16 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಆತನ ಸಲಿಂಗಕಾಮಿ ಸ್ನೇಹಿತನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.
ರಾಜ್‌ಕೋಟ್: 16 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಆತನ ಸಲಿಂಗಕಾಮಿ ಸ್ನೇಹಿತನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಪ್ರಥಮಿ ಪಿಯುಸಿ ಓದುತ್ತಿದ್ದ 16 ವರ್ಷದ ಯುವಕನ ಹತ್ಯೆಗೂ ಮೊದಲು ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಕೊಲೆ ಮಾಡಲಾಗಿದೆ. 22 ವರ್ಷದ ಆತನ ಸಲಿಂಗಕಾಮಿ ಸ್ನೇಹಿತನೇ ಈ ಕೃತ್ಯವೆಸಗಿದ್ದಾನೆ.
16 ವರ್ಷದ ಕಾಲೇಜು ಹುಡುಗ ಮತ್ತೊಬ್ಬ ವ್ಯಕ್ತಿಯೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದ, ಇದರಿಂದ ಅಸೂಯೆಗೊಳಗಾದ ಸಲಿಂಗಕಾಮಿ ಸ್ನೇಹಿತ ಈ ಕೃತ್ಯವೆಸಗಿದ್ದಾನೆ ಎಂದು ವಿಚಾರಣೆ ನಡೆಸಿದ ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಕಾಲೇಜು ವಿದ್ಯಾರ್ಥಿಯ ಶವ ಅರ್ಧ ಸುಟ್ಟ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಜಮಾನಗರ್-ಕಲಾವಡ್ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು. ಬಾಲಕನ ಪೋಷಕರು ಈ ಬಾಲಕ ಗುರುವಾರ ಸಂಜೆ ಮನೆಗೆ ಬಂದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಬಾಲಕ ಕೊಲೆಯಾಗಿರುವುದ ತಿಳಿದು ಬಂದಿದೆ.
ವಿಚಾರಣೆ ವೇಳೆ ಬಾಲಕ ಕೊನೆಯದಾಗಿ ತನ್ನ ಸಲಿಂಗಿ ಸ್ನೇಹಿತನ ಜೊತೆ ಕಾಣಿಸಿಕೊಂಡಿದ್ದು ತಿಳಿದು ಬಂದಿತ್ತು. ನಂತರ ಆತನನ್ನು ಹಿಡಿದು ತದುಕಿ ವಿಚಾರಿಸಿದಾಗ ಆತ ತಾನೇ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎನ್ಎ ಛವ್ಡಾ ಹೇಳಿದ್ದಾರೆ. ಆರೋಪಿ ಹಾಗೂ ಮೃತ ಬಾಲಕನ ಕುಟುಂಬಸ್ಥರು ಹಲವು ವರ್ಷಗಳಿಂದ ಆತ್ಮೀಯರಾಗಿದ್ದು, ಈ ಯುವಕರು ಸಲಿಂಗಸ್ನೇಹವನ್ನು ಹೊಂದಿದ್ದರು. ಕಾಲೇಜು ಹುಡುಗ ಇತ್ತೀಚೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯನಾಗಿದ್ದು, ಇದು ಆರೋಪಿಯ ಕೋಪಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನ ಮರಣೋತ್ತರ ವರದಿಯಲ್ಲಿ ಕೊಲೆಗೂ ಮೊದಲು ಲೈಂಗಿಕ ದೌರ್ಜನ್ಯವೆಸಗಿರುವುದು ಪತ್ತೆಯಾಗಿದೆ.