ಇನ್ಮೇಲೆ ಮದ್ಯ ಖರೀದಿಗೂ ಬೇಕು ಆಧಾರ್ ಕಾರ್ಡ್, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!

By Chethan Kumar  |  First Published Nov 12, 2024, 4:22 PM IST

ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಯಾವುದೇ ಇರಲಿ, ಮದ್ಯ ಖರೀದಿಸಬೇಕು, ಕುಡಿಯಬೇಕು ಅಂದರೆ ಜೇಬಲ್ಲಿ ಆಧಾರ್ ಇಟ್ಟುಕೊಳ್ಳುವ ದಿನ ಶೀಘ್ರದಲ್ಲೇ ಬರಲಿದೆ. ಇದೀಗ ಸುಪ್ರೀಂ ಕೋರ್ಟ್ ಈ ಕುರಿತು ಉತ್ತರ ಕೇಳಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
 


ನವದೆಹಲಿ(ನ.12) ವೈನ್ ಶಾಪ್‌ಲ್ಲಿ ಮದ್ಯ ಖರೀದಿಸಬೇಕಾ? ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ತೆರಳಿ ಮದ್ಯ ಕುಡಿಯಬೇಕಾ? ಪಬ್‌ನಲ್ಲಿ ಪಾರ್ಟಿ ಮಾಡೋ ಪ್ಲಾನ್ ಇದೆಯಾ? ಅಲ್ಕೋಹಾಲ್ ಇರುವ ಯಾವುದೇ ಕಡೆ ಹೋದರು ಜೇಬಲ್ಲಿ ಆಧಾರ್ ಕಾರ್ಡ್ ಇಟ್ಟುಕೊಳ್ಳಬೇಕಾಗಬಹುದು.  ಎಷ್ಟೇ ದುಡ್ಡಿದ್ದರೂ ಆಧಾರ್ ಕಾರ್ಡ್ ಇಲ್ಲ ಎಂದರೆ ಮದ್ಯ ಸಿಗುವುದು ಕಷ್ಟವಾಗಲಿದೆ. ಕಾರಣ ಸುಪ್ರೀಂ ಕೋರ್ಟ್ ಮದ್ಯ ಖರೀದಿ, ಕುಡಿಯುವ ವಯಸ್ಸಿನ ಕುರಿತ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮದ್ಯ ಖರೀದಿಗೆ ವಯಸ್ಸು ದೃಢೀಕರಣ ಅತ್ಯಗತ್ಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮದ್ಯ ಸೇವೆಸಿ ಚಾಲನೆ ಮಾಡುತ್ತಿರುವ ಘಟನೆ, ಅಪಘಾತ, ಸಾವು ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ ಮದ್ಯ ಖರೀದಿ, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಇತರ ಕಡೆಗಳಲ್ಲಿ ಕುಡಿಯಲು ವಯಸ್ಸು ಖಚಿತಪಡಿಸಿಕೊಳ್ಳಬೇಕು ಅನ್ನೋ ಸಲಹೆಯನ್ನು ಅರ್ಜಿ ಸೂಚಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಈ ಕುರಿತು ಕೇಂದ್ರ ಸರ್ಕಾರಕ್ಕೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ.

Latest Videos

ಬಸ್‌ನಲ್ಲಿ ಎಷ್ಟು ಬಾಟಲಿ ಮದ್ಯ ಕೊಂಡೊಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!

ದೇಶದಲ್ಲಿ ಇತ್ತೀಚೆಗೆ ಡ್ರಿಂಕ್ ಆ್ಯಂಡ್ ಡ್ರೈವ್ ಘಟನೆಗಳು ಹೆಚ್ಚಾಗಿದೆ. ಇದರಿಂದ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಕೆಂಗೇರಿಯಲ್ಲೂ ಇದೇ ರೀತಿ ಘಟನೆ ನಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಪ್ರಮುಖವಾಗಿ ಅಪ್ರಾಪ್ತರು ಮದ್ಯ ಕುಡಿದು ವಾಹನ ಚಾಲನೆ ಮಾಡಿ ಹಲವರ ಬಲಿ ತೆಗೆದುಕೊಂಡಿದ್ದಾರೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ ಯಾವುದೇ ವೈನ್ ಶಾಪ್, ಬಾರ್ ರೆಸ್ಟೋರೆಂಟ್ ಸೇರಿದಂತೆ ಇತೆರೆಡೆ ಮದ್ಯ ಖರೀದಿಸುವಾಗ ಗ್ರಾಹಕ ಫೋಟೋ ಇರುವು ಗುರುತಿನ ಚೀಟಿ ತೋರಿಸಬೇಕು. ಆತನ ವಯಸ್ಸು ಖಚಿತಪಡಿಸಿಕೊಂಡ ಬಳಿಕವೇ ಮದ್ಯ ಮಾರಾಟ ಮಾಡಬೇಕು ಎಂದು ಸೂಚಿಸಿದೆ. 

