ನವದೆಹಲಿ: ಭಾರತದಲ್ಲಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಐದನೇ ಸುತ್ತಿನ ಪ್ರಕಾರ, 1000 ಪುರುಷರಿಗೆ ಅಂದಾಜು 1020 ಮಹಿಳೆಯರು ಇದ್ದಾರೆ. ಈ ಲಿಂಗಾನುಪಾತದ (Sex ratio) ಅಂಕಿ ಅಂಶ ನವೆಂಬರ್‌ನಲ್ಲಿ ಹೊರಬಿದ್ದಿದೆ. ಈ ಮೂಲಕ ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ಲಿಂಗಾನುಪಾತದಲ್ಲಿ ಗಣನೀಯ ಏರಿಕೆ ಕಂಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (National Family Health Survey) ಐದನೇ ಸುತ್ತಿನ ಪ್ರಕಾರ, ದೇಶದ ಜನಸಂಖ್ಯೆಯ ಲಿಂಗ ಅನುಪಾತವು (1000 ಪುರುಷರಿಗೆ ಮಹಿಳೆಯರು) 1020 ಎಂದು ಅಂದಾಜಿಸಲಾಗಿದೆ' ಎಂದು ಕೇಂದ್ರ ಆರೋಗ್ಯ ಮತ್ತು ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ (Bharati Pravin Pawar) ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ (NFHS) ಐದನೇ ಸುತ್ತಿನ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ (Central Ministry of Health)ವು ನವೆಂಬರ್ 24 ರಂದು ಬಿಡುಗಡೆ ಮಾಡಿತ್ತು ಇದರ ಪ್ರಕಾರ ಭಾರತದಲ್ಲಿ ಈಗ ಪ್ರತಿ 1000 ಪುರುಷರಿಗೆ ಸಮಾನಾಗಿ 1,020 ಮಹಿಳೆಯರಿದ್ದಾರೆ. ಅಲ್ಲದೇ ಜನಸಂಖ್ಯಾ ಸ್ಫೋಟದ ಭೀತಿ ಮುಂದೆ ಎದುರಾಗದು ಎಂದು ಈ ಸಮೀಕ್ಷೆ ಹೇಳಿತ್ತು. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯು ಒಂದು ಮಾದರಿ ಸಮೀಕ್ಷೆಯಾಗಿದೆ. ಮುಂದೆ ರಾಷ್ಟ್ರೀಯ ಜನಗಣತಿ ನಡೆಸಿದಾಗ ಮಾತ್ರ ಹೆಚ್ಚಿನ ಜನಸಂಖ್ಯೆಗೆ ಈ ಸಮೀಕ್ಷೆಯನ್ನು ಅನ್ವಯಿಸಿದಾಗ ಇದನ್ನು ಖಚಿತವಾಗಿ ಹೇಳಬಹುದಾಗಿದೆ ಎಂದಿತ್ತು.
ಬೇಟಿ ಬಚಾವೋ ಬೇಟಿ ಪಢಾವೋ (BBBP) ಯೋಜನೆಯೊಂದಿಗೆ ಮಕ್ಕಳ ಲಿಂಗ ಅನುಪಾತದ ಸುಧಾರಣೆಯ ಬಗ್ಗೆ ಸಚಿವರು, 'ಯೋಜನೆಯ ಪ್ರಮುಖ ಅಂಶಗಳಲ್ಲಿ ರಾಷ್ಟ್ರವ್ಯಾಪಿ ಮಾಧ್ಯಮ ಮತ್ತು ಪ್ರಚಾರ ಅಭಿಯಾನಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಬಹು-ವಲಯಗಳ ಮಧ್ಯಸ್ಥಿಕೆಗಳು ಕೂಡ ಇದರಲ್ಲಿ ಸೇರಿವೆ.
Blast In Karachi: ಸ್ಫೋಟಕ್ಕೆ ಬೆಚ್ಚಿ ಬಿದ್ದ ಪಾಕಿಸ್ತಾನದ ಕಬೂಲ್, ಮೃತರ ಸಂಖ್ಯೆ 12ಕ್ಕೇರಿಕೆ!
1876ರ ನಂತರ ನಡೆಸಿದ ಸಮೀಕ್ಷೆಗಳೆಲ್ಲದರ ಪೈಕಿ, ಈ ಸಮೀಕ್ಷೆ ಮೊದಲ ಬಾರಿಗೆ, ಸ್ತ್ರೀಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂದು ತೋರಿಸಿದೆ. ಅಲ್ಲದೆ, 1992ರಲ್ಲಿ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷಾ ಘಟಕ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವುದಾಗಿ ದಾಖಲಾಗಿದೆ.
NFHS-5 ಸಮೀಕ್ಷೆಯನ್ನು 2019 ಮತ್ತು 2021 ರ ನಡುವೆ ಎರಡು ಹಂತಗಳಲ್ಲಿ ನಡೆಸಲಾಗಿದೆ. ಮೊದಲನೆಯ ಹಂತದ ಸಮೀಕ್ಷೆಯನ್ನು 2019ರ ಜೂನ್ ಮತ್ತು 2020ರ ಜನವರಿ 30ರವರೆಗೆ ಮತ್ತು ಎರಡನೇ ಹಂತದ ಸಮೀಕ್ಷೆಯನ್ನು 2020ರ ಜನವರಿ 2ರಿಂದ 2021ರ ಏಪ್ರಿಲ್ 30ರವರೆಗೆ ನಡೆಸಲಾಯಿತು. ದೇಶದ 707 ಜಿಲ್ಲೆಗಳ 650,000 ಕುಟುಂಬಗಳನ್ನು ಈ ಸಮೀಕ್ಷೆ ಒಳಗೊಂಡಿದೆ. 2 ಹಂತದಲ್ಲಿ ರಾಜ್ಯಗಳಾದ ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿಯ NCT, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶ(Union Territory)ಗಳಾದ ಚಂಡೀಗಢ ಪುದುಚೇರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ.
ಭಾರತದಲ್ಲಿ ಈ ಹಿಂದೆ ಪುರುಷ ಹಾಗೂ ಮಹಿಳೆಯರ ಲಿಂಗಾನುಪಾತ ತೀವ್ರ ಏರುಪೇರಿನಲ್ಲಿತ್ತು. ಈ ವೇಳೆ ಅಂದರೆ 1990ರಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ (Amartya Sen) ಅವರು ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್‌ಗೆ ಬರೆದ ಲೇಖನದಲ್ಲಿ ಭಾರತವನ್ನು country of missing women ಎಂದು ಕರೆದಿದ್ದರು. ಅಂದರೆ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆಗ ಭಾರತದಲ್ಲಿ 1,000 ಪುರುಷರಿಗೆ 927 ಮಹಿಳೆಯರಿದ್ದರು. 2005-06 ರಲ್ಲಿ ನಡೆಸಲಾದ NFHS-3 ಸಮೀಕ್ಷೆ ಪ್ರಕಾರ, ಲಿಂಗಾನುಪಾತವು ಸಮಾನವಾಗಿತ್ತು, 1000 ಪುರುಷರಿಗೆ 1000 ಮಹಿಳೆಯರಿದ್ದರು. ಆದರೆ 2015-16 ರ NFHS-4 ಸಮೀಕ್ಷೆಯಲ್ಲಿ 1000 ಪುರುಷರಿಗೆ 991 ಮಹಿಳೆಯರಿದ್ದರು. ಆದರೆ ಇದೇ ಮೊದಲ ಬಾರಿಗೆ NFHS ಸಮೀಕ್ಷೆಯಲ್ಲಿ ಲಿಂಗ ಅನುಪಾತವು ಮಹಿಳೆಯರ ಪರವಾಗಿ ಬಂದಿದೆ.
ಪ್ರತಿ ದೇಶದಲ್ಲಿ ಯಾವಾಗಲೂ ಗಂಡು ಹೆಣ್ಣಿನ ಲಿಂಗಾನುಪಾತ (Male female sex ratio) ಸಮಾನವಾಗಿ ಇರಬೇಕು. ಇದು ಯಾವುದೇ ಕಾರಣಕ್ಕೂ ಹೆಚ್ಚು ಕಡಿಮೆ ಆಗಬಾರದು. ಆದರೆ ನಮ್ಮ ದೇಶದಲ್ಲಿ ಜನರ ಅನಕ್ಷರತೆ, ಬಡತನ ಮೂಢನಂಬಿಕೆಯಿಂದಾಗಿ ಹಾಗೂ ಗಂಡು ಮಕ್ಕಳ ಮೇಲಿನ ವ್ಯಾಮೋಹ, ವಂಶೋದ್ಧಾರಕನೇ ಬೇಕು ಎಂಬ ಕಾರಣಕ್ಕೆ ಬಹುತೇಕ ಅಕ್ರಮವಾಗಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ನಡೆಸಿದ ಪರಿಣಾಮ ಇತ್ತೀಚಿನವರೆಗೆ ಭಾರತದಲ್ಲಿ ಯಾವಾಗಲೂ ಗಂಡು ಹೆಣ್ಣಿನ ಲಿಂಗಾನುಪಾತ ಸಮತೋಲವಾಗಿ ಬಂದಿರಲಿಲ್ಲ. ಯಾವಾಗಲೂ ಇಲ್ಲಿ ಪುರುಷರ ಜನಸಂಖ್ಯೆ (population) ಸ್ತ್ರೀ ಜನಸಂಖ್ಯೆಗಿಂತ ಹೆಚ್ಚಳ ಆದರೆ ನವೆಂಬರ್ ನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.