ಜಗತ್ತಿನಲ್ಲೇ ಮೊದಲ ಬಾರಿ ರಷ್ಯಾದಿಂದ ಉಕ್ರೇನ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ! ಏನಿದು ICBM?

By Kannadaprabha News  |  First Published Nov 22, 2024, 5:15 AM IST

ಇತ್ತೀಚೆಗಷ್ಟೇ 1000 ದಿನ ಪೂರೈಸಿರುವ ಉಕ್ರೇನ್‌ ಮೇಲಿನ ಯುದ್ಧದಲ್ಲಿ ರಷ್ಯಾ ಮೊದಲ ಬಾರಿಗೆ ಐಸಿಬಿಎಂ (ಇಂಟರ್‌ ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌) ಬಳಕೆ ಮಾಡಿದೆ. ಷ್ಯಾದ ಈ ಅತ್ಯಾಧುನಿಕ ಕ್ಷಿಪಣಿ ಬಳಕೆ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.


ಕೀವ್‌ (ನ.22): ಇತ್ತೀಚೆಗಷ್ಟೇ 1000 ದಿನ ಪೂರೈಸಿರುವ ಉಕ್ರೇನ್‌ ಮೇಲಿನ ಯುದ್ಧದಲ್ಲಿ ರಷ್ಯಾ ಮೊದಲ ಬಾರಿಗೆ ಐಸಿಬಿಎಂ (ಇಂಟರ್‌ ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌) ಬಳಕೆ ಮಾಡಿದೆ. ವಿಶ್ವದ ಇತಿಹಾಸದಲ್ಲೇ ಯುದ್ಧವೊಂದರ ವೇಳೆ ಇಂಥ ಕ್ಷಿಪಣಿ ಬಳಕೆ ಇದೇ ಮೊದಲು. ಜೊತೆಗೆ ಐಸಿಬಿಎಂನಲ್ಲಿ ಒಂದೇ ಕಾಲಕ್ಕೆ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ದಾಳಿ ನಡೆಸಬಲ್ಲ ಎಂಐಆರ್‌ವಿ ತಂತ್ರಜ್ಞಾನವೂ ಅಳವಡಿಕೆಯಾಗಿತ್ತು. ಇದರ ಬಳಕೆಯೂ ಇದೇ ಮೊದಲು ಎನ್ನಲಾಗಿದೆ. ಹೀಗಾಗಿ ರಷ್ಯಾದ ಈ ಅತ್ಯಾಧುನಿಕ ಕ್ಷಿಪಣಿ ಬಳಕೆ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.

ಎರಡು ದಿನಗಳ ಹಿಂದಷ್ಟೇ ಅಮೆರಿಕದ ನೀಡಿದ್ದ ಕ್ಷಿಪಣಿ ಬಳಸಿ ರಷ್ಯಾ ಮೇಲೆ ಉಕ್ರೇನ್‌ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ತನ್ನ ಪರಮಾಣು ದಾಳಿ ನೀತಿಯಲ್ಲಿ ಬದಲಾವಣೆ ಘೋಷಿಸಿದ್ದ ರಷ್ಯಾ, ಅಗತ್ಯಬಿದ್ದರೆ ಪರಮಾಣು ಅಸ್ತ್ರ ರಹಿತ ದೇಶಗಳ ಮೂಲಕ ಪರಮಾಣು ದಾಳಿಗೆ ಅವಕಾಶ ಕಲ್ಪಿಸಿತ್ತು. ಅದರ ಬೆನ್ನಲ್ಲೇ ಉಕ್ರೇನ್‌ ನಿಪ್ರೋ ನಗರ ಸೇರಿದಂತೆ ಉಕ್ರೇನ್‌ನ ಹಲವು ನಗರಗಳ ಮೇಲೆ ರಷ್ಯಾ ತನ್ನ ಆರ್‌ಎಸ್‌- 26 ರುಬೆಝ್‌ ಐಸಿಬಿಎಂ ಕ್ಷಿಪಣಿ ಮತ್ತು ಎಂಐಆರ್‌ವಿ ತಂತ್ರಜ್ಞಾನದ ಕ್ಷಿಪಣಿ ಬಳಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಏನು ಹಾನಿ ಆಗಿದೆ ಎಂಬುದನ್ನು ಉಕ್ರೇನ್‌ ಬಹಿರಂಗ ಪಡಿಸಿಲ್ಲ.

