International Yoga Day 2022 LIVE Updates: 45 ನಿಮಿಷಗಳಲ್ಲಿ 19 ಆಸನ ಮಾಡಿದ ಮೋದಿ

ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮೈದಾನ ಮುಂಭಾಗದಲ್ಲಿ ನಡೆದ 8ನೇ ವಿಶ್ವ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಜನರಿಗೆ ಯೋಗ ದಿನದ ಶುಭಾಷಯ ಕೋರಿದರು. ರಾಜಮಾತೆ ಪ್ರಮೋದಾ ದೇವಿ., ರಾಜವಂಶಸ್ಥ ಯದುವೀರ್ ಒಡೆಯರ್, ಸಂಸದ ಪ್ರತಾಪ್ ಸಿಂಹ, ಸಿಎಂ ಬೊಮ್ಮಾಯಿ, ರಾಜ್ಯಪಾಲ ಗೆಹ್ಲೋಟ್‌ ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೋದಿ ನೇತೃತ್ವದಲ್ಲಿ 15000 ಮಂದಿ ಏಕಕಾಲದಲ್ಲಿ ಐತಿಹಾಸಿಕ ಮೈಸೂರು ಅರಮನೆ ಎದುರು ಯೋಗಾಭ್ಯಾಸ ನಡೆಸಿದರು. ಸುಮಾರು 45 ನಿಮಿಷಗಳ ಕಾಲ ಯೋಗ ಪ್ರದರ್ಶಿಸಿದ ಗಣ್ಯರು, ಧ್ಯಾನ, ಪ್ರಾಣಾಯಾಮ ಸೇರಿ 19 ಆಸನಗಳನ್ನು ಮಾಡಿದ್ದಾರೆ. ಯೋಗಾಭ್ಯಾಸದ ಬಳಿಕ ಅರಮನೆಯಲ್ಲೇ ಉಪಾಹಾರ ಸೇವಿಸುವ ಮೋದಿ ನಂತರ ದೊಡ್ಡಕೆರೆ ಮೈದಾನದಲ್ಲಿ ನಡೆಯುವ ಯೋಗ ವಸ್ತು ಪ್ರದರ್ಶನಕ್ಕೂ ಭೇಟಿ ನೀಡಲಿದ್ದಾರೆ.

2:14 PM

ಕಪಲ್ಸ್ ಯೋಗದಿಂದ ವೃದ್ಧಿಯಾಗುತ್ತೆ ಸಂಬಂಧ

ಯೋಗದಿಂದ ಮನಸ್ಸು, ಆರೋಗ್ಯ ವೃದ್ಧಿಯಾಗೋದು ಗ್ಯಾರಂಟಿ. ಅಷ್ಟೇ ಅಲ್ಲ ದಂಪತಿ ಜೊತೆಯಾಗಿಯೇ ವಿವಿಧ ಆಸನಗಳನ್ನು ಮಾಡುವುದರಿಂದ ಸಂಬಂಧವೂ ವೃದ್ಧಿಯಾಗುತ್ತೆ. ಅಷ್ಟಕ್ಕೂ ಯಾವ ಯಾವ ಯೋಗಗಳನ್ನು ದಾಂಪತ್ಯ ಸಾಮರಸ್ಯವನ್ನು ಹೆಚ್ಚಿಸಬಲ್ಲದು? 

ಸಂಬಂಧ ವೃದ್ಧಿಗೆ ಕಪಲ್ಸ್ ಯೋಗ

9:52 AM

ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದ್ದು ಹೇಗೆ?

ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ‘ಯೋಗ’ಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಭಾರತದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿರುವ ಯೋಗವನ್ನು ಜಗತ್ತು ಅಳವಡಿಸಿಕೊಳ್ಳಬೇಕಾಗಿರುವ ಮಹತ್ವದ ಕುರಿತು ವಿಷದವಾಗಿ ಎಲ್ಲ ದೇಶಗಳಿಗೆ ತಿಳಿಸಿಕೊಟ್ಟರು. ಬಹಳಷ್ಟು ದೇಶಗಳು ಇದಕ್ಕೆ ಬಂಬಲ ಸೂಚಿದವು. ಅದರ ಪರಿಣಾಮವಾಗಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದರ ಕುರಿತಾಗಿ ಒಂದಷ್ಟು ಮಾಹಿತಿ ಇಲ್ಲಿದೆ.

9:50 AM

ಯೋಗ ಎಂದರೇನು?

ಯೋಗ ಎನ್ನುವ ಪದ ಸಂಸ್ಕೃತದ ಧಾತುವಾದ ಯುಜ್‌ನಿಂದ ರೂಪುಗೊಂಡಿದೆ. ಯುಜ್‌ ಎಂದರೆ ಕೂಡಿಸು ಅಥವಾ ಕೇಂದ್ರೀಕರಿಸು ಎಂದರ್ಥ. ಹಾಗಾಗಿ ಯೋಗ ಎನ್ನುವುದು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಕ್ರಿಯೆಯಾಗಿದೆ. ಇಂತಹ ಅಮೂಲ್ಯವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ. ಯೋಗಾಭ್ಯಾಸವು ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ದೈಹಿಕವಾಗಿ ನಮ್ಮನ್ನು ಸಕ್ರಿಯವಾಗಿರಿಸುವುದರ ಜೊತೆಗೆ ಮಾನಸಿಕ ಸಮಸ್ಯೆಯಾದ ಖಿನ್ನತೆಗೂ ಪರಿಹಾರ ಒದಗಿಸುತ್ತದೆ. ಹೀಗಾಗಿ ಯೋಗವನ್ನು ಚಿತ್ತವೃತ್ತಿ ನಿರೋಧಃ ಎಂದು ಕರೆಯುತ್ತಾರೆ. ಅಂದರೆ ಮನಸ್ಸನ್ನು ನಿಯಂತ್ರಿಸುವ ಕಲೆ ಇದು.

