ಮಹತ್ವದ ಆದೇಶ; ಮಹಿಳಾ ಸಲಿಂಗಿಗಳಿಗೆ ಲಿವ್ ಇನ್‌ನಲ್ಲಿರಲು ಯಾವ ಅಡ್ಡಿ ಇಲ್ಲ

By Suvarna News  |  First Published Aug 27, 2020, 9:04 PM IST

ಒರಿಸ್ಸಾ ಹೈ ಕೋರ್ಟ್ ಮಹತ್ವದ ಆದೇಶ/ ಸಲಿಂಗಿಗಳು ಒಟ್ಟಾಗಿ ಬದುಕಬಹುದು/ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯ/ಯುವತಿಯನ್ನು ಪುರುಷನನ್ನಾಗಿ ಸಂಭೋಧಿಸಿದ ನ್ಯಾಯಾಲಯ


ಗುಹವಾಟಿ(ಆ. 27)  ಯಾವುದೇ ಜೋಡಿ ಧೀರ್ಘಕಾಲ ಒಟ್ಟಾಗಿದ್ದರೆ ಅದನ್ನು ಕಾನೂನೂಬದ್ಧ ವಿವಾಹವೆಂದೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಬಿಟ್ಟರೆ ಭಾರತದಲ್ಲಿ ಲಿವ್ ಇನ್ ಸಂಬಂಧದ ಕಾನೂನು ಸ್ಟೇಟಸ್ ಇನ್ನೂ ಸ್ಪಷ್ಟವಿಲ್ಲ. ಇನ್ನು ಸಲಿಂಗಕಾಮ ತಪ್ಪಲ್ಲವೆಂದು ಕೋರ್ಟ್ ಹೇಳಿದ್ದರೂ ಸಲಿಂಗಿಗಳ ವಿವಾಹವಂತೂ ಕಾನೂನುಬದ್ಧವಾಗಬೇಕಿದೆ. ಇತ್ತೀಚೆಗಷ್ಟೇ ಸೆಕ್ಷನ್ 377 ವಿರುದ್ಧ ಕೋರ್ಟ್‌ನಲ್ಲಿ ವಾದಿಸಿ ಗೆದ್ದಿದ್ದ ಸಲಿಂಗಿ ವಕೀಲರ ಜೋಡಿ ಅರುಂಧತಿ ಕಾಟ್ಜು ಹಾಗೂ ಮೇನಕಾ ಗುರುಸ್ವಾಮಿ ಸಲಿಂಗಿ ವಿವಾಹವನ್ನು ಕಾನೂನನುಬದ್ಧಗೊಳಿಸಲು ಮುಂದಿನ ಹೋರಾಟ ರೂಪಿಸುತ್ತಿದ್ದಾರೆ. ಅಂದ ಹಾಗೆ, ಜಗತ್ತಿನ 29 ದೇಶಗಳಲ್ಲಿ ಸಲಿಂಗಿ ವಿವಾಹ ಲೀಗಲ್ ಆಗಿದೆ. 

ವಿಷಯ ಏನಂದ್ರೆ ಅಪರೂಪದ ಪ್ರಕರಣವೊಂದರಲ್ಲಿ ಒರಿಸ್ಸಾ ಹೈ ಕೋರ್ಟ್  ಸಲಿಂಗಿ ಜೋಡಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲು ಅನುಮತಿ ನೀಡಿದೆ. ಅಷ್ಟೇ ಅಲ್ಲ, ಒಂದು ವೇಳೆ ಜೋಡಿ ಬೇರಾದರೆ, ಸಂಗಾತಿಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಳಕೆ ಅವಕಾಶ ನೀಡಿ ರಕ್ಷಣೆಯನ್ನೂ ಒದಗಿಸಿದೆ. ನ್ಯಾಯಮೂರ್ತಿ ಎಸ್.ಕೆ.ಮಿಶ್ರಾ ಹಾಗೂ ಸಾವಿತ್ರಿ ರಾಥೋ ಅವರನ್ನೊಳಗೊಂಡಿದ್ದ ನ್ಯಾಯಪೀಠದ ಈ ತೀರ್ಪು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 

ಮದುವೆಯಾದ ಹೆಣ್ಣಿನ ಮೇಲೆ ಲವ್ವಾಗೋಯ್ತು! ಮುಂದೇನು?

Tap to resize

Latest Videos

ಪುರುಷನಾಗಿ ಗುರುತಿಸಲು ಮನವಿ!
24 ವರ್ಷದ ಯುವತಿಯೊಬ್ಬಳು ತನ್ನ ಗೆಳತಿಯನ್ನು ಆಕೆಯ ತಾಯಿ ಹಾಗೂ ಮಾವ ಸೇರಿ ಒತ್ತಾಯಪೂರ್ವಕವಾಗಿ ನನ್ನಿಂದ ಕಳೆದ ಏಪ್ರಿಲ್‌ನಲ್ಲಿ ದೂರಾಗಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. 2014ರ ನಾಲ್ಸಾ ಕೇಸ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಅರ್ಜಿದಾರರು ತಮ್ಮನ್ನು ಯಾವ ಜೆಂಡರ್‌ನಲ್ಲಿ ಗುರುತಿಸಬೇಕೆಂದು ಬಯಸುತ್ತಾರೋ ಹಾಗೆಯೇ ಗುರುತಿಸಬೇಕೆಂದು ಹೇಳಿತ್ತು. ಈ ತೀರ್ಪನ್ನು ಬಳಸಿಕೊಂಡ ರಶ್ಮಿ ತನ್ನನ್ನು ಪುರುಷನಾಗಿ ಗುರುತಿಸಲು ಕೋರ್ಟ್ನಲ್ಲಿ ಕೇಳಿಕೊಂಡಿದ್ದರು. ತನ್ನ ಬಗ್ಗೆ ಉಲ್ಲೇಖಿಸುವಾಗ 'ಅವನು' ಎಂದು ಬಳಸಲು ಕೋರಿದ್ದರು. ಅದನ್ನು ಕೋರ್ಟ್ ಗೌರವಿಸಿ, ವಿಚಾರಣೆಯುದ್ದಕ್ಕೂ ಆಕೆಯನ್ನು ಪುರುಷನಂತೆಯೇ ನಡೆಸಿಕೊಂಡಿತು.  