Latest Videos

undefined

ಮೋದಿ ಸರ್ಕಾರದಿಂದ ಮತ್ತೊಂದು ಸಾಧನೆ; ದೇಶದ ಮೊಟ್ಟಮೊದಲ ಹೈಡ್ರೋಜನ್‌ ಟ್ರೈನ್ ಸಂಚಾರಕ್ಕೆ ಸಜ್ಜು!

ಆದರೆ ಈ ದಾಳಿಯ ಉದ್ದೇಶ ತಕ್ಷಣಕ್ಕೆ ಉಕ್ರೇನ್‌ನಲ್ಲಿ ಯಾವುದೇ ಹಾನಿ ಮಾಡುವುದಕ್ಕಿಂತ, ಉಕ್ರೇನ್‌ಗೆ ನೆರವು ನೀಡುತ್ತಿರುವ ಅಮೆರಿಕ, ಬ್ರಿಟನ್‌, ಉತ್ತರ ಕೊರಿಯಾ ಮತ್ತು ನ್ಯಾಟೋ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸುವ ಪ್ರಯತ್ನವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಆರ್‌ಎಸ್‌-26 ರುಬೆಝ್‌: ಇದು ರಷ್ಯಾ ನಿರ್ಮಿತ ಖಂಡಾಂತರ ಬ್ಯಾಲೆಸ್ಟಿಕ್‌ ಕ್ಷಿಪಣಿ. 36000 ಕೆಜಿ ತೂಕವಿದೆ. ಇದು 800 ಕೆಜಿಯಷ್ಟು ಅಣ್ವಸ್ತ್ರ ಸಿಡಿತಲೆ ಸೇರಿದಂತೆ ಯಾವುದೇ ಸಿಡಿತಲೆ ಹೊತ್ತೊಯ್ದು ದಾಳಿ ನಡೆಸಬಲ್ಲದು. ಇದು ಗರಿಷ್ಠ 5500 ಕಿ.ಮೀ ವರೆಗೆ ದಾಳಿ ನಡೆಸಬಲ್ಲದು. ಗಂಟೆಗೆ 24500 ಕಿ.ಮೀ ವೇಗದಲ್ಲಿ ಸಾಗಬಲ್ಲದಾಗಿದೆ.

ಮೋದಿ ಸರ್ಕಾದ ಮಹತ್ವದ ಹೆಜ್ಜೆ, 19 ಸಾವಿರ ಕೋಟಿ ರೂ ವೆಚ್ಚದ ಗ್ರೀನ್ ಹೈಡ್ರೋಜನ್‌ಗೆ ಅನುಮೋದನೆ!

ಈ ಕ್ಷಿಪಣಿಗೆ ಎಂಐಆರ್‌ವಿ (ಮಲ್ಟಿಪಲ್‌ ಇಂಡಿಪೆಂಡೆಂಟ್ಲಿ ಟಾರ್ಗೆಟಬಲ್‌ ರೀ ಎಂಟ್ರಿ ವೆಹಿಕಲ್‌) ತಂತ್ರಜ್ಞಾನವನ್ನೂ ಅಳವಡಿಕೆ ಮಾಡಲಾಗಿತ್ತು. ಇಂಥ ಕ್ಷಿಪಣಿಗಳು ಏಕಕಾಲಕ್ಕೆ ಸಾವಿರಾರು ಕಿ.ಮೀ ದೂರದೂರದ ಗುರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಬಲ್ಲದಾಗಿರುತ್ತದೆ.

click me!