ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದಲ್ಲಿ ತಮಿಳುನಾಡು ಗೀತೆಯಿಂದ 'ದ್ರಾವಿಡ' ಪದವನ್ನು ಕೈಬಿಟ್ಟ ಘಟನೆಗೆ ಸಿಎಂ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಆಗ್ರಹಿಸಿದ್ದಾರೆ.
ನವದೆಹಲಿ: ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವನ್ನು ಹಿಂದಿಮಾಸದೊಂದಿಗೆ ಆಚರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯ 'ಸಂವಿಧಾನದ ಪ್ರಕಾರ ದೇಶದ ಯಾವ ಭಾಷೆಗೂ ರಾಷ್ಟ್ರಭಾಷೆಯ ಸ್ಥಾನ ನೀಡಲಾಗಿಲ್ಲ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದೆ. ಹೀಗಿರುವಾಗ, ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯ ಬಗ್ಗೆ ಕೇಂದ್ರದ ಆಗ್ರಹಿಸಿದ್ದಾರೆ. ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.
ಇಂತಹ ಕಾರ್ಯಕ್ರಮಗಳು ಭಿನ್ನ ಭಾಷೆಗಳ ರಾಜ್ಯಗಳೊಂದಿಗಿನ ಸಂಬಂಧ ಹದಗೆಡಲು ಕಾರಣವಾಗಬಹುದು. ಕೇಂದ್ರ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಬಯಸಿದರೆ, ಪ್ರತಿ ರಾಜ್ಯಗಳ ಸ್ಥಳೀಯ ಹಾಗೂ ಶಾಸ್ತ್ರೀಯ ಭಾಷೆಗಳ ಕಾರ್ಯಕ್ರಮಗಳಿಗೂ ಸಮಾನ ಪ್ರಾಮುಖ್ಯತೆ ನೀಡಬೇಕು' ಎಂದು ಸೂಚಿಸಿದ್ದಾರೆ.
ರಾಜ್ಯಪಾಲ ಆರ್.ಎನ್.ರವಿ ಉಪಸ್ಥಿತರಿದ್ದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಗೀತೆಯಿಂದ 'ದ್ರಾವಿಡ' ಪದ ಕೈಬಿಟ್ಟ ಘಟನೆ ಗುರುವಾರ ನಡೆದಿದೆ. ಅದರ ಬೆನ್ನಲ್ಲೇ ಇದನ್ನು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಆಗ್ರಹ ಮಾಡಿದ್ದಾರೆ.
ಶುಕ್ರವಾರ ಇಲ್ಲಿ ಆಯೋಜನೆಗೊಂಡಿದ್ದ ಚೆನ್ನೈ ದೂರದರ್ಶನದ ಸುವರ್ಣಮಹೋತ್ಸವ ಮತ್ತು ಹಿಂದಿ ಮಾಸಾಚರಣೆ ಅಂತಿಮ ದಿನದ ಕಾರ್ಯಕ್ರಮದಲ್ಲಿ ಗಾಯಕರು ತಮಿಳುನಾಡ ಗೀತೆ ಹಾಡಿದ್ದರು. ಆದರೆ ಆ ಗೀತೆ ಹಾಡುವ ವೇಳೆ ದ್ರಾವಿಡ ಪದವನ್ನು ಬಿಡಲಾಗಿತ್ತು. ಇದರಿಂದ ಕುಪಿತರಾದ ಸಿಎಂ ಸ್ಟಾಲಿನ್, 'ದ್ರಾವಿಡ ಅಲರ್ಜಿಯಿಂದ ಬಳಲುತ್ತಿರುವ ರಾಜ್ಯಪಾಲರು ರಾಷ್ಟ್ರಗೀತೆಯಲ್ಲಿರುವ ದ್ರಾವಿಡ ಪದವನ್ನೂ ಕೈಬಿಡುತ್ತಾರೆಯೇ? ತಮಿಳುನಾಡು ಹಾಗೂ ಇಲ್ಲಿನ ಜನರ ಭಾವನೆಗಳಿಗೆ ನಿರಂತರವಾಗಿ ಧಕ್ಕೆಯುಂಟುಮಾಡುತ್ತಿರುವ ಇವರನ್ನು ಕೇಂದ್ರ ಸರ್ಕಾರ ಕರೆಸಿಕೊಳ್ಳಬೇಕು' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಟಾಲಿನ್ ಸರ್ಕಾರದ ವಿರುದ್ಧ ರಾಜ್ಯಪಾಲ ರವಿ ಗಂಭೀರ ಆರೋಪ
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, 'ತಮಿಳುನಾಡು ಸರ್ಕಾರ ಭಾಷೆ ಹೆಸರಿನಲ್ಲಿ ರಾಜ್ಯವನ್ನು ದೇಶದಿಂದ ಪ್ರತ್ಯೇಕಿಸುವ ಯತ್ನಕ್ಕೆ ಕೈ ಹಾಕಿದೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ದೇಶ ವಿಭಜಿಸುವ ಇಂಥಹ ಯತ್ನಗಳು ಎಂದೂ ಫಲಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಮಿಳು ದೂರದರ್ಶನದ ಹಿಂದಿ ಮಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ರಾಜ್ಯವನ್ನು ದೇಶದಿಂದ ಬೇರ್ಪಡಿಸಲು ಹಲವು ಬಗೆಯ ಷಡ್ಯಂತ್ರವನ್ನು ಮಾಡುತ್ತಿವೆ. ದೇಶದೊಂದಿಗಿನ ಸಂವಹನವನ್ನು ಮುರಿಯಬೇಕು ಎಂದು ಬಯಸುತ್ತಿದ್ದಾರೆ. ಆದರೆ ಇವರ ದುರುದ್ದೇಶಭರಿತ ನೀತಿಯು ಎಂದೂ ಫಲಕೊಡದು. ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಹಿಂದಿ ಬಗೆಗೆ ಅಪಪ್ರಚಾರ ಮಾಡಲಾಗಿದೆ. ಇದರ ಫಲವಾಗಿ ಇಂದು ಭಾಷಾ ಅಲ್ಪಸಂಖ್ಯಾತರು ಹಿಂದಿ ಕಲಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಿದೆ' ಎಂದರು.
ಮೋದಿ 10 ವರ್ಷದ ಅವಧಿಯಲ್ಲಿ ತೆರಿಗೆ ಸಂಗ್ರಹ ಶೇ.182 ಏರಿಕೆ
'ಅಣ್ಣಾಮಲೈ ಮತ್ತು ಅಳಗಪ್ಪ ವಿಶ್ವವಿದ್ಯಾಲಯಗಳು ಸಂಸ್ಕೃತ ಕಲಿಕೆ ಉತ್ತೇಜನಕ್ಕೆ ಹೆಸರುವಾಸಿಯಾಗಿದ್ದವು. ಜೊತೆಗೆ ಮದ್ರಾಸ್ ವಿವಿ ಸಂಸ್ಕೃತ ವಿಭಾಗವು ಹೆಚ್ಚು ಜನಪ್ರಿಯವಾಗಿತ್ತು. ಆದರೆ ಈಗ ಎರಡರ ಸಂಸ್ಕೃತ ಮುಚ್ಚಿಹೋಗಿದೆ. ಮದ್ರಾಸ್‌ನಲ್ಲಿಯೂ ಕಣ್ಮರೆ ಸ್ಥಿತಿಯಲ್ಲಿದೆ' ಎಂದು ವಿಷಾದಿಸಿದರು.
ಮೋದಿಯಿಂದತಮಿಳು ಜನಪ್ರಿಯ: ರಾಜ್ಯ ಸರ್ಕಾರ ಹಿಂದಿ ವಿರೋಧಿಸುವುದರ ಜೊತೆಗೆ ತಮಿಳನ್ನು ಕಡೆಗಣಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ಭಾಷೆಯನ್ನು ವಿದೇಶಗಳಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
12000 ಅಡಿ ಎತ್ತರದ ನಿರ್ಜನ ಪ್ರದೇಶದಲ್ಲಿ ಸಿಲುಕಿದ್ದ ಮುಖ್ಯ ಚುನಾವಣಾ ಆಯುಕ್ತರನ್ನ ರಕ್ಷಿಸಿದ ಬೆಂಗಳೂರಿನ ಚಾರಣಿಗ