9:49 AM

ಅಷ್ಟಕ್ಕ ನಾವೇಕೆ ಯೋಗ ಮಾಡಬೇಕು?

ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗ ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಒಂದು ಪ್ರಕ್ರಿಯೆಯಾಗಿದೆ. ಇದು ಮಾನವನ ದೇಹದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಪುನರ್‌ ಯೌವನ ನೀಡುತ್ತದೆ. ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳುವುದರಿಂದ ಸಾಕಷ್ಟುಲಾಭ ಪಡೆದುಕೊಳ್ಳಬಹುದಾಗಿದೆ.

ಯೋಗ ಮಾಡುವುದರಿಂದೇನು ಪ್ರಯೋಜನ?

9:48 AM

ಯೋಗ ದಿನಾಚರಣೆಯಲ್ಲಿ ಯೋಧರ ಯೋಗಾಯೋಗ

ಇಂದು ಅಂತಾರಾಷ್ಟ್ರೀಯ ಯೋಗ ದಿನ (international yoga day) ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗ ಸಮಾವೇಶಗಳು ನಡೆಯುತ್ತಿದ್ದು, ವಿಶ್ವದ ಹಲವು ದೇಶಗಳಲ್ಲೂ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಜನ ಆಚರಣೆ ಮಾಡುತ್ತಿದ್ದಾರೆ.

ಯೋಧರ ಯೋಗದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

9:47 AM

ಪಟ್ಟದಕಲ್ಲು: ಯೋಗಾಭ್ಯಾಸ ಮಾಡಿದ ಕೇಂದ್ರ ಸಚಿವ ಆರ್ಸಿ

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳ ಪಟ್ಟದ ಕಲ್ಲಿನಲ್ಲಿ ಕೇಂದ್ರ ಸರ್ಕಾರದ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಯೋಗ ದಿನಾಚರಣೆ ಗೆ ಚಾಲನೆ ನೀಡಿ ಮಾತಬಾಡಿದರು. ಆರ್ಸಿ ಜೊತೆ ಹಲವರು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಿದರು. 

9:14 AM

ಪ್ರಾಣಾಯಾಮ, ಧ್ಯಾನ ಸೇರಿ 19 ಆಸನಗಳನ್ನು ಮಾಡಿದ ಮೋದಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಮೈಸೂರಿನಲ್ಲಿ ಕರ್ನಾಟಕ ಸಿಎಂ ಬೊಮ್ಮಾಯಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ಸೇರಿ ರಾಜ್ಯದ ಹಲವು ಗಣ್ಯರ ಜೊತೆ ಸುಮಾರು 45 ನಿಮಿಷಗಳ ಯೋಗಾಭ್ಯಾಸ ಮಾಡಿದರು. ಅರಮನೆ ಮುಂದೆ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 1500 ಮಂದಿ ಭಾಗಿಯಾಗಿದ್ದು, ವಿವಿಧ ಆಸನಗಳನ್ನು ಮಾಡಿದ್ದು ಎಲ್ಲರ ಗಮನ ಸೆಳೆಯಿತು. 

ಮೋದಿ ಮೈಸೂರಿನಲ್ಲಿ ಮಾಡಿದ ಆಸನಗಳು ಯಾವುವು?

"

8:54 AM

ರಾಷ್ಟ್ರಪತಿ ಕೋವಿಂದ್‌ ಅವರಿಂದ ಯೋಗ

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯೋಗ ಪ್ರದರ್ಶನ ಮಾಡಿದರು. ಯೋಗವು ಪ್ರಾಚೀನ ಭಾರತೀಯ ಪರಂಪರೆಯ ಭಾಗವಾಗಿದೆ ಎಂದು ಹೇಳಿದರು. ಇದು ಮಾನವೀಯತೆಗೆ ಭಾರತದ ಕೊಡುಗೆಯಾಗಿದೆ, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರ ವಿಧಾನವಾಗಿದೆ. ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುತ್ತದೆ.

8:52 AM

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಜೈಶಂಕರ್

ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು. ಯೋಗ ಮಾಡುವವರ ಮನಸ್ಸಿನಲ್ಲಿ ಶಾಂತಿಯ ಭಾವ ಇರುತ್ತದೆ. ರಾಜತಾಂತ್ರಿಕತೆಗೆ ಸಂಬಂಧಿಸಿದ ಜನರು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಯೋಗ ಮಾಡಲು ಇಲ್ಲಿಗೆ ಬಂದಿದ್ದಾರೆ. ಇದು ಅತ್ಯಂತ ಸಂತಸದ ವಿಚಾರ. ಇದು ಶಾಂತಿಯ ಪರವಾದ ಭಾವನೆಯಾಗಿದ್ದು, ಅದನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ.