* ಅತ್ಯಾಚಾರದ ಆಧಾರದ ಮೇಲೆ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸುವ ಹಕ್ಕಿದೆ
* ಷರತ್ತುಗಳಿಗೆ ಒಳಪಟ್ಟು ಇಂತಹುದ್ದೊಂದು ಹೆಜ್ಜೆ ಇರಿಸಲು ಆಕೆಗೆ ಹಕ್ಕಿದೆ
* ತೀರ್ಪು ಪ್ರಕಟಿಸಿದ ಉತ್ತರಾಖಂಡ್ ಹೈಕೋರ್ಟ್
ಡೆಹ್ರಾಡೂನ್(ಫೆ.07): 1971ರ ವೈದ್ಯಕೀಯ ಗರ್ಭಪಾತ ಕಾಯಿದೆಯ ಷರತ್ತುಗಳಿಗೆ ಒಳಪಟ್ಟು ಅತ್ಯಾಚಾರ ಸಂತ್ರಸ್ತ ಮಹಿಳೆ ಗರ್ಭಪಾತ ಮಾಡುವ ಹಕ್ಕನ್ನು ಹೊಂದಿದ್ದಾಳೆ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ. ಜಸ್ಟಿಸ್ ಅಲೋಕ್ ಕುಮಾರ್ ವರ್ಮಾ ಅವರು ಬದುಕುವ ಹಕ್ಕು ಎಂದರೆ "ಬದುಕು ಅಥವಾ ಪ್ರಾಣಿಗಳ ಅಸ್ತಿತ್ವ" ಕ್ಕಿಂತ ಹೆಚ್ಚು ಎಂದು ಒತ್ತಿ ಹೇಳಿದರು. ಅಲ್ಲದೇ ಇದು ಘನತೆಯಿಂದ ಬದುಕುವ ಹಕ್ಕನ್ನು ಒಳಗೊಂಡಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ,
"ಅತ್ಯಾಚಾರದ ಆಧಾರದ ಮೇಲೆ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸುವ ಹಕ್ಕಿದೆ. ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಆಯ್ಕೆ ಮಾಡುವ ಹಕ್ಕಿದೆ. ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಷರತ್ತುಗಳಿಗೆ ಒಳಪಟ್ಟು ಇಂತಹುದ್ದೊಂದು ಹೆಜ್ಜೆ ಇರಿಸಲು ಆಕೆಗೆ ಹಕ್ಕಿದೆ." ಎಂದಿದೆ.
ಏನಿದು ಪ್ರಕರಣ?
- 16 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯ ತಂದೆ ಆಕೆಯ 28 ವಾರಗಳ ಗರ್ಭಧಾರಣೆಯನ್ನು ತಕ್ಷಣವೇ ಅಂತ್ಯಗೊಳಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಗರ್ಭಾವಸ್ಥೆಯನ್ನು ಮುಂದುವರಿಸಲು ಅವಕಾಶ ನೀಡಿದರೆ ಸಂತ್ರಸ್ತೆ ಮಾನಸಿಕವಾಗಿ ಘಾಸಿಗೊಳ್ಳುತ್ತಾಳೆ ಮತ್ತು ಮಗು ಅನೇಕ ಸಮಸ್ಯೆಗಳೊಂದಿಗೆ ಜನಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ನ್ಯಾಯಾಲಯದ ಹಿಂದಿನ ಆದೇಶಗಳಿಗೆ ಅನುಗುಣವಾಗಿ, ವೈದ್ಯಕೀಯ ಮಂಡಳಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಸಂತ್ರಸ್ತೆ ಮತ್ತು ಭ್ರೂಣದ ಕಾರ್ಯಸಾಧ್ಯತೆಯ ಅಪಾಯವನ್ನು ಪರಿಗಣಿಸಿ, ಈ ಸಂದರ್ಭದಲ್ಲಿ ಅಬಾರ್ಷನ್ ಮಾಡಿಸುವುದು ಸೂಕ್ತವಲ್ಲ ಎಂದು ಹೇಳಿದೆ. ಅಲ್ಲದೇ ಇದು ಸಂತ್ರಸ್ತೆಯ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
- ಹೀಗಿರುವಾಗ ಗರ್ಭಾವಸ್ಥೆಯನ್ನು ಮುಂದುವರಿಸಲು ಒತ್ತಾಯಿಸುವುದು ಆರ್ಟಿಕಲ್ 21 ರ ಅಡಿಯಲ್ಲಿ ಖಾತರಿಪಡಿಸಲಾದ ಮಾನವ ಘನತೆಯೊಂದಿಗೆ ಬದುಕುವ ಹುಡುಗಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ;
- ಸಂತ್ರಸ್ತೆಯ ಜೀವಕ್ಕೆ ಯಾವುದೇ ಅಪಾಯ ಕಂಡುಬಂದಲ್ಲಿ ಕಾರ್ಯವಿಧಾನವನ್ನು ರದ್ದುಗೊಳಿಸುವ ನಿರ್ದೇಶನದೊಂದಿಗೆ ಾಬಾರ್ಷನ್ ಮಾಡಿಸಲು ಅನುಮತಿಸಲಾಗಿದೆ.