KAS, FDA ಪರೀಕ್ಷೆಗಳಿಗೆ ಫ್ರೀ ಕೋಚಿಂಗ್: ತ್ವರೆ ಮಾಡಿ

By Ramesh BFirst Published Feb 23, 2020, 3:05 PM IST
Highlights

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಓದುವಾಗ ನಿಮ್ಮ ದೃಷ್ಟಿಕೋನ ಪರೀಕ್ಷೆಯತ್ತ ಇರಬೇಕು. ಅದಕ್ಕೊಂದು ಕ್ರಮವಿರಬೇಕು. ಆಕ್ರಮವನ್ನ ತಿಳಿಯಲು ತರಬೇತಿ ಮುಖ್ಯ.

ಬೆಂಗಳೂರು, (ಫೆ.23): ಇಂದು ಬಹುಪಾಲು ಕೋರ್ಸುಗಳಿಗೆ ಹಾಗೂ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ. 

ನಮ್ಮ ವೃತ್ತಿಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಸೋಪಾನ. ಹಾಗಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಅತ್ಯಗತ್ಯ. ಹಾಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು  ಕೆ.ಎ.ಎಸ್ ಮತ್ತು ಎಫ್‍ಡಿಎ ಪರೀಕ್ಷಾ ಪೂರ್ವ ಉಚಿತ ತರಬೇತಿ ಶಿಬಿರವನ್ನ ಏರ್ಪಡಿಸಿದೆ.

ಗ್ರಾಮಲೆಕ್ಕಿಗ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಕರ್ನಾಟಕ ಸರ್ಕಾರವು 2020ರ ಮೇ ಮಾಹೆಯಲ್ಲಿ ನಡೆಸಲಿರುವ ಕೆಎಎಸ್ ಮತ್ತು ಎಫ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಆಸಕ್ತರು ಫೆ.29 ರೊಳಗಾಗಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದೆಂದು.

ಈ ಬಗ್ಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ 0821-2515944 ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

click me!