ಕೆಲ ರಾಜ್ಯಗಳಲ್ಲಿ ಮದ್ಯ ಕುಡಿಯುವ ಅರ್ಹತಾ ವಯಸ್ಸು 25. ಭಾರತದಲ್ಲಿ ಮದ್ಯ ಕುಡಿಯಲು ಕನಿಷ್ಠ ವಯಸ್ಸು 18 ತುಂಬಿರಬೇಕು. ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಪ್ರಾಪ್ತನಿಗೆ 10,000 ರೂಪಾಯಿ ದಂಡ ವಿಧಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸೂಚಿಸಲಾಗಿದೆ. ಇಷ್ಟೇ ಅಲ್ಲ ಅಪ್ರಾಪ್ತನಿಗೆ ಮದ್ಯ ಮಾರಾಟ ಮಾಡಿದ ಶಾಪ್ ಮಾಲೀಕರಿಗೆ 50,000 ರೂಪಾಯಿ ದಂಡ ಜೊತೆಗೆ ಲೈಸೆನ್ಸ್ ರಿಮಾರ್ಕ್ ಹಾಕಬೇಕು ಎಂದು ಸೂಚಿಸಲಾಗಿದೆ.

ಇನ್ನು ಮನೆ ಬಾಗಿಲಿಗೆ ಮದ್ಯ ಡೆಲಿವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇದು ಮತ್ತಷ್ಟು ಅಪಾಯಕ್ಕೆ ಅಹ್ವಾನ ನೀಡಿದಂತೆ. ಈ ರೀತಿಯ ವ್ಯವಸ್ಥೆ ಭಾರತದಲ್ಲಿ ಜಾರಿಯಾಗಬಾರದು ಎಂದು ಪಿಐಎಲ್‌ನಲ್ಲಿ ಸೂಚಿಸಲಾಗಿದೆ. ಈ ಕುರಿತು ಜಸ್ಟೀಸ್ ಬಿಆರ್ ಗವಾಯಿ, ಕೆವಿ ವಿಶ್ವನಾಥನ್ ಪೀಠ ವಿಚಾರಣೆ ನಡೆಸಿದೆ. ಅಪ್ರಾಪ್ತರು ಬೇರೆಯವರಿಂದ ಮದ್ಯ ತರಿಸಿದರೆ? ತನ್ನ ಕೆಲಸದವರನ್ನು ಕಳುಹಿಸಿ ಮದ್ಯ ಖರೀದಿಸುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸುವುದು ಹೇಗೆ ಎಂದು ಪೀಠ ಪ್ರಶ್ನಿಸಿದೆ.

800 ರೂ ಬೆಲೆಯ ಈ ವೊಡ್ಕಾ ಭಾರತದಲ್ಲಿ ನಂ.1, ಆದರೆ ಹೆಚ್ಚನವರಿಗೆ ಗೊತ್ತೇ ಇಲ್ಲ!

ಅರ್ಜಿದಾರ ಇತ್ತೀಚೆಗೆ ನಡೆದಿರುವ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಈ ಘಟನೆಗಳಲ್ಲಿ ಅಪ್ರಾಪ್ತರ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿರುವ ಅನಾಹುತವನ್ನು ಉಲ್ಲೇಖಿಸಿದ್ದಾರೆ. ಇತ್ತ ಸುಪ್ರೀಂ ಕೋರ್ಟ್ ಪೀಠ ಕೆಲ ಪ್ರಶ್ನೆಗಳನ್ನು ಎತ್ತಿದೆ. ಕಠಿಣ ನಿಯಮ ಜಾರಿಗೊಳಿಸಲು, ಅಪ್ರಾಪ್ತರು ಮದ್ಯ ಖರೀದಿ ಹಾಗೂ ಸೇವನೆಯಿಂದ ದೂರ ಇರುವಂತೆ ಮಾಡಲು ಏನು ಮಾಡಬೇಕು ಅನ್ನೋ ಕುರಿತು ಇದೀಗ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರದ ನಿಲುವ ಹಾಗೂ ಅಭಿಪ್ರಾಯ ತಿಳಿಸಲು ಸೂಚಿಸಿದೆ.
 

click me!