ಗತಿ ಶಕ್ತಿ ಯೋಜನೆ.. 2022ಕ್ಕೆ ದೇಶದ ಎಲ್ಲ ಹಳ್ಳಿ 4G!

By Suvarna News  |  First Published Oct 14, 2021, 12:55 AM IST

* ಬಹು ನಿರೀಕ್ಷಿತ ಗತಿ ಶಕ್ತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
* ಎಲ್ಲ ಹಳ್ಳಿಗಳಿಗೆ 4 ಜಿ ಸಂಪರ್ಕ ಸೇವೆ
* ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಆದ್ಯತೆ
*ಹೊಸದಾಗಿ  ರಾಷ್ಟ್ರೀಯ ಹೆದ್ದಾರಿ ಎರಡು ಲಕ್ಷ ಕಿಮೀ ನಿರ್ಮಾಣ
* 220 ವಿಮಾನ ನಿಲ್ದಾಣ ನಿರ್ಮಾಣ, ಹೆಲಿಪೋರ್ಟ್  ನಿರ್ಮಾಣ


ನವದೆಹಲಿ(ಅ.13): ಕಳೆದ ಸ್ವಾತಂತ್ರ್ಯ ದಿನಾಚರಣೆ(Independence Day) ಭಾಷಣದ ವೇಳೆ ಪ್ರಸ್ತಾಪಿಸಿದ್ದ ಗತಿ ಶಕ್ತಿ ಯೋಜನೆಗೆ(Gati Shakti Yojna) ಪ್ರಧಾನಿ ನರೇಂದ್ರ ಮೋದಿ(Narendra Modi)  ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ 16 ಸಚಿವಾಲಯವನ್ನು ಒಂದೇ ವೇದಿಕೆಯ ವ್ಯಾಪ್ತಿಗೆ ತಂದಿರುವ ಮತ್ತು ಎಲ್ಲಾ ರಾಜ್ಯ ಸರ್ಕಾರಗಳನ್ನೂ ಸೇರ್ಪಡೆ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆ ದೇಶದ ಮೂಲಸೌಕರ್ಯ ವಲಯದಲ್ಲಿ ಪರಿವರ್ತನೆಯ ಹೊಸ ಶಕೆಗೆ ಕಾರಣವಾಗಲಿದೆ.

ಡಿಜಿಟಲ್ ಭಾರತ(Digital India) 2022 ವೇಳೆಗೆ ತನ್ನ ಎಲ್ಲ ಹಳ್ಳಿಗಳಿಗೂ 4G  ಸಂಪರ್ಕ ಪಡೆದುಕೊಳ್ಳಲಿದೆ ಎಂದು ಕೇಂದ್ರ ಕೌಶಲ್ಯಾವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ( Minister of State for Skill Development and Entrepreneurship and Electronics and Information Technology) ರಾಜೀವ್ ಚಂದ್ರಶೇಖರ್ (Rajeev Chandrasekhar) ತಿಳಿಸಿದ್ದಾರೆ.

Tap to resize

Latest Videos

undefined

e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!

ಗತಿ ಶಕ್ತಿಯ ವೇದಿಕೆಯು (Gati Shakti Yojna), ಇಡೀ ದೇಶದ ಭೂಭಾಗವನ್ನು 3ಡಿ ಮ್ಯಾಪಿಂಗ್‌ಗೆ ಒಳಪಡಿಸಿದ ಭೌಗೋಳಿಕ ಮಾಹಿತಿಯ ಟೂಲ್‌ ಒಳಗೊಂಡಿದೆ. ಜೊತೆಗೆ ಕೇಂದ್ರ ಸರ್ಕಾರದ 16 ಸಚಿವಾಲಯಗಳು ಇದುವರೆಗೆ ಕೈಗೊಂಡ ಎಲ್ಲಾ ಯೋಜನೆಗಳ ಮಾಹಿತಿ ಮತ್ತು 2025ರವರೆಗೂ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಯ ಮಾಹಿತಿಯನ್ನೂ ಹೊಂದಿದೆ. ಸದ್ಯ ಈ ಯೋಜನೆಯಡಿ ರೈಲ್ವೆ, ಹೆದ್ದಾರಿ, ಟೆಲಿಕಾಂ, ಹಡಗು, ಇಂಧನ, ಪೆಟ್ರೋಲಿಯಂ, ವಿಮಾನಯಾನ ಮೊದಲಾದ ಸಚಿವಾಲಯಗಳು ಸೇರ್ಪಡೆಯಾಗಿವೆ. 