ಕೇಸ್ ಏನು?
ಈತನು ತಾವಿಬ್ಬರೂ ಪ್ರಬುದ್ಧ ವಯಸ್ಸಿನವರಾಗಿದ್ದು, ಪ್ರೀತಿಸುತ್ತಿದ್ದೇವೆ. ಒಂದೇ ಲಿಂಗದವರಾದ್ದರಿಂದ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಲಿವ್ ಇನ್ ಸಂಬಂಧದಲ್ಲಿರಲು ತಮಗೆ ಹಕ್ಕಿದೆ. ಅದನ್ನು ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಅಲ್ಲದೆ, 2005ರ ಗೃಹದೌರ್ಜನ್ಯ ಕಾಯ್ದೆಯಲ್ಲಿ ಸಲಿಂಗಿಗಳಿಗೂ ಲಿವ್ ಇನ್ ಅವಕಾಶ ನೀಡಲಾಗಿದ್ದು, 'ಮಹಿಳಾ ಸಂಗಾತಿ'ಗೆ ಹಕ್ಕು ಜೊತೆಗೆೊಂದಿಷ್ಟು ಸವಲತ್ತುಗಳನ್ನು ಒದಗಿಸಿದೆ ಎಂಬುದನ್ನು ಒತ್ತಿ ಹೇಳಿದ್ದರು. ಈ ಕೇಸ್‌ನಲ್ಲಿ ಕೋರ್ಟ್ ಏನನ್ನುತ್ತೆಯೋ ಹಾಗೆ ನಡೆದುಕೊಳ್ಳುವುದಾಗಿ ಒರಿಸ್ಸಾ ಸರ್ಕಾರ ಹೇಳಿತ್ತು.ಮಅರ್ಜಿದಾರ ಹಾಗೂ ಸಂಗಾತಿಯು 2017ರಿಂದ ಲಿವ್ ಇನ್ ಸಂಬಂಧದಲ್ಲಿದ್ದರು. 

ತೀರ್ಪು
ಇಬ್ಬರೂ ನ್ಯಾಯಮೂರ್ತಿಗಳು ಅರ್ಜಿದಾರನ ಸಂಗಾತಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಈ ಬಗ್ಗೆ ಅಭಿಪ್ರಾಯ ಕೇಳಿದಾಗ ಆಕೆ ಅರ್ಜಿದಾರರ ಮನವಿಯನ್ನು ನಡೆಸಿಕೊಡುವಂತೆ ಕೋರ್ಟ್‌ನಲ್ಲಿ ಕೇಳಿದರು. ಇದೆಲ್ಲ ಆಲಿಸಿದ ಬಳಿಕ ನ್ಯಾಯಪೀಠವು, 'ಅರ್ಜಿದಾರನನ್ನು ಆತನ ಕೋರಿಕೆಯಂತೆ ಗಂಡಾಗಿ ಪರಿಗಣಿಸುವುದು ಹಾಗೂ ತನಗಿಷ್ಟ ಬಂದ ಪ್ರಬುದ್ಧ ವಯಸ್ಸಿನವರೊಡನೆ ಲಿವ್ ಇನ್ ಸಂಬಂಧದಲ್ಲಿರಲು ಅವಕಾಶ ನೀಡುವ ಹೊರತಾಗಿ ಬೇರೆ ದೃಷ್ಟಿಯಿಂದ ಈ ಕೇಸನ್ನು ನೋಡಲು ಸಾಧ್ಯವೇ ಇಲ್ಲ' ಎಂದು ಹೇಳಿತು. 

'ಸ್ತ್ರೀಯರ ವಿವಾಹ ಕನಿಷ್ಠ ವಯಸ್ಸು ಯಾವ ಕಾರಣಕ್ಕೂ ಏರಿಸಬೇಡಿ'

ಅಷ್ಟೇ ಅಲ್ಲ, ಜೋಡಿಯು ಅವರ ಕುಟುಂಬಕ್ಕೆ ಚಿಂತೆಗೆ ಎಡೆ ಮಾಡದಂತೆ ಹಾಗೂ ಸಮಾಜವು ಅವರತ್ತ ಬೆರಳು ತೋರದಂತೆ ಸಂತೋಷದಿಂದ ಬಾಳುವ ಭರವಸೆ ಇಟ್ಟಿರುವುದಾಗಿ ನ್ಯಾಯಪೀಠ ಹೇಳಿದೆ. ಮಹಿಳೆಯು ಸಂಗಾತಿಯಿಂದ ಬೇರಾಗಲು ಬಯಸಿದರೆ ಯಾವುದೇ ಸಂದರ್ಭದಲ್ಲಿ ತನ್ನ ತಾಯಿಯ ಬಳಿ ಹಿಂದಿರುಗಬಹುದು ಎಂದಿದೆ.  ಈ ಪ್ರಕರಣವು ಹಲವಾರು ಸಲಿಂಗಿಗಳಿಗೆ ಮಾರ್ಗದರ್ಶಕವಾಗಿದ್ದು, ಅವರಲ್ಲಿ ಹೊಸ ಭರವಸೆ ಹಾಗೂ ಧೈರ್ಯ ನೀಡಿದೆ. 

click me!