣ ಆತನನ್ನು ರಾಜಸ್ಥಾನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮೋನು ನೂಹ್‌ನಲ್ಲಿ ನಡೆಯಲಿರುವ ವಿಎಚ್‌ಪಿಯ ಯಾತ್ರೆಯಲ್ಲಿ ತಾನು ಭಾಗವಹಿಸುವಾದಾಗಿ ವಿಡಿಯೋವೊಂದನ್ನು ಮಾಡಿದ್ದ. ಬಳಿಕ ಈತನ ಉಪಸ್ಥಿತಿ ವಿರುದ್ಧ ಯಾತ್ರೆಯಲ್ಲಿ ಭಾರೀ ಕೋಮುಗಲಭೆ ನಡೆದು 6 ಜನರು ಸಾವನ್ನಪ್ಪಿದ್ದರು.

click me!