ಏನಿದು ಯೋಜ​ನೆ?

ಕೇಂದ್ರ ಮಾಹಿತಿ ತಂತ್ರ​ಜ್ಞಾನ ಇಲಾಖೆ ಅಡಿಯ ನ್ಯಾಷ​ನಲ್‌ ಇನ್ಸ್‌​ಟಿ​ಟ್ಯೂಟ್‌ ಆಫ್‌ ಸ್ಪೇಸ್‌ ಅಪ್ಲಿ​ಕೇ​ಷ​ನ್ಸ್‌ , ಒಂದು ಭೌಗೋ​ಳಿಕ ಮಾಹಿ​ತಿಯ ವೆಬ್‌​ಸೈಟ್‌ ಆರಂಭಿ​ಸ​ಲಿದೆ. ಇದ​ರಲ್ಲಿ, ಪ್ರಗ​ತಿ​ಯ​ಲ್ಲಿ​ರು​ವ ದೇಶದ ಎಲ್ಲ ಮೂಲ​ಸೌ​ಕರ‍್ಯ ಯೋಜ​ನೆ​ಗಳ ಮಾಹಿತಿ ಇರು​ತ್ತ​ದೆ. ಎಲ್ಲ ರಾಜ್ಯ​ಗಳು ಹಾಗೂ ಕೇಂದ್ರದ ವಿವಿಧ ಇಲಾ​ಖೆ​ಗ​ಳಿಗೆ ಆ ಕ್ಷಣದ ಯೋಜ​ನೆಯ ಮಾಹಿತಿ ಇದ​ರಲ್ಲಿ ಲಭಿ​ಸು​ತ್ತದೆ. ಇದ​ರಿಂದ ರಾಜ್ಯ-ಕೇಂದ್ರದ ನಡುವೆ ಸಮ​ನ್ವ​ಯತೆ ಉತ್ತ​ಮ​ಗೊ​ಳ್ಳು​ತ್ತದೆ ಹಾಗೂ ಯೋಜ​ನೆ​ಗಳು ಬೇಗ ಮುಗಿ​ಯಲು ಸಹ​ಕಾ​ರಿ​ಯಾ​ಗು​ತ್ತ​ದೆ.
ಗತಿ ಶಕ್ತಿ ಯೋಜನೆಗೆ  100 ಲಕ್ಷ ಕೋಟಿ ರು.  ಇರಿಸಲಾಗಿದೆ.  ಆಧುನಿಕ ಕೈಗಾರಿಕ ವಲಯ ನಿರ್ಮಾಣಕ್ಕೂ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಯೋಜನೆಯ ಪ್ರಮುಖ ಅಂಶಗಳು: 

* ಹನ್ನೊಂದು ಕೈಗಾರಿಕಾ ಕಾರಿಡಾರ್ ನಿರ್ಮಾಣ,  ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಡಿಫೆನ್ಸ್ ಕಾರಿಡಾರ್
* ಎಲ್ಲ ಹಳ್ಳಿಗಳಿಗೆ 4 ಜಿ ಸಂಪರ್ಕ ಸೇವೆ
* ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಆದ್ಯತೆ
*ಹೊಸದಾಗಿ  ರಾಷ್ಟ್ರೀಯ ಹೆದ್ದಾರಿ ಎರಡು ಲಕ್ಷ ಕಿಮೀ ನಿರ್ಮಾಣ
* 220 ವಿಮಾನ ನಿಲ್ದಾಣ ನಿರ್ಮಾಣ, ಹೆಲಿಪೋರ್ಟ್  ನಿರ್ಮಾಣ
* ನೀರಿನ ಪೈಪ್ ಲೈನ್ 17,000 ಕಿಮೀ ಹೆಚ್ಚುವರಿ ನಿರ್ಮಾಣ

click me!