3ನೇ ಅಲೆ ಸಾಧ್ಯತೆ ಕ್ಷೀಣ: ತಜ್ಞರು: ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ!

By Kannadaprabha News  |  First Published Nov 7, 2021, 6:45 AM IST

* 3ನೇ ಅಲೆ ಸಾಧ್ಯತೆ ಕ್ಷೀಣ: ತಜ್ಞರು

* ಹೆಚ್ಚು ಜನರು ಸೋಂಕಿಗೆ ಒಳಗಾದರೆ ಮೂರನೇ ಅಲೆ ಅಸಂಭವ

* ಹೆಚ್ಚು ಜನರು ಸೋಂಕಿಗೆ ಒಳಗಾದರೆ ರೋಗ ನಿರೋಧಕ ಶಕ್ತಿ ವೃದ್ಧಿ

* ಅನೇಕ ದೇಶಗಳಲ್ಲಿ ಹೀಗಾಗಿದೆ, ಭಾರತದಲ್ಲೂ ಇದೇ ಸಾಧ್ಯತೆ: ಏಮ್ಸ್‌ ವೈದ್ಯ


ನವದೆಹಲಿ(ನ.07): ಪ್ರಪಂಚದ ವಿವಿಧೆಡೆ 3ನೇ ಅಲೆ ಏಳಲಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆಯ ನಡುವೆಯೇ, ಭಾರತದಲ್ಲಿ ಇಂಥ ಸಾಧ್ಯತೆ ಕ್ಷೀಣವಾಗಿದೆ ಎಂದು ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ದಿಲ್ಲಿಯ ಏಮ್ಸ್‌ ತಜ್ಞರು ಹೇಳಿದ್ದಾರೆ.

‘ಯುರೋಪ್‌ ಹಾಗೂ ಮಧ್ಯ ಏಷ್ಯಾದಲ್ಲಿ ಕೋವಿಡ್‌ ಸಾಂಕ್ರಾಮಿಕದ ತೀವ್ರತೆ ಅಧಿಕವಾಗಿದೆ. ಹಾಗಾಗಿ ಮುಂದಿನ ಫೆಬ್ರವರಿವರೆಗೆ ಇಲ್ಲಿ 5 ಲಕ್ಷ ಜನರು ಸಾವಿಗೀಡಾಗಬಹುದು. ಮೂರನೇ ಅಲೆ ಜಗತ್ತನ್ನು ಬಾಧಿಸಬಹುದು’ ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿತ್ತು.

Tap to resize

Latest Videos

undefined

ಇದಕ್ಕೆ ಪ್ರತಿಕ್ರಿಯಿಸಿರುವ ಏಮ್ಸ್‌ನ ಹಿರಿಯ ಸಾಂಕ್ರಾಮಿಕ ರೋಗ ತಜ್ಞ ಡಾ| ಸಂಜಯ್‌ ಕೆ. ರಾಯ್‌, ‘ಹೆಚ್ಚು ಜನರು ಸೋಂಕಿಗೆ ತುತ್ತಾದರೆ, ಕೋವಿಡ್‌ನ ಮತ್ತೊಂದು ಅಲೆಯ ಸಂಭವನೀಯತೆ ಕಡಿಮೆಯಾಗುತ್ತದೆ. ಸ್ವಾಭಾವಿಕವಾದ ಸೋಂಕಿನಿಂದಾಗಿ ಜನರಲ್ಲಿ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಲಸಿಕೆಯೂ ಸಹ ಸೋಂಕಿನ ತೀವ್ರತೆ ಹಾಗೂ ಸಾವನ್ನು ಕಡಿಮೆ ಮಾಡಿದೆ. ಯುರೋಪ್‌ ಮತ್ತು ಮಧ್ಯ ಏಷ್ಯಾದಲ್ಲಿ ಸೋಂಕಿನ ತೀವ್ರತೆ ಈಗ ಹೆಚ್ಚಾಗಿರಬಹುದು. ಆದರೆ ಫೆಬ್ರವರಿ ವೇಳೆಗೆ ಅದು ಕಡಿಮೆಯಾಗಲಿದೆ. ಭಾರತವೂ ಸೇರಿದಂತೆ ಎಲ್ಲಾ ಕಡೆಯೂ ಇದೇ ರೀತಿ (2ನೇ ಅಲೆ ವೇಳೆ) ನಡೆದಿದೆ. ಹೆಚ್ಚು ಜನರು ಸೋಂಕಿಗೆ ಒಳಗಾದ ಕೂಡಲೇ, ಸೋಂಕಿನ ಪ್ರಮಾಣ ಇಳಿಮುಖವಾಗುತ್ತದೆ’ ಎಂದಿದ್ದಾರೆ.

