ನಟ ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಸಂಚನ್ನು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ನಾಲ್ವರನ್ನು ಶನಿವಾರ ನವೀ ಮುಂಬೈ ಪೊಲೀಸರು ಬಂಧಿಸಿದ್ದಾರೆ
ಮುಂಬೈ (ಜೂ.2): ನಟ ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಸಂಚನ್ನು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ನಾಲ್ವರನ್ನು ಶನಿವಾರ ನವೀ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಬಂಧಿತ ಆರೋಪಿಗಳು ಜೈಲಿನಲ್ಲಿರುವ ಲಾರೆನ್ಸ್ ಮತ್ತು ವಿದೇಶದಲ್ಲಿರುವ ಅನ್ಮೋಲ್ ಬಿಷ್ಣೋಯಿ ಸಂಪರ್ಕದಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಪೈಕಿ ಅಜಯ್ ಕಶ್ಯಪ್ ಎಂಬಾತ ಪಾಕಿಸ್ತಾನದಲ್ಲಿರುವ ಡೋಗರ್ ಎಂಬ ವ್ಯಕ್ತಿಯ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಎಕೆ-47 ನಂತಹ ಶಸ್ತ್ರಾಸ್ತ್ರಗಳನ್ನು ಆರ್ಡರ್ ಮಾಡಿದ್ದ. ಸಲ್ಮಾನ್ ಹತ್ಯೆ ಬಳಿಕ ಇವರೆಲ್ಲಾ ಶ್ರೀಲಂಕಾಕ್ಕೆ ಪರಿಯಾಗಲು ಸಂಚು ರೂಪಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಪ್ಪನ್ ಹಂತಕ ಪೊಲೀಸ್ ಅಧಿಕಾರಿ ಸಸ್ಪೆಂಡ್ ಡ್ರಾಮಾ
ಲಾರೆನ್ಸ್ ಬಿಷ್ಣೋಯಿ ಮತ್ತು ಸಂಪತ್ ನೆಹ್ರಾ ಗ್ಯಾಂಗ್ ನ ಸುಮಾರು 60 ರಿಂದ 70 ಹುಡುಗರು ಮುಂಬೈ, ರಾಯಗಢ, ನವೀ ಮುಂಬೈ, ಥಾಣೆ, ಪುಣೆ ಮತ್ತು ಗುಜರಾತ್‌ನಿಂದ ಬಂದು ಸಲ್ಮಾನ್ ಖಾನ್ ಮೇಲೆ ಕಣ್ಣಿಟ್ಟಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಒಂದು ತಿಂಗಳಿನಿಂದಲೂ ತನಿಖೆ ಕೈಗೊಂಡ ಪೊಲೀಸರು ಲಾರೆನ್ಸ್ ಬಿಷ್ಣೋಯಿ, ಅವನ ತಮ್ಮ ಅನ್ಮೋಲ್ ಬಿಷ್ಣೋಯಿ ಸೇರಿದಂತೆ ಒಟ್ಟು 17 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದರು.