ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯರು ಸಂತ್ರಸ್ತರಾಗುವುದು ಸಾಮಾನ್ಯ. ಆದರೆ ಪಂಜಾಬ್‌ನಲ್ಲಿ ಮಹಿಳೆಯೊಬ್ಬರ ಮೇಲೆಯೇ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯರು ಸಂತ್ರಸ್ತರಾಗುವುದು ಸಾಮಾನ್ಯ. ಆದರೆ ಪಂಜಾಬ್‌ನಲ್ಲಿ ಮಹಿಳೆಯೊಬ್ಬರ ಮೇಲೆಯೇ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆದರೆ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಮಹಿಳೆಯರ ಮೇಲೆ ಹೀಗೆ ಪ್ರಕರಣ ದಾಖಲಿಸಲು ಸಾಧ್ಯವೇ ಎಂಬುದರ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಆರೋಪ ಹೊತ್ತ 61 ವರ್ಷದ ಮಹಿಳೆಗೆ ಬಂಧನದಿಂದ ರಕ್ಷಣೆ ನೀಡಿದೆ. ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.
ಏನಿದು ಪ್ರಕರಣ: ವೃದ್ಧೆಯ ಹಿರಿಯ ಮಗ ಅಮೆರಿಕಾದಲ್ಲಿ ವಾಸಿಸುತ್ತಿದ್ದಾನೆ. ಈ ನಡುವೆ ಅಮೆರಿಕಾದಲ್ಲಿರುವ (America) ವೃದ್ಧೆಯ ಪುತ್ರನನ್ನು ಎಂದಿಗೂ ಭೇಟಿ ಮಾಡದ ಮಹಿಳೆಯೊಬ್ಬರು ವರ್ಚುವಲ್ ಆಗಿಯೇ(ಆನ್‌ಲೈನ್ ಮೂಲಕ ಆತನನ್ನು ವಿವಾಹವಾಗಿದ್ದಳು ಬಳಿಕ ತನ್ನ ವರ್ಚುವಲ್ ಗಂಡನ ತಾಯಿಯ (ಈಗ ಕೋರ್ಟ್ ಮೆಟ್ಟಿಲೇರಿರುವ 61ರ ವೃದ್ಧೆ) ಜೊತೆಯೇ ವಾಸ ಮಾಡಲು ಶುರು ಮಾಡಿದ್ದಳು.
ಪುತ್ತೂರು ಬಸ್ ನಿಲ್ದಾಣದಲ್ಲಿ ಹಾಸನದ ಮಹಿಳೆ ಮೇಲೆ ಅತ್ಯಾಚಾರ: ನೀರಿನ ಬಾಟಲಿಗೆ ಮದ್ಯ ಮಿಶ್ರಣ ಮಾಡಿ ಕುಡಿಸಿ ಕೃತ್ಯ
ಈ ವೃದ್ಧೆಗೆ ಇನ್ನೋರ್ವ ಮಗನಿದ್ದು, ಆತ ಪೋರ್ಚುಗಲ್‌ನಲ್ಲಿ (Portugal) ವಾಸ ಮಾಡುತ್ತಿದ್ದ. ಇತ್ತೀಚೆಗೆ ಆತ ತಾಯಿಯನ್ನು ನೋಡಲು ಪೋರ್ಚುಗಲ್‌ನಿಂದ ಬಂದಿದ್ದು, ಈ ವೇಳೆ ಯುವತಿಯ ಮನೆಯವರು ಇದ್ದಕ್ಕಿದ್ದಂತೆ ವೃದ್ಧೆಯೊಂದಿಗೆ ಜಗಳ ಮಾಡಿ ಹಿರಿಯ ಪುತ್ರನ ಜೊತೆ ಮದುವೆ ಮುರಿಯುವಂತೆ ಜಗಳ ಮಾಡಿದ್ದರು. ಜೊತೆಗೆ ಯುವತಿಯೂ ತಾನು ಕಿರಿಯ ಪುತ್ರನೊಂದಿಗೆ ಪೋರ್ಚುಗಲ್‌ಗೆ ಹೋಗುವೆ ಎಂದು ರಚ್ಚೆ ಹಿಡಿದಿದ್ದಳು. ಆದರೆ ಇದನ್ನು ಒಪ್ಪದ ಕಿರಿಯ ಪುತ್ರ ಆಕೆಯನ್ನು ಭಾರತದಲ್ಲೇ ಬಿಟ್ಟು ಪೋರ್ಚುಗಲ್‌ಗೆ ತೆರಳಿದ್ದ.
ಇದಾದ ಬಳಿಕ ಯುವತಿ (ಹಿರಿಯ ಮಗನೊಂದಿಗೆ ವರ್ಚುವಲ್ ಆಗಿ ಮದುವೆಯಾದ ಯುವತಿ) ಹಾಗೂ ವೃದ್ಧೆಯ ನಡುವಿನ ಜಗಳ ಮುಂದುವರೆದಿತ್ತು. ಹೀಗಾಗಿ ಹಿರಿಯ ಮಗನ ಜೊತೆಗಿನ ಮದುವೆ ಮುರಿದುಕೊಳ್ಳಲು ಯುವತಿಗೆ ಹೇಳಿದ ವೃದ್ಧೆ, ಇದಕ್ಕೆ ಪರಿಹಾರವಾಗಿ ಯುವತಿಗೆ 11 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಳು. ಆದರೆ ಇದರಿಂದ ತೃಪ್ತಳಾಗದ ಯುವತಿ ನಂತರ ಪಂಜಾಬ್ ಪೊಲೀಸರಿಗೆ ದೂರು ನೀಡಿ ವೃದ್ಧೆ ಹಾಗೂ ಆಕೆಯ ಕಿರಿಯ ಮಗನ ಮೇಲೆ ಅತ್ಯಾಚಾರ (Rape case) ಆರೋಪ ಹೊರಿಸಿದ್ದಳು. ಇದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದ್ದು, ಇದನ್ನು ಈಗ ವೃದ್ಧೆ ಪ್ರಶ್ನಿಸಿದ್ದಾಳೆ.
ನಕಲಿ ಅತ್ಯಾಚಾರ ಕೇಸ್ ದಾಖಲಿಸಲು ಸುಂದರ ಯುವತಿಯರಿಗೆ ಹಣ: ಅಂತಾರಾಜ್ಯ ದಂಧೆ ಬಯಲು ಮಾಡಿದ ಪೊಲೀಸ್
ಈ ವೇಳೆ ವಾದ ಮಂಡಿಸಿದ ವೃದ್ಧೆಯ ಪರ ವಕೀಲರು ಈ ಪ್ರಕರಣದಲ್ಲಿ ವೃದ್ಧೆಯ ಮೇಲೆ 376(2) (ಎನ್)(ಐಪಿಸಿ) (ಫುನರಾವರ್ತಿತ ಅತ್ಯಾಚಾರ ಅಡಿಯಲ್ಲಿ ಆರೋಪವನ್ನು ಹೊರಿಸಲಾಗಿದೆ. ಆದರೆ ಮಹಿಳೆ ಮೇಲೆ ಅತ್ಯಾಚಾರ ಕೇಸು ದಾಖಲಿಸಲು ಹಿಂದಿನ ಕೋರ್ಟ್ ತೀರ್ಪಿನಂತೆ ಅವಕಾಶವಿಲ್ಲ ಎಂದು ವಾದಿಸಿದರು.