ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿಗಳು ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?

By Ravi Janekal  |  First Published Dec 11, 2024, 10:18 AM IST

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಹತ್ಯೆ ಬೆದರಿಕೆ ಕರೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎನ್‌ಟಿಆರ್ ಜಿಲ್ಲೆಯ ತಿರುವೂರು ಮೂಲದ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪವನ್ ಕಲ್ಯಾಣ್ ಸಾರ್ವಜನಿಕವಾಗಿ ಓಡಾಡುವುದನ್ನು ತಡೆಯಲು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.


ಅಮರಾವತಿ (ಡಿ.11): ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ನಾಯಕ ಪವನ್‌ ಕಲ್ಯಾಣ್‌ ಅವರನ್ನು ಹತ್ಯೆ ಮಾಡುವುದಾಗಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಡಿಸಿಎಂ ಕಚೇರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಪವನ್ ಕಲ್ಯಾಣ್‌ ಅವರನ್ನು ಗುರಿಯಾಗಿಸಿ ಅವಹೇಳನಕಾರಿ ಸಂದೇಶಗಳನ್ನು ಕಳಿಸಿದ್ದರು. ಅಲ್ಲದೆ ಜೀವ ಬೆದರಿಕೆಯೊಡ್ಡಿರುವುದು ಪೊಲೀಸರಿಗೆ ನಿದ್ದೆಗೆಡಿಸಿತ್ತು.

ಸದ್ಯ ಪವನ್ ಕಲ್ಯಾಣ್‌ಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿರುವುದು ಜನಸೈನಿಕರು ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪವನ್ ಕಲ್ಯಾಣ್ ಅವರ ಕಚೇರಿಗೆ ಬೆದರಿಕೆ ಹಾಕಿರುವ ಫೋನ್ ನಂಬರ್ ಎನ್ ಟಿಆರ್ ಜಿಲ್ಲೆಯ ತಿರುವೂರು ಮೂಲದ ನೂಕಾ ಮಲ್ಲಿಕಾರ್ಜುನರಾವ್ ಎಂಬುವವರ ಹೆಸರಿನಲ್ಲಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. 95055 05556 ಸಂಖ್ಯೆಯಿಂದ ಫೋನ್ ಕರೆ ಮತ್ತು ಸಂದೇಶಗಳನ್ನು ಕಳುಹಿಸಿದ್ದರು. ಆರೋಪಿಗಳು ಮದ್ಯದ ಅಮಲಿನಲ್ಲಿ ಬೆದರಿಕೆ ಕರೆ ಮಾಡಿದ್ದನ್ನು ಪೊಲೀಸರು ಆರಂಭದಲ್ಲಿ ಪತ್ತೆ ಹಚ್ಚಿದ್ದರು. ಬೆದರಿಕೆ ಕರೆ ಮಾಡಿದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಆರೋಪಿಗಳು ಇದರಿಂದ ಪತ್ತೆಹಚ್ಚುವುದು ಕಷ್ಟವಾಗಿತ್ತು. ಕೊನೆಗೆ ಆರೋಪಿಗಳು ಫೋನ್ ಆನ್ ಮಾಡಿದ ಬಳಿಕ ಲೋಕೇಷನ್ ಪತ್ತೆ ಹಚ್ಚಿ ಬಂಧಿಸಲಾಗಿದೆ. ಸದ್ಯ ಪೊಲೀಸರು ಮಲ್ಲಿಕಾರ್ಜುನ ರಾವ್ ಅವರನ್ನು ರಹಸ್ಯ ಪ್ರದೇಶಕ್ಕೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ.

Tap to resize

Latest Videos

 ಮೊದಮೊದಲು ಇದು ಗೂಂಡಾಗಿರಿಯ ಕೆಲಸ ಎಂದು ಪೊಲೀಸರು ಭಾವಿಸಿರಲಿಲ್ಲ. ಸಾರ್ವಜನಿಕವಾಗಿ ಹೋಗಲು ಬಯಸುವ ಪವನ್ ಕಲ್ಯಾಣ್ ಅವರಿಗೆ ಫೋನ್‌ನಲ್ಲಿ ಉದ್ದೇಶಪೂರ್ವಕವಾಗಿ ಬೆದರಿಕೆ ಹಾಕಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಾರ್ವಜನಿಕವಾಗಿ ಓಡಾಡಲು ಮುಂದಾಗಿರುವ ಪವನ್ ಕಲ್ಯಾಣ್ ಅವರನ್ನು ತಡೆಯಲು ಇಂತಹ ಬೆದರಿಕೆ ಕರೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.

ಬಸ್ ದುರಂತ: ಅಪಘಾತದ ಕಾರಣ ಕೇಳಿ ಮುಂಬೈ ಪೊಲೀಸರೇ ಶಾಕ್!

undefined

ವಿಶೇಷ ತಂಡಗಳಿಂದ ತನಿಖೆ:

ಎನ್‌ಟಿಆರ್‌ ಜಿಲ್ಲೆಯ ತಿರುವೂರು ಮೂಲದ ಮಲ್ಲಿಕಾರ್ಜುನ ರಾವ್‌ ಎಂಬುವವರ ಹೆಸರಿನಲ್ಲಿ ಸೆಲ್‌ಫೋನ್‌ ಸಂಖ್ಯೆ ಇದ್ದು, ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್‌ ಸ್ಟೇಡಿಯಂನಲ್ಲಿರುವ ಸೆಲ್‌ ಟವರ್‌ನಿಂದ ಕರೆಗಳು ಬಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.. ಎಪಿ ಗೃಹ ಸಚಿವೆ ಅನಿತಾ ಅವರು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಬೆದರಿಕೆ ಕರೆಗಳು ಬಂದ ವಿಚಾರ ತಿಳಿದ ನಂತರ ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ, ವಿಜಯವಾಡ ನಗರ ಆಯುಕ್ತ ರಾಜಶೇಖರ್ ಬಾಬು ಅವರು ವಿಶೇಷ ಶಾಖೆ, ಕಾನೂನು ಮತ್ತು ಸುವ್ಯವಸ್ಥೆ, ಕಾರ್ಯಪಡೆ ಮತ್ತು ಇಲಾಖೆಗಳ ಪೊಲೀಸರೊಂದಿಗೆ ಕೆಲವು ತಂಡಗಳನ್ನು ರಚಿಸಿದ್ದಾರೆ.

click me!