ಮತ್ತೆ ಕೋರ್ಟ್ ಮೊರೆ ಹೋದ ನಿರ್ಭಯಾ ಹತ್ಯಾಚಾರಿಗಳು| ಆದರೆ ಈ ಬಾರಿ ತಿಹಾರ್ ಜೈಲು ಸಿಬ್ಬಂದಿಗಳ ವಿರುದ್ಧ ಮಾಡಿದ್ರು ಕಂಪ್ಲೇಂಟ್| ಗಲ್ಲಾಗುತ್ತಾ? ಮುಂದೋಗುತ್ತಾ?
ನವದೆಹಲಿ[ಜ.24]: 2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಾದ ಪವನ್, ಅಕ್ಷಯ್ ಹಾಗೂ ವಿನಯ್ ಮತ್ತೊಂದು ಮನವಿ ಸಲ್ಲಿಸಿದ್ದಾರೆ. ಮೂವರು ಅಪರಾಧಿಗಳ ವಕೀಲ ಎ. ಪಿ. ಸಿಂಗ್ ತಿಹಾರ್ ಜೈಲು ಆಡಳಿತದ ವಿರುದ್ಧ ಆರೋಪವೆಸಗಿ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ತಿಹಾರ್ ಜೈಲು ಸಿಬ್ಬಂದಿ ಈವರೆಗೂ ಅಪರಾಧಿಗಳ ದಾಖಲೆಗಳನ್ನು ಒದಗಿಸಿಲ್ಲ, ಹೀಗಾಗಿ ಕ್ಯುರೇಟಿವ್ ಅರ್ಜಿ ಮತ್ತು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ತಡವಾಗುತ್ತಿದೆ ಎಂದು ದೋಷಿಗಳ ಪರ ವಕೀಲರ ಎ. ಪಿ. ಸಿಂಗ್ ದೂರಿದ್ದಾರೆ.
ತೋಚಿದಾಗ ಗಲ್ಲುಶಿಕ್ಷೆ ಪ್ರಶ್ನಿಸಲು ಆಗದು: ಸುಪ್ರೀಂ ಕೋರ್ಟ್!
undefined
ಅಲ್ಲದೇ 'ಬುಧವಾರ ನಾನು ನನ್ನ ಕಕ್ಷೀದಾರರನ್ನು ಭೇಟಿಯಾಗಲು ಜೈಲಿಗೆ ತೆರಳಿದ್ದೆ. ಆದರೆ ಜೈಲು ನಂಬರ್ 3ರಲ್ಲಿ ಅವರನ್ನು ಬಂಧಿಸಿಟ್ಟಿದ್ದರೂ, ಬಹಳಷ್ಟು ಪ್ರಯತ್ನ ನಡೆಸಿದ ಬಳಿಕವಷ್ಟೇ ಅವರನ್ನು ಭೇಟಿಯಾಗಲು ಸಾಧ್ಯವಾಯ್ತು' ಎಂದಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಪಟಿಯಾಲಾ ಕೋರ್ಟ್ ಶನಿವಾರದಂದು ನಡೆಸುವ ಸಾಧ್ಯತೆಗಳಿವೆ.
ಹೊಸ ಡೆತ್ ವಾರಂಟ್ ಈಗಾಗಲೇ ನಿರ್ಭಯಾಳ ನಾಲ್ವರೂ ಅತ್ಯಾಚಾರಿಗಳಿಗೆ ಹೊಸ ಡೆತ್ ವಾರಂಟ್ ಜಾರಿಗೊಳಿಸಲಾಗಿದೆ. ಇದರ ಅನ್ವಯ ಪವನ್, ಅಕ್ಷಯ್, ವಿನಯ್ ಹಾಗೂ ಮುಕೇಶ್ ಈ ನಾಲ್ವರಿಗೂ ಫೆಬ್ರವರಿ 1 ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆಯಾಗಲಿದೆ. ಇವರಲ್ಲಿ ಮುಕೇಶ್ ಸಲ್ಲಿಸಿದ್ದ ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಎರಡೂ ಈಗಾಗಲೇ ವಜಾಗೊಂಡಿವೆ. ಸದ್ಯ ಇನ್ನುಳಿದ ಮೂವರಿಗಷ್ಟೇ ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವಿದೆ.
ಮನೆಯವ್ರನ್ನ ಮೀಟ್ ಮಾಡ್ತಿರಾ, ವಿಲ್ ಬರೀತಿರಾ?: ಎಲ್ಲ ಪ್ರಶ್ನೆಗೂ ಏಕೆ ಸೈಲೆಂಟ್ ಆಗಿದ್ದೀರಾ?
ಕೊನೆಯ ಇಚ್ಛೆ ಏನೆಂದು ಈವರೆಗೂ ತಿಳಿಸಿಲ್ಲ
ನಾಲ್ವರೂ ಅತ್ಯಾಚಾರಿಗಳು ಗಲ್ಲು ಶಿಕ್ಷೆಗೆ ಓಲಪಡುವುದಕ್ಕೂ ಮೊದಲು ತಮ್ಮ ಕೊನೆಯ ಇಚ್ಛೆ ಏನೆಂಬುವುದನ್ನು ತಿಹಾರ್ ಜೈಲು ಸಿಬ್ಬಂದಿಗೆ ಈವೆಗೂ ತಿಳಿಸಿಲ್ಲ. ಗಲ್ಲಿಗೇರುವ ಮುನ್ನ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಲು ಇಚ್ಛಿಸುತ್ತಾರಾ ಎಂಬ ಕುರಿತಾಗಿಯೂ ಮೌನ ವಹಿಸಿದ್ದಾರೆ.