ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ಬಿಷಪ್| ಕೇರಳ ಸನ್ಯಾಸಿನಿ ರೇಪ್: ಆರೋಪಿ ಪಾದ್ರಿ ಮುಲಕ್ಕಲ್‌ಗೆ ಕೊರೋನಾ|
ನವದೆಹಲಿ(ಜು.15): ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ಬಿಷಪ್ ಫ್ರಾಂಕೋ ಮುಲಕ್ಕಲ್‌ಗೆ ಕೊರೋನಾ ವೈರಸ್ ತಟ್ಟಿದೆ ಎಂದು ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.
'ನಿಮಿಷಕ್ಕೊಂದು ತೀರ್ಮಾನ, ಮಂತ್ರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸೋಂಕು ಹೆಚ್ಚಳ'
ಸೋಮವಾರವಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಮುಲಕ್ಕಲ್ ಅರೋಗ್ಯ ಸರಿ ಇಲ್ಲ ಎಂದು ಅವರ ಪಿಆರ್‌ಒ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕೋವಿಡ್-19 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರಿಂದ ಮುಲಕ್ಕಲ್‌ಗೂ ವೈರಸ್ ಅಂಟಿದೆ ಎಂದು ಅವರ ವಕೀಲ ಕೋರ್ಟ್‌ಗೆ ತಿಳಿಸಿದ್ದಾರೆ.
ಸೋಮವಾರದ ವಿಚಾರಣೆ ವೇಳೆಯೂ ಅವರ ಪ್ರದೇಶ ಜಲಂಧರ್‌ನ ನಿಯಂತ್ರಿತ ವಲಯದಲ್ಲಿ ಇರುವುದರಿಂದ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.