ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಜನರ ಬದುಕು ದುಸ್ತರವಾಗಿದೆ. ವೇತನ ಕಡಿತ, ಉದ್ಯೋಗ ಕಡಿತ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ನೌಕರರಿಗೆ ವೇತನ ನೀಡಿದ ಉದ್ಯೋಗದಾತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಜೂ.12): ಕೊರೋನಾ ವೈರಸ್ ಕಾರಣ ಕೇಂದ್ರ ಸರ್ಕಾರ ಲಾಕ್‌ಡೌನ್ ಮಾಡಿ ಸೋಂಕು ತೀವ್ರವಾಗಿ ಹರಡದಂತೆ ಕ್ರಮ ಕೈಗೊಂಡಿತು. ಲಾಕ್‌ಡೌನ್ ಘೋಷಣೆ ವೇಳೆ ಪ್ರಧಾನಿ ಮೋದಿ, ವೇತನ ಕಡಿತ ಹಾಗೂ ಉದ್ಯೋಗ ಕಡಿತ ಮಾಡದಂತೆ ಮನವಿ ಮಾಡಿದ್ದರು. ಬಳಿಕ ಕೇಂದ್ರ ಗೃಹ ಇಲಾಖೆ, ಖಾಸಗಿ ಉದ್ಯೋಗದಾತರಿಗೆ ನೌಕರರ ಸಂಪೂರ್ಣ ವೇತನ ನೀಡುವಂತೆ ಸೂಚಿಸಿತ್ತು. ಇದೀಗ ವೇತನ ನೀಡಿದ ಖಾಸಗಿ ಉದ್ಯೋಗದಾತರ ವಿರುದ್ಧ ಜುಲೈ ಅಂತ್ಯದ ವರೆಗೆ ಯಾವುದೇ ಕ್ರಮವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮೀಸಲಾತಿ’ ಮೂಲಭೂತ ಹಕ್ಕಲ್ಲ'; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ
undefined
ದೇಶದ ಸರ್ವೋಚ್ಚ ನ್ಯಾಯಾಲಯ ಉದ್ಯೋಗದಾತರಿಗೆ ಕೊಂಚ ರಿಲೀಫ್ ನೀಡಿದೆ. ನೌಕರರ ವೇತನ ಪಾವತಿ ಕುರಿತು ನೌಕರರು ಮತ್ತು ಉದ್ಯೋಗದಾತರ ನಡುವೆ ಮಾತುಕತೆ ನಡೆಸಲು ರಾಜ್ಯಗಳು ಮುಂದಾಗಬೇಕು. ಇನ್ನು ಈ ಕುರಿತ ವರದಿಗಳನ್ನು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಲಸಿಗ ಕಾರ್ಮಿಕರ ನೆರವಿಗೆ ಧಾವಿಸಲು ರಾಜ್ಯಗಳಿಗೆ ಗಡುವು!.
ಲಾಕ್ ಡೌನ್ ಸಮಯದಲ್ಲಿ ನೌಕರರಿಗೆ ಪೂರ್ಣ ವೇತನವನ್ನು ಕಡ್ಡಾಯವಾಗಿ ಪಾವತಿಸಲು ಕೇಂದ್ರ ಗೃಹ ಇಲಾಖೆ ಸೂಚಿಸಿತ್ತು. ಮಾರ್ಚ್ 29 ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ಮಾರ್ಚ್ 29 ರ ಅಧಿಸೂಚನೆಯ ಕಾನೂನುಬದ್ಧತೆಯ ಕುರಿತು 4 ವಾರಗಳಲ್ಲಿ ಕೇಂದ್ರ ಸರ್ಕಾರ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನೌಕರರು ಹಾಗೂ ಉದ್ಯೋಗಿಗಳು ಒಂದಕ್ಕೊಂದು ಹೊಂದಾಣಿಕೆಯಿಂದ ಇರಬೇಕು. ಇಲ್ಲಿ ಕಂಪನಿ ಅಥವಾ ನೌಕರರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಥವಾ ಈ ಕುರಿತು ತಕರಾರು ಉತ್ತಮವಲ್ಲ. ಹೀಗಾಗಿ 50 ದಿನಗಳ ಒಳಗೆ ವೇತನ ಕುರಿತು ತಕರಾರಿಗೆ ತಾರ್ಕಿಕ ಅಂತ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.