‘ಮುಂದಿನ ಫೆಬ್ರವರಿವರೆಗೆ 5 ಲಕ್ಷ ಜನರು ಸಾವಿಗೀಡಾದರೆ, ಅವರ ಸಾವನ್ನು ತಡೆಯಲು ಕೋವಿಡ್‌ ಲಸಿಕೆಗೂ ಸಾಧ್ಯವಾಗದಿದ್ದರೆ ಡಬ್ಲ್ಯುಎಚ್‌ಒ ಜಾಗತಿಕಮಟ್ಟದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲಿದೆ. 1.5 ವರ್ಷವಾದರೂ ಸೋಂಕಿನ ಮೂಲವನ್ನು ಕಂಡುಹಿಡಿಯಲು ಡಬ್ಲ್ಯೂಎಚ್‌ಒಗೆ ಸಾಧ್ಯವಾಗಿಲ್ಲ. ಜನರಲ್ಲಿ ಸ್ವಾಭಾವಿಕ ರೋಗನಿರೋಧಕ ಶಕ್ತಿ ಮೂಡಿದ ನಂತರವೂ ವೈರಸ್‌ ಹಾನಿ ಮಾಡುತ್ತದೆ ಎನ್ನುವಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ’ ಎಂದು ಅವರು ಆಕ್ಷೇಪಿಸಿದ್ದಾರೆ.

ವಾಯುಮಾಲಿನ್ಯದ ಮಧ್ಯೆ ಆತಂಕ, ಶಾಕಿಂಗ್ ನ್ಯೂಸ್ ಕೊಟ್ಟ AIIMS ನಿರ್ದೇಶಕ!

 

 ದೀಪಾವಳಿ (Diwali 2021) ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಇದರಿಂದಾಗಿ ಜನರ ಆರೋಗ್ಯದ ಕಾಳಜಿಯೂ ಹೆಚ್ಚಾಗಿದೆ. ಈಗಾಗಲೇ ಉಸಿರಾಟದ ಕಾಯಿಲೆ ಇರುವವರು ಹೆಚ್ಚು ಜಾಗರೂಕತೆಯಿಂದ ಇರುವಂತೆ ತಜ್ಞರು ಎಚ್ಚರಿಸಿದ್ದಾರೆ. ಈ ನಡುವೆ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ (9AIIMS Director Dr Randeep Guleria) ಕೂಡ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ (Coronavirus) ಮಾಲಿನ್ಯದಲ್ಲಿ ಹೆಚ್ಚು ಕಾಲ ಬದುಕುವ ಕ್ಷಮತೆ ಹೊಂದಿದೆ ಎಂದು ಗುಲೇರಿಯಾ ಶುಕ್ರವಾರ ಹೇಳಿದ್ದಾರೆ.

ಕೆಲವು ಅಂಕಿ ಅಂಶಗಳ ಪ್ರಕಾರ, ಕೊರೋನಾ ವೈರಸ್ ದೀರ್ಘಕಾಲದವರೆಗೆ ಮಾಲಿನ್ಯದಲ್ಲಿ (Air Pollution) ಬದುಕುತ್ತದೆ ಎಂದು ಗುಲೇರಿಯಾ ಹೇಳಿದ್ದಾರೆ. ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಬಹುದು ಎಂದೂ ವಾರ್ನ್ ಮಾಡಿದ್ದಾರೆ. ದೆಹಲಿ ವಾಯು ಮಾಲಿನ್ಯವು ಉಸಿರಾಟದ ಕಾಯಿಲೆಗಳು ವಿಶೇಷವಾಗಿ ಶ್ವಾಸಕೋಶದ ಕಾಯಿಲೆಗಳು, ಅಸ್ತಮಾದಿಂದ ಬಳಲುತ್ತಿರುವ ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದೂ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಮಾಲಿನ್ಯದಿಂದಾಗಿ ಕೊರೋನಾ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡು, ವಿಷಮ ಸ್ಥಿತಿಗೆ ಕಾರಣವಾಗಬಹುದು ಎಂದು ಏಮ್ಸ್ (AIIMS) ಮುಖ್ಯಸ್ಥರು ಹೇಳಿದ್ದಾರೆ. ಇದಕ್ಕಾಗಿ ಜನರು ತಪ್ಪದೇ ಮಾಸ್ಕ್ ಧರಿಸುವುದು ಅವಶ್ಯಕ. ಮಾಸ್ಕ್‌ಗಳು ಕೊರೋನಾ ಮತ್ತು ಮಾಲಿನ್ಯ ಎರಡರಿಂದಲೂ ರಕ್ಷಿಸಲು ಸಹಾಯ ಮಾಡುತ್ತದೆ ಎಂದೂ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಹೆಚ್ಚುತ್ತಿರುವ ಮಾಲಿನ್ಯವು ವಯಸ್ಸಾದವರಿಗೆ ಮತ್ತು ಶ್ವಾಸಕೋಶ-ಹೃದಯ ಸಮಸ್ಯೆಗಳಿರುವ ಜನರಿಗೆ ವಿಶೇಷವಾಗಿ ಅಪಾಯಕಾರಿ ಎಂದು ಇತರ ವೈದ್ಯರು ಉಲ್ಲೇಖಿಸಿದ್ದಾರೆ.

click me!